ಮೂಡುಬಿದಿರೆ: ವಿವಿಧ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕರಾವಳಿಯ ನಲಿಕೆ , ಪರವ ಸಮುದಾಯಗಳ ಕಲಾವಿದರ ಸಮೀಕ್ಷೆಯನ್ನು ಮೂಡುಬಿದಿರೆ ತಾಲೂಕು ನಲಿಕೆಯವರ ಸಂಘದ ವತಿಯಿಂದ ನಡೆಸಲಾಗಿದೆ.

ಇನ್ನೂರು ಮಂದಿ ದೈವಾರಾಧನೆ ಕಲಾವಿದರ ಪಟ್ಟಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್ಸಾರ್ ಅವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ನಲಿಕೆಯವರ ಸಂಘದ ಅಧ್ಯಕ್ಷ ಎನ್. ಕೆ. ಸಾಲ್ಯಾನ್ ಮಾರೂರು, ತಾಲೂಕು ಯುವ ಘಟಕದ ಕೋಶಾಧಿಕಾರಿ ದಿನೇಶ್. ಪಿ ಇರುವೈಲು ಪದವು, ಮೂಡಬಿದಿರೆ ತಾಲೂಕು ಸಂಘದ ಪ್ರಮುಖರಾದ ಚೆನ್ನ ವಾಲ್ಪಾಡಿ , ಪದ್ಮನಾಭ ವಾಲ್ಪಾಡಿ ಉಪಸ್ಥಿತರಿದ್ದರು.

By Suddi9 Author

Suddi9

Leave a Reply

Your email address will not be published. Required fields are marked *