ಕೈಕಂಬ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಗುರುಪುರ ಸಮೀಪದ ನೂಯಿ ಬಾಕಿಮಾರ್ ಗದ್ದೆಯಲ್ಲಿ ಡಿ.೨೫ರಂದು ಶುಕ್ರವಾರ ರಾತ್ರಿ ೭ರಿಂದ ರಾತ್ರಿ ೧೨ ಗಂಟೆಯವರೆಗೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ಸೇವಾಕರ್ತರಾದ ನೂಯಿ ಸುರೇಶ್ ರಾವ್,ವೆಂಕಟೇಶ್ ರಾವ್, ಜ್ಯೋತಿ ರವಿಶಂಕರ ರಾವ್, ಹಾಗೂ ಶ್ರೀಮತಿ ಪದ್ಮಾವತಿ ರಾವ್ ಅವರು ಎಲ್ಲಾ ಕಲಾಭಿಮಾನಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿ ದೇವರ ಪ್ರಸಾದವನ್ನು ನೀಡಿ ಬಂದ ಅಥಿತಿಗಳಿಗೆ ಊಟೋಪಚಾರದ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲಾ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. 


