ಕೈಕಂಬ: ಫ್ರೆಂಡ್ಸ್ ರ‍್ಕಲ್ ಕೆಳಗಿನಕೆರೆ ಕ್ಲಬ್ ವತಿಯಿಂದ ರವಿವಾರ ಅಡ್ಡೂರು ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ,ಸ್ವಚ್ಛತಾ ಕಾರ್ಯವು ಕೇವಲ ಒಂದು ದಿನಕ್ಕೆ ಸೀಮಿತವಾಗದೇ ದಿನ ನಿತ್ಯ ನಡೆಯುತ್ತಿರಬೇಕು. ತಮ್ಮ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಶ್ರಮಿಸಬೇಕು‌. ಗ್ರಾಮ ಸ್ವಚ್ಛವಾದರೆ ಜಿಲ್ಲೆ, ರಾಜ್ಯ, ರಾಷ್ಟ್ರ ಸ್ವಚ್ಛಗೊಳ್ಳುತ್ತದೆ ಎಂದು ಅಭಿಪ್ರಾಯಿಸಿದರು.4e58c2a0-9dcb-4e86-8436-1158c7db01fc

ಕರ‍್ಯಕ್ರಮದಲ್ಲಿ ಎಫ್ ಸಿಕೆ ಕ್ಲಬ್ ನ ಅಧ್ಯಕ್ಷ ಅಲಿಯಾರ್ ಕೆಳಗಿನಕೆರೆ, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವಾ ಅಂಗಡಿಮನೆ, ಉಪಾಧ್ಯಕ್ಷ ಝೈನುದ್ದೀನ್ ಗರಡಿ, ಎಮ್ .ಎಸ್.ಜಬ್ಬಾರ್, ಕ್ಲಬ್ ನ ಸಲಹೆಗಾರರಾದ ಎ.ಕೆ.ಜಬ್ಬಾರ್, ಫಾರೂಕ್ ಕೆಳಗಿನಕೆರೆ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.13vp addoor

ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛಗೊಳಿಸಿ ಕಸವನ್ನು ಕಸವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ಕ್ಲಬ್ ನ ಕರ‍್ಯಕ್ಕೆ ಸರ‍್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

By suddi9

Leave a Reply

Your email address will not be published. Required fields are marked *