ಕೈಕಂಬ: ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್ ,ಅಡ್ಡೂರು ಶ್ರೀ ದೇವಿ ಕ್ಲಿನಿಕ್, ಮೆಡಿಕ್ವೆಸ್ಟ್  ಹೆಲ್ತ್ ಕೇರ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ರಕ್ತ ಪರೀಕ್ಷೆ ಹಾಗೂ ಹಿಮೋಗ್ಲೋಬಿನ್ ರಕ್ತ ಪರೀಕ್ಷೆ ಲಿವರ್ ಕಿಡ್ನಿ ಹಾಗೂ ಕೊಲೆಸ್ಟಾಲ್ ( ಬೊಜ್ಜುಗೆ ಸಂಭಂಧಪಟ್ಟ ರಕ್ತ ಪರೀಕ್ಷೆಯ ತಪಾಸಣೆಯು ಅಡ್ಡೂರು ಶ್ರೀ ದೇವಿ ಕ್ಲಿನಿಕ್ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಜ.೮ರಂದು ಶುಕ್ರವಾರ ನಡೆಯಿತು.

8 clinck 6

8clinic 1
ಕಾರ್ಯಕ್ರಮವನ್ನು ಲಯನ್ ಮೋಹನದಾಸ್ ಶೆಟ್ಟಿ ಎಮ್ ಜೆ.ಎಫ್ ಉದ್ಘಾಟಿಸಿ ಶುಭ ಹಾರೈಸಿದರು ಅಡ್ಡೂರು ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆಯಲು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ಅಧ್ಯಕ್ಷ ಜಿಕೆ ಹರಿಪ್ರಸಾದ್ ರೈ ಕಾರಮೊಗರು ವಹಿಸಿದ್ದರು.8-clinic 9v

8vp helth chekop

8-3 clinic 4
ಮುಖ್ಯ ಅತಿಥಿಗಳಾಗಿ ಡಾ. ಸಿದ್ದೀಕ್ ಅಡ್ಡೂರು, ಡಾ. ದೀಪ ರೈ, ಅಡ್ಡೂರು ಜುಮ್ಮಾ ಮಸೀದಿ ಅಧ್ಯಕ್ಷ ಅಹಮ್ಮದ್ ಬಾವ, ಶರತ್ ಭಂಡಾರಿ, ಗಣಪ ನಾಯ್ಕ್ ,ಸುಸೀಲ ಭಂಡಾರಿ ,ಮೆಡಿಕ್ವೆಸ್ಟ್ ಹೆಲ್ತ್ ಕೇರ್ ಇದರ ಪಾಲುದಾರರಾದ ರಾಘವೇಂದ್ರ ಗಂಗೋಲಿ ಹಾಗೂ ಗೌತಮ್, ಉಪಸ್ಥಿತರಿದ್ದರು. ಶ್ರೀ ದೇವಿ ಕ್ಲಿನಿಕ್ ಇದರ ಡಾ. ಪುಷ್ಪಲತಾ ಸ್ವಾಗತಿಸಿ ಗೌತಮ್ ವಂದಿಸಿದರು.

8 clinic 2

By Suddi9

Leave a Reply

Your email address will not be published. Required fields are marked *