ಮಂಗಳೂರು: ಸಂಜನಾ ಚಲವಾದಿ ಅವರು ಮಂಗಳೂರು ದಕ್ಷಿಣ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹುದ್ದೆ ಅಲಂಕರಿಸಿದ ಮೊದಲ ಮಂಗಳಮುಖಿ. ಅಧ್ಯಕ್ಷರಾಗಿ ಶಿವ, ಉಪಾಧ್ಯಕ್ಷರಾಗಿ ಸೋಹನ್‌, ದೀಕ್ಷಿತ್‌ ಪೂಜಾರಿ ಮತ್ತು ದಕ್ಷಿಣ ಬ್ಲಾಕ್‌ ಪ್ರಧಾನ ಕಾರ್ಯದರ್ಶಿಯಾಗಿ ಸಂಜನಾ ಚಲವಾದಿ ಆಯ್ಕೆಯಾಗಿದ್ದಾರೆ.download (1)
ನಾನು ಯೂತ್ ಕಾಂಗ್ರೆಸ್ ಸೌತ್ ಬ್ಲಾಕ್ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದೇನೆ ಎಂದು ಅಧ್ಯಕ್ಷರಿಂದ ಸುದ್ದಿ ಕೇಳಿ ನನಗೆ ತುಂಬಾ ಸಂತೋಷವಾಗಿದೆ. ನಾನು ಬ್ಯೂಟಿಷಿಯನ್ ಕೋರ್ಸ್ ಮುಗಿಸಿದ್ದೇನೆ ಮತ್ತು ಈಗ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲರ ಸಹಾಯ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಂಜನಾ ತಿಳಿಸಿದ್ದಾರೆ. 2018ರಲ್ಲಿ ನಡೆದ ಪರಿವರ್ತನ್ ಟ್ರಾನ್ಸ್ ಕ್ವೀನ್ ಬ್ಯೂಟಿ ಸ್ಪರ್ಧೇಯಲ್ಲಿ ಸಂಜನಾ ವಿಜೇತರಾಗಿದ್ದರು.

By Suddi9

Leave a Reply

Your email address will not be published. Required fields are marked *