ಕೈಕಂಬ: ರೋಸಾಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯ ಅಮೃತ ಸಂಭ್ರಮವು ಫೆ.೫ರಂದು ಶುಕ್ರವಾರ ರೋಸಾಮಿಸ್ತಿಕಾ ಸಭಾಂಗಣದಲ್ಲಿ ನೆರವೇರಿತು. ಗ್ರಾಮೀಣ ಪ್ರದೇಶದ ದೀನದಲಿತ ಹೆಣ್ಣುಮಕ್ಕಳ ಉದ್ದಾರಕ್ಕಾಗಿ ಶ್ರಮಿಸಿದ ದೇವರ ಸೇವಕ ೧೯ನೇ ಶತಮಾನದ ಶ್ರೇಷ್ಟ ಸಾಧಕರು ಶೈಕ್ಷಣಿಕತಜ್ಞರು , ಭೆಥನಿ ಸಂಸ್ಥೆಯ ಸಂಸ್ಥಾಪಕರಾದ ವಂ. ಫಾ.ರೈಮಂಡ್ ಕಾಮಿಲಸ್ ಮಸ್ಕರೇನ್ಹಸ್ ರವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಮಾತೆ ಮರಿಯಮ್ಮನವರ ಅನುಗ್ರಹದ ಹೆಸರನ್ನೇ ಪಡೆದಿದೆ.
ಅಧ್ಯಕ್ಷತೆಯನ್ನು ಬೆಥನಿ ಸಂಸ್ಥೆಯ ವಂ.ಭ.ರೋಸ್ ಸೆಲಿನ್ ವಹಿಸಿ ಮಾತನಾಡಿದ ಅವರು ಸ್ಥಾಪಕರಕನಸನ್ನು ನನಸಾಗಿಸುವಲ್ಲಿರೋಸಾ ಮಿಸ್ತಿಕ ಶಿಕ್ಷಕಿಯರ ತರಬೇತಿ ಸಂಸ್ಥೆಯು ಯಶಸ್ವಿಯಾಗಿದೆ ಎಂದರು. ಸಂಸ್ಥೆಯಲ್ಲಿಕಲಿತ ಸಾವಿರಾರು ಶಿಕ್ಷಕಿಯರು ಭಾರತದ್ಯಾಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ನೀಡಿ ಭೆಥನಿ ಸಂಸ್ಥೆಯ ಕನಸನ್ನು ಸಕಾರಗೊಳಿಸಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ವಂ.ಭ.ಸಿಸಿಲ್ಯಾ ಮೆಂಡೊನ್ಸಾ ಪ್ರಾಂತ್ಯಾಧಿಕಾರಿಣಿ ಮಂಗಳೂರು, ಶಿಕ್ಷಕಿ ವೃತ್ತಿಯ ಪವಿತ್ರತೆಯನ್ನುಎತ್ತಿ ಹಿಡಿದ ಪ್ರಾಂಶುಪಾಲರು, ಉಪನ್ಯಾಸಕರು, ಕಛೇರಿ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಶಿಕ್ಷಕಿಯರ ಸಹಕಾರವನ್ನು ಸ್ಮರಿಸಿದರು.

ಅಮೃತ ಸಂಭ್ರಮ ಸಂಚಿಕೆ ‘ಸುವಾಸಿನಿ’ಯನ್ನು ಪೊಂಪೈ ಚರ್ಚ್ನ ಧರ್ಮಗುರುಗಳಾದ ವಂ.ಫಾ. ಆಂಟನಿ ಲೋಬೊರವರು ಅನಾವರಣಗೊಳಿಸಿ ವಿದ್ಯಾದಾನದ ಮಹತ್ವವನ್ನು ಸಾರಿ ಹೇಳುವುದರ ಮೂಲಕ ಮಾನವೀಯ ಮೌಲ್ಯಗಳ ಸಮಾಜವನ್ನು ಬೆಳೆಸೋಣ ಎಂಬ ಸಂದೇಶವನ್ನು ನೀಡಿದರು.
ಅತಿಥಿಗಳಾದ ಮಲ್ಲೇಸ್ವಾಮಿಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರಭಾರ ಪ್ರಾಂಶುಪಾಲರು ಹಾಗೂ ಉಪನಿರ್ದೇಕರು ಡಯಟ್ ಮಂಗಳೂರು ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿ, ಹೆಣ್ಣು ಮಕ್ಕಳು ಯಾವುದೇ ಸಮಸ್ಸೆಗಳಿಗೆ ಎದೆಗುಂದದೆ, ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಿ ಸಬಲರಾಗಿ ಬಾಳಬೇಕು. ಅ ಮೂಲಕ ಸಮಜಕ್ಕೆಉತ್ತಮಕೊಡುಗೆಯನ್ನು ನೀಡಬೇಕು ಎಂದರು.

ಕ್ರಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಲವೀನ ಲೋಬೊ ಇವರು ಸಂಸ್ಥೆಯ ೭೫ ವರ್ಷಗಳ ಸಚಿತ್ರ ವರದಿಯನ್ನು ಮಂಡಿಸಿದರು.ಸಂಸ್ಥೆಯ ಸಂಚಾಲಕರಾದ ವಂ.ಭ.ಮಾರಿಬೆಲ್‌ರವರು ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬೆಥನಿ ಸಂಸ್ಥೆಯ ಮಹಾಮಾತೆ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಅಧ್ಯಕ್ಷರು ವಂ.ಭ.ರೋಸ್ ಸೆಲಿನ್ ಸಂಸ್ಥೆಯ ಪ್ರಸ್ತುತ ಪ್ರಾಂಶುಪಾಲರಾದ ಲವೀನ ಲೋಬೊ, ಹಳೆ ವಿದ್ಯಾರ್ಥಿ ಸುಲೋಚನ ಭಟ್ ಇವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸಂಸ್ಥೆಯ ಉಪನ್ಯಾಸಕಿ ಜಾಸ್ಮಿನ್ ಮೊರಾಸ್ ಸನ್ಮಾನಿತರ ಕಿರು ಪರಿಚಯ ನೀಡಿದರು. ಸಂಸ್ಥೆಯ ಉಪನ್ಯಾಸಕಿ ವೀಣಾ ಬೆನ್ನಿಸ್ ವಂದಿಸಿ.ಉಪನ್ಯಾಸ ರೋನಾಲ್ಡ್ಕಾರ್ಲೊ ಕಾರ್ಯಕ್ರವನ್ನು ನಿರ್ವಹಿಸಿದರು.
