ಕೈಕಂಬ : ಗುರುಪುರದ ಶ್ರೀ ಕ್ಷೇತ್ರ ಜಂಗಮ ಸಂಸ್ಥಾನ ಮಠದಲ್ಲಿ ಡಿ. ೧೪ ರಿಂದ ಡಿ. ೧೬ರವರೆಗೆ ಶ್ರೀ ನೀಲಕಂಠೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ಜರುಗಲಿದೆ.ಡಿ. ೧೪ರಂದು ಪ್ರಾತಃಕಾಲದಲ್ಲಿ ತೋರಣ ಮುಹೂರ್ತ, ಶ್ರೀ ರುದ್ರಕಲಶ ಪ್ರತಿಷ್ಠೆ, ಶ್ರೀ ದೇವರಿಗೆ ೧೦೮ ಕಲಶಾಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ, ಜಂಗಮ ಆರಾಧನೆ ಮಹಾಅನ್ನದಾಸೋಹ, ಸಂಜೆ ೮:೩೦ಕ್ಕೆ ರಥಾರೋಹಣ, ೯ಕ್ಕೆ ಶ್ರೀ ದೇವರ ಪಲ್ಲಕಿ ಉತ್ಸವ ಜರುಗಲಿದೆ.
ಡಿ. ೧೫ರಂದು ಬೆಳಿಗೆ ೯ಕ್ಕೆ ಶ್ರೀ ನೀಲಕಂಠೇಶ್ವರ ಸ್ವಾಮಿ ಅವಭೃತ ಉತ್ಸವ, ಸಂಜೆ ೮ಕ್ಕೆ ದೇವರಿಗೆ ಮರುದೀಪೋತ್ಸವ, ಮಹಾಪೂಜೆ ನಡೆಯಲಿದೆ. ಡಿ. ೧೬ರಂದು ಶ್ರೀ ಜಂಗಮ ಮಠದ ಕರ್ತೃ ಗುರುಗಳಾದ ಶ್ರೀ ನೀಲಕಂಠ ಸ್ವಾಮಿಯವರ ಐಕ್ಯಗುಹಾ ಸಾನಿಧ್ಯದಲ್ಲಿ(ಚಿಲಿಂಬಿಕೋಡಿ) ಶ್ರೀ ಗುರು ಆರಾಧನೆ ಹಾಗೂ ಮಹಾಪೂಜೆ ಬಳಿಕ ಅನ್ನದಾಸೋಹ ಜರುಗಲಿದೆ ಎಂದು ಮಠದ ವತಿಯಿಂದ ಪ್ರಕಟಣೆ ತಿಳಿಸಿದೆ.
