ಬಂಟ್ವಾಳ:ಇಲ್ಲಿನ ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ನಿವಾಸಿ, ಹಿರಿಯ ಕೃಷಿಕ ಲಾರೆನ್ಸ್ ರಾಡ್ರಿಗಸ್ (೮೮) ಇವರು ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ ಐವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಇದ್ದಾರೆ.4btl-Laurance Rodrigus

ಪ್ರಗತಿಪರ ಕೃಷಿಕರಾಗಿ, ಭತ್ತದ ಬೇಸಾಯ ಜೊತೆಗೆ ಬಂಟ್ವಾಳದಲ್ಲೇ ಪ್ರಥಮ ಬಾರಿಗೆ ಅಕ್ಕಿ ಮಿಲ್ ತೆರೆದಿದ್ದರು. ಮೊಡಂಕಾಪು ಚರ್ಚ್ ನ ಹಿರಿಯ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಾಗಿದ್ದರು. ಮೃತರ ಅಂತ್ಯಕ್ರಿಯೆ ಮೊಡಂಕಾಪು ಚರ್ಚ್ ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಲಿದೆ.ಮಾಜಿ ಸಚಿವ ಬಿ.ರಮಾನಾಥ ರೈ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್ ಸಂತಾಪ ವ್ಯಕ್ತ ಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *