ಕೈಕಂಬ : ನಗರದ ಹೊರವಲಯ ಅಡ್ಡೂರಿನಲ್ಲಿ ಯುವಕನೋರ್ವನ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.ಅಡ್ಡೂರು ನಿವಾಸಿ ಮುಹಮ್ಮದ್ ತಾಜುದ್ದೀನ್ (20) ದಾಳಿಗೊಳಗಾಗಿ ಗಾಯಗೊಂಡ ಯುವಕ.16vp craim

ತಾಜುದ್ದೀನ್ ಅಡ್ಡೂರಿನಿಂದ ಮನೆ ಕಡೆಗೆ ತೆರಳುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳ ತಂಡದಿಂದ ತಲವಾರು ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ತಾಜುದ್ದೀನ್ ನ ತೊಡೆ, ಕೈ ಸಹಿತ ಹಲವೆಡೆ ಗಾಯಗಳಾಗಿವೆ.

ಕ್ಷುಲ್ಲಕ ವಿಷಯಕ್ಕೆ ದಾಳಿ ನಡೆದಿದೆ ಎನ್ನಲಾಗಿದ್ದು, ಗಾಯಗೊಂಡ ತಾಜುದ್ದೀನ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ  ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *