ಕೈಕಂಬ:ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಎಂಎಇಎಫ್)ದ ಅಧ್ಯಕ್ಷ, ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿರುವ ಎಡಪದವು ಮುಹಮ್ಮದ್ ಬ್ಯಾರಿ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಶನಿವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. gur-jan-16-muhammad biary

ಮೂಲತಃ ಎಡಪದವು ಹಾಗು ಸದ್ಯ ಮಂಗಳೂರು ನಿವಾಸಿಯಾಗಿದ್ದ ಮುಹಮ್ಮದ್ ಬ್ಯಾರಿ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ದಿಲ್ಲಿ ಸಹಿತ ದೇಶದ ವಿವಿಧೆಡೆ ಸೇವೆ ಸಲ್ಲಿಸಿದವರು. ಅಲ್ಲಿಂದ ಸ್ವಯಂ ನಿವೃತ್ತಿ ಪಡೆದ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಎಡಪದವಿನಲ್ಲಿ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದವರು.

ದ.ಕ, ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿ, ಎಡಪದವು ಉಮ್ಮುಹಾತುಲ್ ಮುಮಿನೀನ್ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಎಡಪದವು ಪರಿಸರದಲ್ಲಿ ಎಲ್ಲ ಸಮುದಾಯಗಳ ನಡುವಿನ ಸೌಹಾರ್ದ ಕೊಂಡಿಯಾಗಿದ್ದರು.

ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

“ಇದು ಆಘಾತಕಾರಿ ಸುದ್ದಿ. ಬಿ.ಎ. ಮೊಹಿದಿನ್ ಸಾಹೇಬರ ನಿಧನದ ಬಳಿಕ ಮುಸ್ಲಿಂ ಸಮುದಾಯದ ಪಾಲಿಗೆ ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಕೆಲಸ ಮಾಡಿದವರು ವೈ. ಮುಹಮ್ಮದ್ ಬ್ಯಾರಿ. ಅವರ ನಿಧನ ಮುಸ್ಲಿಂ ಸಮುದಾಯಕ್ಕೆ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ (ಎಂ ಇ ಐ ಎಫ್) ತುಂಬಲಾರದ ನಷ್ಟ” ಎಂದು ಒಕ್ಕೂಟದ ಗೌರವಾಧ್ಯಕ್ಷ ಉಮರ್ ಟೀಕೆ ಹೇಳಿದ್ದಾರೆ.

By Suddi9

Leave a Reply

Your email address will not be published. Required fields are marked *