ಕೈಕಂಬ : ಡಿ. ೨೨ರಂದು ನಡೆಯಲಿರುವ ಚುನಾವಣೆಯಲ್ಲಿ ಗುರುಪುರ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಮೂಳೂರು ಮತ್ತು ಅಡ್ಡೂರು ಗ್ರಾಮಗಳಲ್ಲಿ ಅಂತಿಮವಾಗಿ ಒಟ್ಟು ೭೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ.images

೨೮ ಸದಸ್ಯ ಬಲದ ಪಂಚಾಯತ್‌ನಲ್ಲಿ ನಾಮಪತ್ರ ಪರಿಶೀಲನೆಯಂದು ಅಡ್ಡೂರು ೨ನೇ ವಾರ್ಡ್ನಿಂದ ಎಡ್ಲಿನ್ ಕ್ಲೀಟಾ ಡಿ’ಸೋಜ ಹಾಗೂ ನಾಮಪತ್ರ ಹಿಂಪಡೆಯುವ ದಿನದಂದು ಅಡ್ಡೂರು ೧ನೇ ವಾರ್ಡ್ನಿಂದ ಪರಿಶಿಷ್ಠ ಪಂಗಡದ(ಎಸ್‌ಟಿ) ಬಬಿತಾ ಅವಿರೋಧ ಆಯ್ಕೆಯಾಗಿದ್ದಾರೆ. ಒಟ್ಟು ೮೬ ಅಭ್ಯರ್ಥಿಗಳಲ್ಲಿ ಅಂತಿಮ ಕ್ಷಣದಲ್ಲಿ ಒಂಬತ್ತು ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.

ಅವಿರೋಧ ಆಯ್ಕೆಯಾದ ಇಬ್ಬರು ಮಹಿಳೆಯರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ.

By suddi9

Leave a Reply

Your email address will not be published. Required fields are marked *