ಕೈಕಂಬ : ಇಪ್ಪತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ಗುರುಪುರ ಮಠದಬೈಲು ಹತ್ತು ಸಮಸ್ತರ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟಕ್ಕೆ ಮರು ಚಾಲನೆ ನೀಡುವ ನಿಟ್ಟಿನಲ್ಲಿ ರಚನೆಗೊಂಡಿರುವ ಕಟೀಲು ಯಕ್ಷಗಾನ ಸೇವಾ ಸಮಿತಿಯು ಭಾನುವಾರ ಗುರುಪುರ ಜಲ್ಲಿಗುಡ್ಡೆಯ ಜೇಸಿ ಕ್ಲಬ್‌ನಲ್ಲಿ ಸಭೆ ಸೇರಿ ಎಪ್ರಿಲ್ ೪ರಂದು ಯಕ್ಷಗಾನ ನಡೆಸಲು ನಿರ್ಧರಿಸಿತು.gur-jan-24-sabhe-2

ಸಮಿತಿಯ ಅಧ್ಯಕ್ಷ ಸಚಿನ ಅಡಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪದಾಧಿಕಾರಿಗಳಾದ ಜಿ ಎಂ ಉದಯ ಭಟ್, ಸುನಿಲ್ ಕುಮಾರ್, ಸದಾಶಿವ ಶೆಟ್ಟಿ ಕೆ, ಮಾಧವ ಕಾವ, ವರದರಾಜ ಶೆಟ್ಟಿ ಉಪ್ಪುಗೂಡು, ಗುರುವಪ್ಪ ಪೂಜಾರಿ ಕೆದುಬರಿ, ಪುರಂದರ ಮಲ್ಲಿ ದೋಣಿಂಜೆಗುತ್ತು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಯಕ್ಷಗಾನದಂಗವಾಗಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆ, ಪಾರ್ಕಿಂಗ್, ಅಡುಗೆ ಮತ್ತು ವಿದ್ಯುತ್ ವ್ಯವಸ್ಥೆ, ಪ್ರಚಾರ ಇವೇ ಮೊದಲಾದ ಕೆಲಸಗಳಿಗೆ ಸಮಿತಿ ರಚಿಸಲಾಯಿತು. ಸಭೆಯಲ್ಲಿ ಸಮಿತಿ ಸದಸ್ಯರಿಂದ ಕೆಲವು ಮಹತ್ವದ ಸಲಹೆ-ಸೂಚನೆ ವ್ಯಕ್ತವಾಯಿತು. ಕೋಶಾಧಿಕಾರಿ ಗಣೇಶ್ ಕೊಟ್ಟಾರಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *