ಕೊಂಪದವಿನಲ್ಲಿ ಬೈಕ್-ಬೋರ್‍ವೆಲ್ ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಮೂಡುಬಿದಿರೆ: ಕೊಂಪದವು ತಿರುವಿನಲ್ಲಿ ಭಾನುವಾರ ಬೆಳಗ್ಗೆ ಬೈಕ್ ಹಾಗೂ ಬೋರ್‍ವೆಲ್ ಲಾರಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮುಚ್ಚೂರು ಕಾನ ನಿವಾಸಿ, ಕೂಲಿ ಕಾರ್ಮಿಕ ಚಂದ್ರಶೇಖರ್ ಗೌಡ (32) ಮೃತಪಟ್ಟ ಯುವಕ.
ಈತ ಭಾನುವಾರ ಬೆಳಗ್ಗೆ ಕುಡುಪು ದೇವಸ್ಥಾನದಲ್ಲಿ ಷಷ್ಠಿ ಜಾತ್ರೆಗೆ ಹೋಗಿದ್ದು, ಅಲ್ಲಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕೊಂಪದವು ತಿರುವಿನಲ್ಲಿ ಬೋರ್‍ವೆಲ್ ಲಾರಿಗೆ ಡಿಕ್ಕಿ ಹೊಡೆದಿದೆ.
ಬೈಕ್‍ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಶೇಖರ್ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.