ಮುಂಬಯಿ: (ಆರ್‌ಬಿಐ), ಡಿ.೩೧: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ (ವರದಿಗಾರಿಕೆಗಾಗಿ) ವಾರ್ಷಿಕವಾಗಿ ಪದ್ಯಾಣ ಗೋಪಾಲಕೃಷ್ಣ ಸ್ಮಾರಣಾರ್ಥ ಪ್ರದಾನಿಸುವ ಪ.ಗೋ ಪ್ರಶಸ್ತಿ-೨೦೨೦ ಪ್ರದಾನ ಕಾರ್ಯಕ್ರಮ ಇಂದಿಲ್ಲಿ ಗುರುವಾರ ಪೂರ್ವಾಹ್ನ ಮಂಗಳೂರು ಲೇಡಿಹಿಲ್ ಇಲ್ಲಿನ ಪತ್ರಿಕಾ ಭವನದ ಸಭಾಗೃಹದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆಯಲ್ಲಿ ನೆರವೇರಿತು.Pa Go Awrad @ 3

ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ (ಐಎಎಸ್) ಉಪಸ್ಥಿತರಿದ್ದು ವಿಜಯ ಕರ್ನಾಟಕ ಕನ್ನಡ ದೈನಿಕದ ಹಿರಿಯ ಪತ್ರಕರ್ತ ವಿಜಯ ಕೋಟ್ಯಾನ್ ಪಡು ಮತ್ತು ಕಾವೇರಿ ಟೈಮ್ಸ್ ಹಿರಿಯ ಪತ್ರಕರ್ತ ಬೊಳ್ಳಜಿರ ಬಿ.ಅಯ್ಯಪ್ಪ ಇವರಿಗೆ ಪ.ಗೋ ಪ್ರಶಸ್ತಿ-೨೦೨೦ ಪ್ರದಾನಿಸಿ ಅಭಿನಂದಿಸಿದರು.Pa Go Awrad @ Vijay Padu

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪೋಲಿಸ್ ಅಧೀಕ್ಷಕ ಬಿ.ಎಂ ಲಕ್ಷ್ಮೀಪ್ರಸಾದ್ (ಐಪಿಎಸ್) ಮತ್ತು ಮಂಗಳೂರು ಉಪ ಪೊಲೀಸ್ ಆಯುಕ್ತ ವಿನಯ ಎ.ಗಾಂವ್ಕರ್ ಅತಿಥಿü ಅಭ್ಯಾಗತರುಗಳಾಗಿದ್ದರು. ಕಾಪಸ ರಾಜ್ಯ ಕಾರ್ಯಕಾರಿ ಸಮಿತಿ (ದ.ಕ ಜಿಲ್ಲಾ) ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಕಾಪಸ ರಾಜ್ಯ ಕಾರ್ಯಕಾರಿ ಸಮಿತಿ (ಕೊಡಗು ಜಿಲ್ಲಾ) ಸದಸ್ಯ ಎ.ಆರ್ ಕುಟ್ಟಪ್ಪ, ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಕೆ.ಶೆಟ್ಟಿ, ಪದ್ಯಾಣ ಗೋಪಾಲಕೃಷ್ಣ ಅವರ ಸುಪುತ್ರ ವಿಶ್ವೇಶ ಪದ್ಯಾಣ, ಪ್ರಶಸ್ತಿ ಸಮಿತಿಯ ತೀರ್ಪುಗಾರ್ತಿ ಡಾ| ಜಯಶ್ರೀ ಬಿ. ಕದ್ರಿ ವೇದಿಕೆಯಲ್ಲಿದ್ದು, ಪುಷ್ಪರಾಜ್ ಬಿ.ಎನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಭಾಸರ್ ರೈ ಕಟ್ಟಾ ಪುರಸ್ಕöÈತರನ್ನು ಪರಿಚಯಿಸಿ ಅಭಿನಂದಿಸಿದರು. ದಕಜಿಕಾಪ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಧನ್ಯವದಿಸಿದರು.ಈ ಸಂದರ್ಹದಲ್ಲಿ ವಿಜಯ ಕರ್ನಾಟಕ ಮಂಗಳೂರು ಸ್ಥಾನೀಯ ಸಂಪಾದಕ ಯು.ಕೆ ಕುಮಾರನಾಥ್, ಸಹ ಸಂಪಾದಕ ಮಹ್ಮದ್ ಅರೀಫ್ ಪಡುಬಿದ್ರಿ ಉಪಸ್ಥಿತರಿದ್ದು ಸಹೋದ್ಯೋಗಿ ವಿಜಯ ಕೋಟ್ಯಾನ್ ಅವರನ್ನು ಅಭಿನಂದಿಸಿದರು.Pa Go Awrad @ 1

By suddi9

Leave a Reply

Your email address will not be published. Required fields are marked *