ಕೋಲಾರ: ಕ್ಯಾನ್ಸರ್ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದರೂ ಸಹ ದುರಾಭ್ಯಾಸಗಳನ್ನು ನಿಯಂತ್ರಿಸಲಾಗದೆ ನಿರ್ಲಕ್ಷಿಸುತ್ತಿರುವುದರಿಂದ ಈ ಕಾಯಿಲೆಗೆ ತುತ್ತಾಗುತ್ತಿರುವುದು ವಿಷಾದಾನೀಯ ಸಂಗತಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸೇಹ್ನ ಕಳವಳ ವ್ಯಕ್ತಪಡಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘ ಹಾಗೂ ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಚಿಕಿತ್ಸೆ ಕುರಿತ ಇತ್ತೀಚಿನ ಅವಿಷ್ಕಾರಗಳ ವಿಷಯಕ್ಕೆ ಸಂಬಂದಿಸಿದ ಸಂವಾದ ಕಾರ್ಯಕ್ರಮವನ್ನು ಉದ್ಯಾಟಿಸಿ ಅವರು ಮಾತನಾಡುತ್ತಿದ್ದರು.

ಪರಿಸರ ಹಾಳಾಗುತ್ತಿರುವ ಹಿನ್ನಲೆಯಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಹಲವು ರೂಪದಲ್ಲಿ ಯಾವೂದೇ ವಯಸ್ಸಿನವರಿಗೂ ಈ ಕಾಯಿಲೆ ಬರಲಿದೆ. ಹಲವು ದುರಾಭ್ಯಾಸಗಳಿಂದ ಮಾತ್ರ ಕ್ಯಾನ್ಸರ್ ಬರುತ್ತದೆ ಎಂಬುವುದರ ಜೂತೆಗೆ ಕೆಲವೊಂದು ಪದಾರ್ಥಗಳನ್ನು ಮಿತಿಮೀರಿ ಬಳಕೆಯಿಂದಲೂ ಈ ಕಾಯಿಲೆಗೆ ತುತ್ತಾಗುವ ಸಂಭವಿದೆ ಎಂದರು.ಮಣಿಪಾಲ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಆಶ್ವಿನ್ ರಾಜಗೋಪಾಲ್ ಮಾತನಾಡಿ, ಕ್ಯಾನ್ಸರ್ ಬಂದರೆ ವಾಸಿಯಾಗುವುದಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾಗಿದ್ದು ಇಂದಿನ ಅಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರಾರಂಭಿಕ ಹಂತದ ಕ್ಯಾನರ್‌ಗೂ ಚಿಕಿತ್ಸೆ ನೀಡಿ ವಾಸಿ ಮಾಡ ಬಲ್ಲ ನೂತನ ಅವಿಷ್ಕಾರಗಳಾಗಿದೆ.
ದೇಶದಲ್ಲಿ ಕ್ಯಾನ್ಸರ್ ರೋಗವು ಸಾಮಾನ್ಯ ಕಾಯಿಲೆಯಂತಾಗಿದೆ. ಕಳದ ೪ ವರ್ಷಗಳ ಹಿಂದೆ ಶೇ ೩೦೦ಕ್ಕೂ ಪ್ರಮಾಣದಲ್ಲಿ ಹರಡಿತ್ತು, ಯುವಜನತೆಯಲ್ಲಿ ಶೇ ೩.೪ ರಿಂದ ಶೇ ೬.೨೬ರಷ್ಟು ಪ್ರಮಾಣದಲ್ಲಿ ಹರಡಿತ್ತು.೨೦೧೮ರ ಗೋಬ್ಲಾಕನ್ ಪ್ರಕಾರ ಬಾರತದಲ್ಲಿ ೫೪,೫೩೮ ಯುವ ಜನರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ೩೦, ೨೮೬ ಮಂದಿ ಸಾವಿಗೀಡಾಗಿದ್ದರು. ಹಿರಿಯರ ಚಿಕಿತ್ಸೆಗೂ ಕಿರಿಯರ ಚಿಕಿತ್ಸೆಗಳು ವಿಭಿನ್ನವಾಗಿರುತ್ತದೆ ಎಂದರು.
ಈ ಹಿಂದೆ ಕ್ಯಾನ್ಸರ್ ಬಂದರೆ ಸಾವು ಯಾವಾಗ ಎಂಬ ಪ್ರಶ್ನೆ ಸಹಜವಾಗಿತ್ತು. ಕ್ಯಾನ್ಸರ್ ಯಾವೂದೇ ಲಕ್ಷಣಗಳು ಗೋಚರಿಸದೆ ಮನುಷ್ಯನನ್ನು ಅವರಿಸುವ ಸಂಭವವಿತ್ತು. ಅದರೆ ಇಂದಿನ ನೂತನ ಅವಿಷ್ಕಾರಗಳಿಂದ ಕ್ಯಾನರ್ ಯಾವೂದೇ ವಿಧದಲ್ಲಿದ್ದರೂ ಅದನ್ನು ಪತ್ತೆ ಹಚ್ಚಬಹುದಾದ ತಂತ್ರಜ್ಞಾನ ಸಂಶೋದಿಸಲಾಗಿದೆ ಎಂದರು.ಈ ಹಿಂದೆ ಸಾಮಾನ್ಯವಾಗಿ ಎಲೆಅಡಿಕೆ ತಂಬಾಕು, ಹೊಗೆಸೂಪ್ಪುಗಳ ಅತಿಯಾದ ಬಳಕೆಯಿಂದ ಬಾಯಿಯಲ್ಲಿ ಗಾಯಗಳಾಗುವ ಮೂಲಕ ಕ್ಯಾನ್ಸರ್ ಕಣ್ಣಿಗೆ ಕಾಣುತ್ತಿತ್ತು. ಮೈಯಲ್ಲಿ ಗಡ್ಡೆಗಳು ಇರುವ ಮೂಲಕ ಗೋಚರಿಸುತ್ತಿತ್ತು, ಮಹಿಳೆಯರಲ್ಲಿ ಸ್ತನ, ಗರ್ಭಕೋಶಗಳ್ಲಿ ಕ್ಯಾನ್ಸರ್ ಸಾಮಾನ್ಯ ಪ್ರಕರಣಗಳಾಗಿತ್ತು. ಇವುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಅರೈಕೆ ಮಾಡಲಾಗುತ್ತಿತ್ತು. ಇದಕ್ಕಾಗಿ ಹಲವು ದಿನಗಳು ಆಸ್ಪತ್ರೆಯಲ್ಲಿ ದಾಖಲಾಗ ಬೇಕಾಗಿತ್ತು ಎಂದರು.
ಅದರೆ ಪ್ರಸ್ತುತ ಕ್ಯಾನ್ಸರ್ ಚಿಕಿತ್ಸೆ ಇಂದು ಬೆಳಿಗ್ಗೆ ದಾಖಲಾಗಿ ಸಂಜೆ ಬಿಡುಗಡೆ ಹೊಂದಬಹುದಾಗಿದೆ ಅಂದರೆ ಇಂದಿನ ಅಧುನೀಕ ಚಿಕಿತ್ಸ ವಿಧಾನಗಳು ಸುಲಭವಾಗಿದೆ. ಹೊಟ್ಟೆಯೊಳಗಿನ ಲೀವರ್‌ಗೂ ಕ್ಯಾನ್ಸರ್ ಸೊಂಕಿದ್ದರೂ ಅಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಿಸಿ ಚಿಕಿತ್ಸೆ ನೀಡಿ ವಾಸಿ ಮಾಡಬಹುದಾಗಿದೆ ಎಂದು ಹೇಳಿದರು.ಕ್ಯಾನ್ಸರ್ ಸಾಮಾನ್ಯವಾಗಿ ನಾಲ್ಕು ಹಂತಗಳಲ್ಲಿ ಗುರುತಿಸಲಾಗಿದೆ. ಪ್ರಾರಂಭಿಕ ಒಂದನೇ ಹಂತದಲ್ಲಿ ಶೇ ೯೫ರಷ್ಟು, ಎರಡನೇ ಹಂತದಲ್ಲಿ ಶೇ ೮೦ರಷ್ಟು, ಮೂರನೇ ಹಂತದಲ್ಲಿ ಶೇ ೬೦ರಷ್ಟು ವಾಸಿ ಮಾಡಬಹುದಾಗಿದೆ. ನಾಲ್ಕನೆ ಹಂತದಲ್ಲಿ ವಾಸಿ ಮಾಡುವುದು ಕಷ್ಟಸಾಧ್ಯ. ಅದರೆ ನಿಯಂತ್ರಿಸಬಹುದಾಗಿದೆ. ಯಾವೂದೇ ಕಾಯಿಲೆ ಇದ್ದರೂ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ವಾಸಿ ಮಾಡಲು ಸುಲಭ, ವೆಚ್ಚಗಳು ಕಡಿಮೆಯಾಗಲಿದೆ ಎಂದು ತಿಳಿಸಿದರು.
ಕ್ಯಾನ್ಸರ್ ತಜ್ಞ ಡಾ. ಅಭಯ್ ಕುಮಾರ್ ಮಾತನಾಡಿ ಫೆ ೪ರಂದು ಕ್ಯಾನ್ಸರ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕ್ಯಾನ್ಸರ್ ನಿಯಂತ್ರಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೋಡಿಸಲು ವೈದ್ಯರೇ ಅಗಬೇಕೆಂದು ಇಲ್ಲ. ಸಾಮಾನ್ಯ ಜ್ಞಾನ ಇರುವವರು ಈ ಬಗ್ಗೆ ಅರಿವು ಮೋಡಿಸ ಬಹುದಾಗಿದೆ ಎಂದರು.ಕ್ಯಾನ್ಸರ್ ಮಾನವನ ಯಾವೂದೇ ಅಂಗಾಂಗಗಳಿಗೆ ಸೊಂಕುಂಟಾಗ ಬಹುದಾಗಿದೆ. ಅದಕ್ಕೆ ನಿರ್ದಿಷ್ಟವಾದ ಯಾವೂದೇ ಅಂಗಗಳಿಲ್ಲ.ಯಾವೂದೇ ಅಂಗದಲ್ಲಿ ಕ್ಯಾನ್ಸರ್ ಗೋಚರಿಸುವ ಸಾಧ್ಯತೆ ಇರುತ್ತದೆ. ರೋಗ ನಿರೋಧಕ ಕಣಗಳ ಉತ್ಪಾದನೆ ಸ್ಥಗಿತಗೊಂಡ ಜಾಗದಲ್ಲಿ ಕ್ಯಾನ್ಸರ್ ಗೋಚರಿಸುವ ಸಾಧ್ಯತೆ ಇರುತ್ತದೆ ಎಂದರು.
ಮಹಿಳೆಯರಲ್ಲಿ ಸ್ತನ, ಗರ್ಭಕೋಶ, ಎಲೆ ಅಡಿಕೆ ಬಳಿಸುವವರಲ್ಲಿ ಗಂಟಲು, ಬಾಯಿ, ಇತರರಲ್ಲಿ ಕೆಮ್ಮು, ವಾಂತಿ, ರಕ್ತಸ್ರವ, ಚರ್ಮ, ಮೈಯಲ್ಲಿ ಗಡ್ಡೆಗಳು, ಮುಂತಾದ ವಿಧದಲ್ಲಿ ಗೋಚರಿಸುವುದು, ಇದು ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದಲೂ ಬರುವ ಸಾಧ್ಯತೆಗಳಿರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕ್ಯಾನ್ಸರ್ ಬಹುರೂಪದ ಕಾರಣಗಳನ್ನು ಹೊಂದಿರುತ್ತದೆ ಸಮರ್ಪಕವಾದ ನಿದ್ರೆ ಇಲ್ಲದಿರುವುದು, ಅತಿಯಾದ ಮಾಂಸ ಆಹಾರ ಸೇವನೆ, ಸಂಸ್ಕರಣ ಗೊಂಡ ಆಹಾರ, ಜಡತ್ವ, ಒತ್ತಡ, ಮಾಲಿನ್ಯ ರಾಸಾಯಾನಿಕ ಬಳಕೆಗಳಿಂದ, ವಿದೇಶಿಯರ ಜೀವನ ಶೈಲಿಗಳಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ, ವಾಸಿಯಾಗದ ಗಾಯಗಳು, ದೀರ್ಘಕಾಲದಿಂದ ಇರುವ ಗಡ್ಡೆಗಳು.ಮೈ ಮೇಲಿನ ಮಚ್ಚೆಗಳು, ಕೆಮ್ಮು, ವಾಂತಿ ವಾಸಿಯಾಗದಿರುವುದು ಕ್ಯಾನ್ಸರ್ ಲಕ್ಷಣಗಳಾಗಿದೆ ಎಂದರು.
ಭಾರತದಲ್ಲಿ ಪ್ರಸ್ತುತ ೧೧ ಲಕ್ಷ ಮಂದಿಯಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ೭ ಲಕ್ಷ ಮಂದಿ ಕ್ಯಾನ್ಸರ್‌ನಿಂದ ಸಾವನ್ನಾಪ್ಪಿದ್ದಾರೆ. ಪ್ರತಿವರ್ಷ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ. ೨೦೨೫ಕ್ಕೆ ಶೇ ೧೨ರಷ್ಟು ಮಂದಿಯಲ್ಲಿ ಕ್ಯಾನ್ಸರ್ ಗೋಚರಿಸಲಿದ್ದು, ೨೦೪೦ಕ್ಕೆ ಕ್ಯಾನ್ಸರ್ ಪ್ರಮಾಣ ದುಪ್ಪಟ್ಟು ಅಗಲಿದೆ ಎಂದು ಹೇಳಿದರು.ಎಲ್ಲಾ ಕ್ಯಾನ್ಸರ್‌ಗಳಿಂದ ಸಾವು ಸಂಭವಿಸುವುದಿಲ್ಲ. ಕ್ಯಾನ್ಸರ್‌ಗೆ ಒಳಗಾದವರು ಸುಮಾರು ೨೦ ವರ್ಷಗಳಿಂದ ಜೀವಂತವಾಗಿದ್ದಾರೆ. ಕೆಲವೊಂದು ಕ್ಯಾನ್ಸರ್‌ಗಳಿಂದ ಮಾತ್ರ ಸಾವು,ನೋವುಗಳು ಬರುತ್ತದೆ. ಕ್ಯಾನ್ಸರ್‌ನಲ್ಲಿ ಎರಡು ವಿಧದಲ್ಲಿ ಗೋಚರಿಸಲಿದೆ. ಒಂದು ಕಣ್ಣಿಗೆ ಕಾಣುವುದು, ಮತ್ತೊಂದು ಕಾಣದೇ ಇರುವುದು ಅಂದರೆ ದೇಹದೊಳಗೆ ಇರುವ ಕ್ಯಾನ್ಸರ್ ಎಂದು ವಿವರಿಸಿದರು.
ಮಹಿಳೆಯರು ಮಕ್ಕಳಿಗೆ ಸಾಮಾನ್ಯವಾಗಿ ಹಾಲು ಕೊಡದ ಕಾರಣಕ್ಕೆ ಸ್ತನಗಳಲ್ಲಿ ಕ್ಯಾನ್ಸರ್ ಗೋಚರಿಸುತ್ತದೆ. ಕೇವಲ ೩-೪ ತಿಂಗಳು ಮಾತ್ರ ಮಕ್ಕಳಿಗೆ ಹಾಲು ಉಣಿಸಿ ಒತ್ತಡದ ಕಾರಣಕ್ಕೂ ಅಥಾವ ತಮ್ಮ ದೇಹದ ಸೌಂದರ್ಯಕ್ಕೆ ದಕ್ಕೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಮಕ್ಕಳಿಗೆ ಕೃತಕ ಹಾಲು ನೀಡುತ್ತಾರೆ,ಇದರಿಂದ ಮುಂದಿನ ದಿನಗಳಲ್ಲಿ ಅವರು ಸ್ತನ ಕ್ಯಾನ್ಸರ್ ಸೊಂಕಿಗೆ ತುತ್ತಾಗುವ ಸಂಭವ ಇರುತ್ತದೆ ಎಂದು ತಿಳಿಸಿದರು.
ಧೂಮಪಾನ, ಗುಟ್ಕ, ಜರದಾ ಅಲ್ಲದೆ ಮಾದಕ ಪದಾರ್ಥಗಳ ಸೇವನೆಯಿಂದಲೂ ಕ್ಯಾನ್ಸರ್ ರೋಗ ಉಂಟಾಗುವ ಸಂಭವ ಇರುತ್ತದೆ. ಇವೆಲ್ಲಾವು ಕ್ಯಾನ್ಸರ್ ಸೇರಿದಂತೆ ಮಾರಕವಾದ ರೋಗಗಳಿಗೆ ಆಹ್ವಾನಿಸುವಂತ ದುರಾಭ್ಯಾಸಗಳಾಗಿದೆ. ಸರ್ಕಾರವು ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಉಂಟು ಮಾಡಲು ಅನೇಕ ಯೋಜನೆಗಳು ರೂಪಿಸಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಸಹ ಸಾರ್ವಜನಿಕರು ಇಂಥಹ ಪಿಡುಗುಗಳಿಗೆ ಬಲಿಯಾಗುತ್ತಿರುವುದು ವಿಷಾಧಾನಿಯವಾಗಿದೆ ಎಂದರು.
ಪ್ರಸ್ತುತ ಕೋವಿಡ್-೧೯ ನಿಂದಾಗಿ ಸಾರ್ವಜನಿಕರು ಆಸ್ಪತ್ರೆಗೆ ಬರಲು ಹೆದರುವಂತಾಗಿದೆ. ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಸಂಪೂರ್ಣವಾಗಿ ದೈಹಿಕವಾಗಿ ತಪಾಸಣೆಗೆ ಒಳಪಡಬೇಕು ಕ್ರೀಡೆಗಳು, ಯೋಗ, ಚಟುವಟಿಕೆಗಳಲ್ಲಿ ತೊಡಗ ಬೇಕು. ಆಹಾರ ಸೇವನೆಯಲ್ಲಿ ಕ್ರಮ ಬದ್ದತೆಗಳನ್ನು ಪಾಲಿಸ ಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯಗಳ ಕಡೆಯು ಗಮನ ಹರಿಸುವುದು ಸೂಕ್ತ ಯಾವೂದೇ ಕಾಯಿಲೆಯನ್ನು ಪ್ರಾರಂಭಿಕ ಹಂತೆದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ವಾಸಿ ಮಾಡಲು ಸಾಧ್ಯ, ಏನೊಂದು ಕಾಯಿಲೆ ಇಲ್ಲದಿದ್ದರೂ ಆಗಾಗ್ಗೆ ತಪಾಸಣೆ ಮಾಡಿಸಿ ಕೊಳ್ಳುವುದು ಮುಂಜಾಗೃತೆ ದೆಸೆಯಲ್ಲಿ ಎಚ್ಚರವಹಿಸುವುದು ಸೂಕ್ತ ಎಂದು ಕಿವಿ ಮಾತು ಹೇಳಿದರು.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಉತ್ತಮವಾದ ಸೌಲಭ್ಯಗಳನ್ನು ಹೊಂದಿದೆ. ಗುಣಮಟ್ಟದ ತಜ್ಞರನ್ನು ಹೊಂದಿದೆ. ದೇಶದಾದ್ಯಂತ ಮಣಿಪಾಲ್ ಆಸ್ಪತ್ರೆ ತನ್ನ ಕೇಂದ್ರಗಳನ್ನು ಹೊಂದಿದ್ದು ಉತ್ತಮವಾದ ಸೇವೆ ಸಲ್ಲಿಸುತ್ತಿದೆ ಎಂದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್ ಸ್ವಾಗತಿಸಿದರು. ಖಜಾಂಚಿ ಎ.ಜಿ ಸುರೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
