ಶ್ರೀನಿವಾಸಪುರ : ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಬೀರ್ ಅಹ್ಮದ್ ಪಾಷ ಗೆಲವು ಸಾಧಿಸಿದ್ದಾರೆ. ತಾಲೂಕು ಕಸಬಾ ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ೧೨ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸಬೇಕಾಗಿತ್ತು ಆದರೆ ಸಾಲಗಾರರ ಕ್ಷೇತ್ರದಿಂದ ೧೧ ಮಂದಿ ಮಾ ೧೫ ರಂದು ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಾಲಗಾರರಲ್ಲದ ಒಂದು ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಶಬ್ಬೀರ್ ಅಹ್ಮದ್ ಪಾಷ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟೇಶಪ್ಪ ಆವರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯಿತು. ಭರ್ಜರಿ ಗೆಲುವು: ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು ೧೫೦ ಮತಗಳಲ್ಲಿ ೯೫ ಮತಗಳು ಚಲಾವಣೆಯಾಯಿತು .
ಇದರಲ್ಲಿ ಶಬೀರ್ ಅಹ್ಮದ್ ಪಾಷ ೮೭ ಮತ , ವೆಂಕಟೇಶಪ್ಪ ೮ ಮತ ಪಡೆದರು . ೮೭ ಮತ ಪಡೆದ ಶಬೀರ್ ಅಹ್ಮದ್ ಭರ್ಜರಿ ಗೆಲುವು ಸಾಧಿಸಿದರು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಅಭಿವೃದ್ಧಿ ಇಲಾಖೆಯ ಶಿವ ಶಂಕರ್ ಕಾರ್ಯ ನಿರ್ವಹಿಸಿದರು . ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರ ಆಲಂಬಗಿರಿ ಅಯ್ಯಪ್ಪ ಮಾತನಾಡಿ , ರೈತರ ಹಿತದೃಷ್ಟಿಯಿಂದ ಸೇವಾ ಭಾವನೆ ಯಲ್ಲಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶಬ್ಬೀರ್ ಅಹ್ಮದ್ ಅವರನ್ನು ಅಭಿನಂದಿಸಿದರು. ನಿರ್ದೇಶಕರಾದ ಬಿ.ವಿ ವೆಂಕಟರೆಡ್ಡಿ , ದ್ವಾರಸಂದ್ರ ನಾರಾಯಣಸ್ವಾಮಿ , ದ್ವಾರಸಂದ್ರ ಮುನಿವೆಂಕಟಪ್ಪ ಯಲವ ಗುಂಟೆ ಬೈರಾರೆಡ್ಡಿ ಶೆಟ್ಟಿಪಲ್ಲಿ ರಾಮಚಂದ್ರಪ್ಪ ಶಿವಪುರ ಗುರಪ್ಪ , ಮುಖಂಡರಾದ ಬಿ.ಲಕ್ಷ್ಮಣ ರೆಡ್ಡಿ , ಗೋಪಾಲ್ ರೆಡ್ಡಿ, ಗೌಣಿಪಲ್ಲಿ ಎಸ್ಸಾರ್ ಪೆಟ್ರೋಲ್ ಪಂಪ್ ಮಾಲೀಕ ನಯೀಮ್ ಖಾನ್, ಮುಜ್ಮೇಲ್ ಪಾಷಾ, ಮನನ್ ಪಾಷಾ, ಶ್ರೀನಿವಾಸ್ ಹಾಜರಿದ್ದರು.
