ಮುಂಬಯಿ: (ಆರ್‌ಬಿಐ), ಡಿ.೨೮: ಇತಿಹಾಸ ಪ್ರಸಿದ್ದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪವಿತ್ರ‍್ಯತಾ ಸನ್ನಿಧಾನವಾಗಿದೆ. ನಾಗಾರಾಧನೆಗೆ ಅತ್ಯಂತ ಮಹತ್ವವುಳ್ಳ ಈ ಕ್ಷೇತ್ರದ ಜೀರ್ಣೋದ್ದಾರದ ಪರ್ವಕಾಲದಲ್ಲಿ ಅರ್ಹ ಭಕ್ತರು ಈ ಅವಕಾಶ ಬಳಸಿಕೊಂಡು ಕ್ಷೇತ್ರದ ಪುನರ್‌ನಿರ್ಮಾಣ ಮಾಡಬೇಕಾಗಿದೆ. ಆದ್ದರಿಂದಲೇ ಈ ಕ್ಷೇತ್ರದ ಮತ್ತು ನಾಡಿನ ಪುನರುಸ್ಥಾನ ಸಾಧ್ಯ. ಶ್ರೀ ಸುಬ್ರಹ್ಮಣ್ಯ ದೇವರ ಇಚ್ಚೆಯಂತೆ ಉತ್ಸವ ಸಮಯದಲ್ಲಿ ಭೋಜನಶಾಲೆಯ ಸಮರ್ಪಣಾ ಸಮಾರಂಭ ನಡೆದಿರುವುದು ಜೀರ್ಣೋದ್ದಾರ ಯಶಸ್ವಿಯಾಗಿ ನಡೆಯುವ ಶುಭ ಸೂಚನೆಯಾಗಿದೆ ಎಂದು ವೇ| ಮೂ| ಗೋಪಾಲಕೃಷ್ಣ ತಂತ್ರಿ ಶಿಬರೂರು ನುಡಿದರು.DSC03813

ಹಳೆಯಂಗಡಿ ತೋಕೂರು ಇಲ್ಲಿನ ಶ್ರಿçà ಸುಬ್ರಹ್ಮಣ್ಯ ಸಭಾಭವನದಲ್ಲಿ ಇತ್ತೀಚೆಗೆ ಭೋಜನಶಾಲಾ ಸಮರ್ಪಣಾ ಸಮಾರಂಭದಲ್ಲಿ ಶುಭಾಶಂಸನೆಗೈದು ಗೋಪಾಲಕೃಷ್ಣ ತಂತ್ರಿ ಮಾತನಾಡಿದರು. ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಸಭಾಭವನ ಉದ್ಘಾಟಿಸಿದರು.ಮುಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನದ ಅಭಿವೃದ್ದಿಯು ಊರಿನ ಗೌರವ ಹೆಚ್ಚು ಸುತ್ತದೆ. ದಾನಿಗಳ ಹಾಗೂ ಭಕ್ತರ ಸಹಕಾರದಿಂದ ದೇವಳದ ಜೀರ್ಣೋದ್ಧಾರ ಶೀಘ್ರದಲ್ಲಿ ನೆರವೇರಲಿ ಎಂದು ಶುಭಹಾರೈಸಿದರು.DSC03830 (1)

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಲಕ್ಷಿ÷್ಮ ನಾರಾಯಣ ಆಸ್ರಣ್ಣ ಆಶೀರ್ವಚನ ಗೈದು, ದೇವಳದ ಅಭಿವೃದ್ಧಿಯಲ್ಲಿ ಅನ್ನದಾನ ಮಹತ್ವ ಪಡೆದಿದ್ದು, ಭೋಜನ ಶಾಲೆ ಮೂಲಕ ಕ್ಷೇತ್ರದ ಸಂಪತ್ತು ಇನ್ನಷ್ಟು ಹೆಚ್ಚಾಗಲಿ ಎಂದರು.ರಾಜ್ಯ ಧಾರ್ಮಿಕ ಪರಿಷತ್ತಿನ ಆಗಮ ವಿದ್ವಾಂಸ ಸೂರ್ಯನಾರಾಯಣ ಭಟ್ ಕಶೆಕೋಡಿ ಮಾತನಾಡಿ ದೇವಸ್ಥಾನಗಳು ಹಿಂದೂ ಸಂಸ್ಕöÈತಿಯ ಪ್ರತೀಕವಾಗಿದ್ದು ಅವುಗಳ ಪಾವಿತ್ಯತೆಗೆ ಧಕ್ಕೆಯಾಗದಂತೆ ಸಂರಕ್ಷಣೆ ಮಾಡುವುದು ಭಕ್ತಾಧಿಗಳ ಕರ್ತವ್ಯವಾಗಿದೆ.ಸಂಗ್ರಹವಾದ ಆರ್ಥಿಕ ಸಂಪನ್ಮೂಲದಲ್ಲಿ ಶೇಕಡ ೨೦ರಷ್ಟು ಶೈಕ್ಷಣಿಕ , ವೈದ್ಯಕೀಯ, ದುರ್ಬಲರ ಸೇವಾ ಕಾರ್ಯಗಳಿಗೆ ಮೀಸಲಿಡಬೇಕು. ಇದರಿಂದ ದೇವಸ್ಥಾನದ ಜೀರ್ಣೋದ್ದಾರದೊಂದಿಗೆ ಗ್ರಾಮೀಣ ಬದುಕಿಗೆ ಹೊಸ ಚೈತನ್ಯ ನೀಡಿದಂತಾಗುತ್ತದೆ ಎಂದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ಅವರು ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿ ಸುಮಾರು ೫೭೦೦ ಚದರ ಅಡಿ ವಿಸ್ತಿರ್ಣದ ಸಭಾಭವನದಲ್ಲಿ ಸುಮಾರು ೭೦೦ ಮಂದಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಪ್ರಥಮ ಮಹಡಿಯಲ್ಲಿ ಸಾಮಾಜಿಕ , ಶೈಕ್ಷಣಿಕ, ಸಾಂಸ್ಕöÈತಿಕ, ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಗುದು. ಬಹು ಕೋಟಿ ರೂ.ಗಳಲ್ಲಿ ಪುನಃ ನಿರ್ಮಾಣವಾಗುವ ಗರ್ಭಗುಡಿ, ಸುತ್ತುಪೌಳಿ, ಗೋಪುರ ಮೊದಲಾದ ಕೆಲಸಗಳನ್ನು ನಿಗದಿತ ಸಮಯದಲ್ಲಿ ಪೂರೈಸಲು ತಮ್ಮೆಲ್ಲರ ತನುಮನಧನಗಳ ಸಹಕಾರ ಅಗತ್ಯ ಎಂದು ವಿನಂತಿಸಿದರು.

ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಸ್ವಾಗತಿಸಿದರು. ಸಮಾರಂಭದಲ್ಲಿ ನೂತನ ಭೋಜನಶಾಲೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಾದ ಸತ್ಯನಾರಾಯಣ ಭಟ್ ಚೆಳ್ಯಾರು,ರಾಜೀವಿ ಸೋಮಯಾಜಿ ಹರೇಕಳ ಬಂಟ್ವಾಳ, ಮೋಹನ್ ರಾವ್ ಮತ್ತು ಸಹೋದರರು ನಂದಗೋಕುಲ ಪಡುಬಿದ್ರಿ, ಗುತ್ತಿಗೆದಾರ ಗೋಪಾಲ ಸ್ವಾಮಿ ಮತ್ತು ಅರುಣ್ ಕುಮಾರ್ ಅವರನ್ನು ಗೌರವಿಸಲಾಯಿತು.

ಅತಿಥಿüಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್, ಎಂಆರ್‌ಪಿಎಲ್ ಸಿಎಸ್‌ಆರ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ವೀಣಾ ಟಿ.ಶೆಟ್ಟಿ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಭುಜಂಗ ಎಂ.ಶೆಟ್ಟಿ, ದ.ಕ.ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೊಳ್ಳೂರು, ತಾ.ಪಂ ಸದಸ್ಯ ದಿವಾಕರ್ ಕರ್ಕೇರ, ದೇವಪ್ರಸಾದ ಪುನರೂರು, ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ ಮುಂಬಯಿ ಜೀಣೋದ್ದಾರ ಸಮಿತಿ ಕಾರ್ಯದರ್ಶಿ ರಾಮಣ್ಣ ಬಿ.ದೇವಾಡಿಗ, ವ್ಯಾಸ ರಾವ್ ಚೆನ್ನೆöÊ ಮೊದಲಾದವರು ಉಪಸ್ಥಿತರಿದ್ದರು.DSC03839 (1)

ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಟಿ.ಕೆ ಮಧುಸೂಧನ್ ಆಚಾರ್, ವಿಪುಲಾ ಡಿ.ಶೆಟ್ಟಿಗಾರ್, ಶಾರದಾ ಬಿ.ಬಂಗೇರ, ವಿಶ್ವನಾಥ್, ಟಿ.ಪುರುಷೋತ್ತಮ ರಾವ್, ವಿಜಯಕುಮಾರ್ ರೈ, ಯೋಗೀಶ್ ಆರ್.ಕೋಟ್ಯಾನ್, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಸಹಕರಿಸಿದ್ದು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ಅತಿಥಿüಗಳನ್ನು ಪರಿಚಯಿಸಿದರು. ಹೇಮನಾಥ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಎಲ್.ಕೆ.ಸಾಲ್ಯಾನ್ ವಂದಿಸಿದರು

By suddi9

Leave a Reply

Your email address will not be published. Required fields are marked *