ಮುಂಬಯಿ : ಮೀರಾ ರೋಡಿನ   ಶ್ರೀ ಮಹಾಲಿಂಗೇಶ್ವರ  ದೇವಸ್ಥಾನ. ದಲ್ಲಿ ಡಿಸೆಂಬರ್ 21ರಂದು  ವಾರ್ಷಿಕ ಅಯ್ಯಪ್ಪ ಮಹಾ ಪೂಜೆ ಭಕ್ತಿ ಸಂಭ್ರಮದೊಂದಿಗೆ  ನಡೆಯಿತು .
ಸಂಜೆ  ಮೀರಾರೋಡ್  ಭಾರತಿ ಪಾರ್ಕಿಂಗ್ ಅಯ್ಯಪ್ಪ ಭಕ್ತ ವೃಂದದ ಜಯಶೀಲ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ಶರಣು ಘೋಷಗಳು  . ಭಜನೆ ಭುವಜಿ ಶ್ರೀಧರ ಶೆಟ್ಟಿ ಯವರು  ಮತ್ತು ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು.

ದೇವಸ್ಥಾನದ  ಪ್ರಧಾನ ಅರ್ಚಕ ಸಾಣೂರು ಶಾಂತಿOಜೆ  ಜನಾರ್ಧನ್ ಭಟ್ ಅವರಿಂದ ಮಂಗಾಳರಾತಿ ನಡೆಸಿದರೆ  ಮಾಧವ ಭಟ್ . ಸುರೇಶ್ ಭಟ್ ಕುಂಟಾಡಿ ಮತ್ತು ವಿಪ್ರ ವೃಂದದವರು ಸಹಕರಿಸಿದರು.  ಪೂಜಾಕಾರ್ಯಗಳು ದೇವಸ್ಥಾನದ ಆಡಳಿತ ಮೊಕ್ತೇಸರ ಸೀಮಂತೂರು ಮಜಲ ಗುತ್ತು ಬಾಬಾ ರಂಜನ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು .
ಪೂಜೆಯಲ್ಲಿ ದೇವಸ್ಥಾನದ ಟ್ರಸ್ಟಿಗಳಾದ ಅನಿಲ್ ಶೆಟ್ಟಿ .ಪ್ರಸನ್ನ ಶೆಟ್ಟಿ ಬೋಳ. ಪ್ರಸನ್ನ ಶೆಟ್ಟಿ ಕುರ್ಕಾಲ್ ಸುಂದರ್ ಶೆಟ್ಟಿಗಾರ್..ಆನಂದ್ ಶೆಟ್ಟಿ ಐಕಳ ಚಂದ್ರ ಶೆಟ್ಟಿ ಶಿಮಂತೂರು ಮಜಲ..  ಪೆಲತ್ತೂರು ಉದಯ ಶೆಟ್ಟಿ. ಸಚ್ಚಿದಾನಂದ ಶೆಟ್ಟಿ  ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು.ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತರು   ಸರಕಾರದ ನಿಯಮದಂತೆ ಸಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿಕೊಂಡು   ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *