ಕಲ್ಲಡ್ಕ: ಶ್ರೀ ರಾಮ ವಿದ್ಯಾಕೇಂದ್ರದ ಅಟಲ್ ಟೆಕ್ನಿಕಲ್ ಲ್ಯಾಬ್‌ನ ವತಿಯಿಂದ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡ ವಿದ್ಯಾಭಾರತಿ ಕ್ಷೇತ್ರೀಯ ಸಂಘಟನಾ ಕಾರ‍್ಯದರ್ಶಿ ಜಿ ಆರ್‌ಜಗದೀಶ್ರು ಮಾತನಾಡಿ ವಿಜ್ಞಾನ ದಿನಾಚರಣೆಯ ಮೂಲ ಚಿಂತನೆ ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಮೂಡಿಸುವುದು.
ವಿಜ್ಞಾನದಿಂದ ವಿದ್ಯಾರ್ಥಿಗಳ ಮಾನಸಿಕ ಸ್ರ್ಯರ್ಯ, ಆತ್ಮಬಲ ವೃದ್ಧಿಯಾಗಬೇಕು ಎಂದುಹೇಳಿದರು. ಕಾರ‍್ಯಕ್ರಮದಲ್ಲಿ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್‌ಎನ್, ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ವಸಂತ ಬಲ್ಲಾಳ್, ಶ್ರೀರಾಮ ಪ್ರೌಢಶಾಲಾ ವಿಭಾಗದ ಅಧ್ಯಾಪಕಿಯಾದ ಶಾಂಭವಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಂಶಿ ಹಾಗೂ ಶ್ರಮಿಕಾವಿಜ್ಞಾನ ದಿನದ ಮಹತ್ವದ ಬಗ್ಗೆ ಮಾತನಾಡಿದರು.

ವಿಜ್ಞಾನ ದಿನಾಚರಣೆಯ ಪ್ರಯುಕ್ತ ಪ್ರೌಢಶಾಲಾ ಹಾಗೂ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಪತ್ರವಾಚನ, ರಸಪ್ರಶ್ನೆ, ಗಣಿತ ಮತ್ತು ವಿಜ್ಞಾನ ಮಾದರಿ ಪ್ರದರ್ಶನ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಾದ ಅಮೃತಾ ಸ್ವಾಗತಿಸಿ, ಮಧುಶ್ರೀ ನಿರೂಪಿಸಿ, ವಿಂದ್ಯಾ ವಂದಿಸಿದರು.
