ಕೈಕಂಬ: ರಾಮ ಕೇವಲ ದೇವರಲ್ಲ ಶ್ರೀರಾಮ ರಾಷ್ಟ್ರೀಯತೆಯ ಮತ್ತು ಈ ದೇಶದ ಸ್ವಾಭಿಮಾನದ ಪ್ರತೀಕ ಎಂದು ವಿಶ್ವಹಿಂದೂ ಪರಿಷತ್ ಗ್ರಾಮವಿಕಾಸ ವಿಭಾಗ ಸಹಸಂಯೋಜಕ ಜಿತೇಂದ್ರ ಪ್ರತಾಪನಗರ ಅಭಿಪ್ರಾಯಪಟ್ಟಿದ್ದಾರೆ.ಅವರು ಡಿ.27 ರಂದು ಭಾನುವಾರ ಮಳಲಿ ಮೊಗರು ಕುಕ್ಕಟ್ಟೆಯ ವಿದ್ಯಾಭಾರತಿ ಸಭಾಂಗಣದಲ್ಲಿ ನಡೆದ ಮಳಲಿ ಮಂಡಲ ವ್ಯಾಪ್ತಿಯ ಆರು ಗ್ರಾಮಗಳಲ್ಲಿ ರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನ ಸಮಾವೇಶದಲ್ಲಿ ಮಾತನಾಡಿದರು.ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ರಾಷ್ಟ್ರೀಯ ಆತ್ಮವಾಗಿದ್ದು ಇದರ ನಿರ್ಮಾಣದಲ್ಲಿ ನಾವು ಹನುಮನಂತೆ ಕೆಲಸ ಮಾಡಬೇಕು ಹನುಮ ಏನನ್ನೂ ನಿರೀಕ್ಷಿಸದೆ ರಾಮನ ಸೇವೆ ಮಾಡಿದ ಹಾಗೆ ನಾವೆಲ್ಲರೂ ಧರ್ಮ, ರಾಜಕೀಯ ರಹಿತವಾಗಿ ದೇಶದ ಜನರನ್ನು ಜೋಡಿಸಿ ಮಂದಿರ ನಿರ್ಮಾಣದಲ್ಲಿ ಪಾಲು ಪಡೆಯು ಸುಯೋಗ ಎಂದು ಹೇಳಿದರು .20201227_164245
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಾಮರಸ್ಯ ಪ್ರಮುಖ್ ಹರೀಶ್ ಗುರುಪುರ ನಿಧಿ ಸಂಗ್ರಹಣಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದರುಮಳಲಿ ಮಂಡಲ ವ್ಯಾಪ್ತಿಯ ಆರು ಗ್ರಾಮಗಳ 16 ಬೂತ್ (ಉಪವಸತಿ)ಗಳಲ್ಲಿ ಅಭಿಯಾನ ಪ್ರಮುಖರನ್ನು ಗುರುತಿಸಲಾಯಿತು ಇವರು  ಜನವರಿ ತಿಂಗಳ  17 ರಂದು ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ.ಬಜರಂಗದಳ ಜಿಲ್ಲಾ ವಿಭಾಗ ಸಂಯೋಜಕ ಭುಜಂಗ ಕುಲಾಲ್,ವಿಶ್ವಹಿಂದೂ ಪರಿಷತ್ ಗುರುಪುರ ಪ್ರಖಂಡದ ಉಪಾಧ್ಯಕ್ಷ ಭಾಸ್ಕರ್ ಕುಲಾಲ್ ಕಿಲಾಡಿ, ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.20201227_164317
20201227_164433

By suddi9

Leave a Reply

Your email address will not be published. Required fields are marked *