ಶ್ರೀನಿವಾಸಪುರ: ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆಯುವುದರ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಕೊಚ್ಚಿನ್‍ನ ಗೇರು ಮತ್ತು ಕೊಕೊ ನಿರ್ದೇಶನಾಲಯದ ನಿರ್ದೇಶಕ ಡಾ. ಎನ್.ವೆಂಕಟೇಶ್ ಹುಬ್ಬಳ್ಳಿ ಸಲಹೆ ಮಾಡಿದರು.

ತಾಲ್ಲೂಕಿನ ಹೊಗಳಗೆರೆ ತೋಟಗಾರಿಕಾ ಕ್ಷೇತ್ರದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೊಚ್ಚಿನ್‍ನ ಗೇರು ಮತ್ತು ಕೊಕೊ ನಿರ್ದೇಶನಾಲಯ ಹಾಗೂ ಸ್ಥಳೀಯ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗೇರು ಬೆಳೆಯ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ದೇಶದ 20 ರಾಜ್ಯಗಳಲ್ಲಿ 11 ಲಕ್ಷ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋಡಂಬಿ ಬೆಳೆಯಲಾಗುತ್ತಿದೆ. 7.50 ಲಕ್ಷ ಮೆಟ್ರಿಕ್ ಟನ್ ಗೋಡಂಬಿ ಉತ್ಪಾದಿಸಲಾಗುತ್ತಿದೆ. ಆದರೆ ದೇಶದಲ್ಲಿ 16 ಲಕ್ಷ ಮೆಟ್ರಿಕ್ ಟನ್ ಗೋಡಂಬಿಗೆ ಬೇಡಿಕೆ ಇದೆ. ಕೊರತೆ ಇರುವ ಪ್ರಮಾಣದ ಗೋಡಂಬಿಯನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ರೂ.8800 ಕೋಟಿ ಬೆಲೆಯ ಗೋಡಂಬಿಯನ್ನು ಹೊರ ದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಲಾಲ್‍ಬಾಗ್‍ನ ಜಂಟಿ ತೋಟಗಾರಿಕಾ ನಿರ್ದೇಶಕ ಡಾ. ಬಿ.ಎನ್.ಪ್ರಸಾದ್ ಮಾತನಾಡಿ, ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಗೊಂಡಂಬಿ ಬೆಳೆ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸೌ¯ಭ್ಯ ಪಡೆದುಕೊಳ್ಳಬಹುದು. ಗೋಡಂಬಿ ಬೆಳೆಯಲು ಹೆಕ್ಟೇರ್ ಒಂದಕ್ಕೆ ರೂ.75 ಸಾವಿರ ಅನುದಾನ ಸಿಗುತ್ತದೆ. ಈ ಹಣವನ್ನು ಹಂತ ಹಂತವಾಗಿ ವಾರ್ಷಿಕ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿಷ್ಟುವರ್ಧನ, ಡಾ. ಆರ್.ಕೆ.ರಾಮಚಂದ್ರ, ಬಿ.ಎನ್.ರಾಜೇಂದ್ರ, ಡಾ. ಎನ್.ಅಶ್ವತ್ಥನಾರಾಯಣರೆಡ್ಡಿ, ಜಿ.ಆಂಜನೇಯರೆಡ್ಡಿ, ಎಮ್.ರಮೇಶ್, ಕೆ.ಪೊಟ್ಟಪ್ಪ, ಟಿ.ಸುಬ್ರಮಣ್ಯಂ ಕ್ರಮವಾಗಿ, ಗೇರು ಬೆಳೆಯಲ್ಲಿ ಸಸ್ಯಾಭಿವೃದ್ಧಿ, ಸಂಕರಣ ಹಾಗೂ ಸೂಕ್ತ ತಳಿಗಳು, ಗೇರು ಬೆಳೆಯ ಸಮಗ್ರ ತಂತ್ರಜ್ಞಾನ, ಗೇರು ಬೆಳೆಯಲ್ಲಿ ಸಸ್ಯ ಸಂರಕ್ಷಣೆ, ಕೊಯ್ಲೋತ್ತರ ತಂತ್ರಜ್ಞಾನ, ಸಂರಕ್ಷಣೆ ಮತ್ತು ಮಾರುಕಟ್ಟೆ ಕುರಿತು ಮಾತನಾಡಿದರು.ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.
ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಎ.ಬೈರೆಡ್ಡಿ, ಎಂ.ಶ್ರೀನಿವಾಸ್, ಪ್ರಗತಿಪರ ರೈತರಾದ ಎನ್.ರಾಜಣ್ಣ, ನಾರಾಯಣಸ್ವಾಮಿ, ವೈ.ವಿ.ಅಮರನಾಥ್ ಇದ್ದರು.
ಸ್ಥಳೀಯ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ಅವರ ನೇತೃತ್ವದಲ್ಲಿ ರೈತರಿಗೆ ಗೋಡಂಬಿ ಸಸಿಗಳನ್ನು ವಿತರಿಸಲಾಯಿತು. ಗೊಡಂಬಿ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.

2
ಶ್ರೀನಿವಾಸಪುರದ ವೆಂಕಟೇಶ್ವರ ಬಡಾವಣೆಯಲ್ಲಿ ಪುರಸಭೆ ವತಿಯಿಂದ ಹೊಸದಾಗಿ ನಿರ್ಮಿಸಲಾಗಿರುವ ಕೊಳವೆ ಬಾವಿಯನ್ನು ಸ್ಥಳೀಯ ಮುಖಂಡರಾದ ಶ್ರೀನಿವಾಸರೆಡ್ಡಿ, ಈರುಳ್ಳಿ ರಂಗಪ್ಪ, ಸುರೇಂದ್ರ, ಶ್ರೀನಾಥ್, ಬಾಬು ಪರಿಶೀಲಿಸಿದರು.

By Suddi9 Author

Suddi9

Leave a Reply

Your email address will not be published. Required fields are marked *