ಕೈಕಂಬ: ಮಳಲಿ ಜೋಡು ತಡಮೆ ಎಂಬಲ್ಲಿ ವಿಶ್ವಹಿಂದೂ ಪರಿಷತ್ ಶ್ರೀವೀರಾಂಜನೇಯ ಶಾಖೆ ಮಳಲಿ ಇದರ ನೇತೃತ್ವದಲ್ಲಿ ನಿರ್ಮಿಸಲಾದ ಸುಸಜ್ಜಿತ ಬಸ್ಸು ತಂಗುದಾಣವನ್ನು ಮಳಲಿ ಸೈಟ್ ನ ಶ್ರೀ ಕೊರಗಜ್ಜ ಕ್ಷೇತ್ರದ ಮುಖ್ಯಸ್ಥರೂ, ಕೈಕಂಬ ಹಿಂದೂ ರುದ್ರಭೂಮಿಯಲ್ಲಿ ಹಲವು ವರ್ಷಗಳಿಂದ ಶವಸಂಸ್ಕಾರದಲ್ಲಿ ತೊಡಗಿಸಿಕೊಂಡು ಸುತ್ತಮುತ್ತ ಚಿರಪರಿಚಿತರೂ ಆಗಿರುವ ಮುತ್ತಣ್ಣ ಇವರು ಭಾನುವಾರ ಲೋಕಾರ್ಪಣೆ ಗೊಳಿಸಿದರು.

ಈ ಸಂದರ್ಭದಲ್ಲಿ ಭಜರಂಗದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್,ಪ್ರಮುಖರಾದ ಸುನಿಲ್ ಪೆರಾರ ಜನಾರ್ಧನ ಒಡ್ದುರು, ಚಂದ್ರಹಾಸ್ ಶೆಟ್ಟಿ ನಾರ್ಲ, ಸೋಹನ್ ಅತಿಕಾರಿ, ಸುಧಾಕರ್ ಕುಲಾಲ್, ವಿಠ್ಠಲ ಸಪಳಿಗ ಹಾಗೂ ಘಟಕದ ಸಂಚಾಲಕರಾದ ಬಾಲಕೃಷ್ಣ ಮಳಲಿ ಹಾಗೂ ವಿಶ್ವಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
