ಮುಂಬಯಿ: (ಆರ್‌ಬಿಐ), ಡಿ.೩೦: ಸಂಗೀತ ಆಸ್ವಾದನೆ ಮಾಡುವುದರ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಲು ಸಾಧ್ಯ ಎಂದು ಮಂಗಳೂರು ಉಪ ಪೊಲೀಸ್ ಆಯುಕ್ತ ವಿನಯ ಗಾ೦ವ್ಕÀರ್ ತಿಳಿಸಿದರು .ಕನ್ನಡ ಮತ್ತು ಸಂಸ್ಕçತಿ ಇಲಾಖೆ, ಕಾಮಧೇನು ಗೋ ಆಶ್ರಮ ಟ್ರಸ್ಟ್ ,ಹಾಗೂ ಮಂಗಳ ಸೇವಾ ಸಮಿತಿ ಟ್ರಸ್ಟ್ ಸಹಯೋಗದಲ್ಲಿ ಮಂಗಳೂರು ಇಲ್ಲಿನ ಕುತ್ತಾರುಪದವು ಬಾಲ ಸಂರಕ್ಷಣಾ ಕೇಂದ್ರದಲ್ಲಿ ಶನಿವಾರ ನಡೆದ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಾ೦ವ್ಕÀರ್, ಬಾಲ ಸಂರಕ್ಷಣಾ ಕೇಂದ್ರ ನಡೆಸುತ್ತಿರುವ ಸಮಾಜಮುಖಿ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ.IMG-20201226-WA0142

ಮಕ್ಕಳಿಗೆ ಶಿಕ್ಷಣ, ಆಹಾರ, ವಸತಿ ವ್ಯವಸ್ಥೆ ಮಾಡುವುದರ ಮೂಲಕ ಅವರ ಉತ್ತಮ ಭವಿಷ್ಯ ರೂಪಿಸುತ್ತಿದೆ. ಇಲ್ಲಿರುವ ಮಕ್ಕಳಿಗೂ ಸಂಗೀತ ಆಸ್ವಾದಿಸಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು .ಮಂಗಳ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ| ಪಿ. ಅನಂತಕೃಷ್ಣ ಭಟ್ ಮಾತನಾಡಿ ಬಾಲಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳಿಗೆ ಪೂರಕವಾದ ವಾತಾವರಣವಿದೆ.ಮಕ್ಕಳು ಸಂಗೀತ ಪರಿಸರ ಬಗ್ಗೆ ಹೆಚ್ಚಿನ ಪರಿಜ್ಞಾನ ಹೊಂದಲು ಈ ರೀತಿಯ ಸಂಗೀತ ಕಾರ್ಯಕ್ರಮದ ಅಗತ್ಯವಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ಹಾಗೂ ಸಂಸ್ಕçತಿ ಇಲಾಖೆಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪರಿಸರ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು .

ಕಾರ್ಯಕ್ರಮದಲ್ಲಿ ರಾಷ್ಟಿçÃಯ ಪರಿಸರ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಸ್ವರ್ಣ ಸುಂದರ್, ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಉಪಸ್ಥಿತರಿದ್ದರು .ಸಭಾ ಕಾರ್ಯಕ್ರಮದ ಬಳಿಕ ವಿಭಾ ಶ್ರೀನಿವಾಸ ನಾಯಕ್ ಹಾಗೂ ತಂಡವು ಸಂಗೀತ ಕಾರ್ಯಕ್ರಮ ನಡೆಸಿತು. ತಬಲಾದಲ್ಲಿ ವಿಘ್ನೇಶ್ ಪ್ರಭು ಹಾಗೂ ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಸಾಥ್ ನೀಡಿದರು .

By suddi9

Leave a Reply

Your email address will not be published. Required fields are marked *