ಅಮುಂಜೆ : ಅಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಹಳೆ ವಿದ್ಯಾರ್ಥಿ ಸಂಘದ ಮಹಾ ಸಭೆಯು ಸೌಹಾರ್ದ ಸಂಘ ರಂಗಮಂದಿರದಲ್ಲಿ ಮಾ. 28ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಅಮುಂಜೆ ಗುತ್ತು ಡಾ ಎ. ಮಂಜಯ್ಯ ಶೆಟ್ಟಿಯವರು ವಹಿಸಿದ್ದರು.WhatsApp Image 2021-03-29 at 1.15.48 PM

ಸಭೆಯಲ್ಲಿ ಶಾಲೆಯ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಶಾಲಾ ಕಟ್ಟಡದ ಸುಸ್ಥಿತಿಗಾಗಿ ಶಾಲೆಗೆ ಬಣ್ಣ ಬಳಿಸುವುದೆಂದು ತೀರ್ಮಾನಿಸಲಾಯಿತು. ಕಂಪ್ಯೂಟರ್‍ನ ಉಸ್ತುವಾರಿಯನ್ನು ಜೊತೆ ಕಾರ್ಯದರ್ಶಿಯಾದ ಪ್ರಣಾಮ್‍ಗೆ ವಹಿಸುವುದೆಂದು ನಿರ್ಧರಿಸಲಾಯಿತು. ಮುಂದಿನ ಶೈಕ್ಷಣಿಕ ವರ್ಷದ ಆರಂಭದ ಜುಲೈ ತಿಂಗಳಿನಿಂದ ಅಗತ್ಯವಿರುವ ಶಿಕ್ಷಕರನ್ನು ನೇಮಕದ ವ್ಯವಸ್ಥೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಹಾಗೂ ಸಮಿತಿಯ ಮುಂದಿನ ಸಭೆಯನ್ನು ಎ 18 ಭಾನುವಾರ ನಡೆಸುವುದೆಂದು ತೀರ್ಮಾನಿಸಲಾಯಿತು.WhatsApp Image 2021-03-29 at 1.15.48 PM (1)

ಈ ಮಹಾಸಭೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮಿತಿಯನ್ನು ಪುನರ್ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಜೀವರಾಜ್ ಶೆಟ್ಟಿ, ಅಧ್ಯಕ್ಷರಾಗಿ ಚಂದ್ರಶೇಖರ ಭಂಡಾರಿ, ಉಪಾಧ್ಯಕ್ಷರಾಗಿ ಜನಾರ್ದನ ಬಾರಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಸತ್ಯಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಪ್ರಣಮ್, ಕೋಶಾಧಿಕಾರಿಯಾಗಿ ಪ್ರಶಾಂತ್ ಕುಲಾಲ್, ಕ್ರೀಡಾ ಕಾರ್ಯದರ್ಶಿಗಳಾಗಿ ಉದಯ್, ಉಸ್ಮಾನ್, ಕಾರ್ತಿಕ್, ಮನರಂಜನಾ ಕಾರ್ಯದರ್ಶಿಯಾಗಿ ಎಂ.ಬಿ. ಟೈಲರ್, ಗಂಗಯ್ಯ, ಲೆಕ್ಕಪರಿಶೋಧಕರಾಗಿ ಶ್ರೀಮತಿ ಲೀನಾಪಿಂಟೋ, ಹಾಗೂ ಸಲಹೆಗಾರರಾಗಿ ದೇವುದಾಸ್ ಹೆಗ್ಡೆ, ರಂಗನಾಥ್ ಶೆಟ್ಟಿ, ಅಬ್ದುಲ್ ಹಕೀಂ, ಅಬ್ದುಲ್ ಹಝೀಜ್ ಆಯ್ಕೆಯಾದರು.WhatsApp Image 2021-03-29 at 1.15.49 PM (1)

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನಾಸೀರ್ ಹೊಸನಗರ, ಅಬ್ದುಲ್ ಸಲೀಂ, ರೆಮ್ಹಾನ್, ಮಜೀದ್, ನವೀನ, ವಸಂತ ಮತ್ತು ಹರಿಶ್ಚಂದ್ರ, ಸಿದ್ದಿಕ್ ಆಯ್ಕೆಯಾದರು.ವೇದಿಕೆಯಲ್ಲಿ ಶಾಲಾ ಹಳೆವಿದ್ಯಾರ್ತಿಗಳ ಸಂಘದ ಅಧ್ಯಕ್ಷ ಅಮುಂಜೆ ಗುತ್ತು ದೇವದಾಸ್ ಹೆಗಡೆ, ಅಮುಂಜೆ ಗುತ್ತು ಎ. ರಂಗನಾಥ ಶೆಟ್ಟಿ, ಚಂದ್ರಶೇಖರ್ ಭಂಡಾರಿ, ಅಬ್ದುಲ್ ಬಸೀರ್, ಅಬ್ದುಲ್ ಹಕೀಂ, ಶಾಲಾ ಮುಖ್ಯೋಪಾಧ್ಯಾಯರಾದ ಲೀನಾ ಪಿಂಟೋ ಉಪಸ್ಥಿತರಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಭಾಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘವು ಶಾಲಾ ಅಭಿವೃದ್ಧಿಯಲ್ಲಿ ಸಾಧ್ಯವಾದಷ್ಟು ಸಹಕಾರ ನೀಡಬೇಕೆಂದರು.WhatsApp Image 2021-03-29 at 1.15.49 PM

ಶಾಲೆಯ ಎಲ್ಲ ಚಟುವಟಿಕೆ, ಕಾರ್ಯಕ್ರಮಗಳಿಗೆ ಮಕ್ಕಳ ಹೆತ್ತವರು, ಊರವರು, ಪೋಷಕರು, ಹಳೆ ವಿದ್ಯಾರ್ಥಿಗಳು ಹೀಗೆ ಎಲ್ಲರ ಪ್ರೋತ್ಸಾಹವಿದ್ದಲ್ಲಿ ಶಿಕ್ಷಣ ಸಂಸ್ಥೆ ಇನ್ನಷ್ಟು ಅಭಿವೃದ್ಧಿಯಾಗಲು ಸಾಧ್ಯ ಎಂದರು. ಕಾರ್ಯಕ್ರಮದ ಮೊದಲಿಗೆ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಶಾಲಾ ಅಧ್ಯಾಪಕರಾದ ಹರೀಶ್ ರಾವ್ ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಟ್ಟಿ ಧನ್ಯವಾದ ಸಲ್ಲಿಸಿದರು. ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *