ಕಾರ್ಕಳ: ಎಳ್ಳಾರೆ ಶಂಕರ್ ನಾಯಕ್ ಭಾಗವತರ ನೇತ್ರತ್ವದ ಯಕ್ಷವೈಭವ ಮಕ್ಕಳ ಮೇಳ ಎಳ್ಳಾರೆ-ಮುಂಬೈ ಇದರ 9ನೇ ವರ್ಷದ ವಾರ್ಷಿಕೋತ್ಸವ ದಿನಾಂಕ 12.12.2020 ರಂದು ಎಳ್ಳಾರೆ ಗದ್ದಿಗೆ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಲಿದೆ. ಈ ಪ್ರಯುಕ್ತ ಸಂಜೆ ಮೇಳದ ಬಾಲ ಕಲಾವಿದರು ಹಾಗೂ ಅತಿಥಿ ಕಲಾವಿದರು ಜಾಂಬವತಿ ಕಲ್ಯಾಣ ಎಂಬ ಪುಣ್ಯ ಕಥಾನಕವನ್ನು ಆಡಿತೋರಿಸಲಿದ್ದಾರೆ.28a43d90-c291-4bea-820c-f82d1e87c9e3

ಹಿಮ್ಮೇಳದಲ್ಲಿ ಕರುಣಾಕರ ಶೆಟ್ಟಿ ಕಾವಾಡಿ,ರಮೇಶ್ ನಾಯಕ್ ಹೆಪ್ಪಳ, ಆನಂದ್ ಭಟ್ ಹಾಗೂ ಗಣೇಶ್ ಶೆಣೈ.ಮುಮ್ಮೇಳದಲ್ಲಿ ಕಲಾವಿದರಾಗಿ ರಘುನಾಥ್ ನಾಯಕ್ ಎಣ್ಣೆಹೊಳೆ, ಅಶೋಕ್ ಶೆಟ್ಟಿ ಕೊಡ್ಲಾಡಿ, ಶ್ರೀಕಾಂತ್ ನಾಯಕ್ ಪೆಲತ್ತೂರು, ಪೂರ್ಣನಂದ್ ನಾಯಕ್ ಎಳ್ಳಾರೆ, ಶಿವಾನಂದ್ ಭಟ್ ಎಳ್ಳಾರೆ, ದೀಪಕ್ ಕಾಮತ್ ಎಳ್ಳಾರೆ, ಆಶ್ಲೇಷ ಪ್ರಭು ಕಬ್ಯಾಡಿ, ಧನ್ಯಾ ಕಾಮತ್ ಎಳ್ಳಾರೆ, ಚೈತನ್ಯ ಪ್ರಭು ಎಳ್ಳಾರೆ, ಉಜ್ವಲ್ ನಾಯಕ್, ನಿತೀಕ್ ನಾಯಕ್, ಉನ್ನತಿ ನಾಯಕ್, ಧನುಷ್ ನಾಯ್ಕ್, ಪ್ರಾರ್ಥನ ನಾಯ್ಕ್ ಭಾಗವಹಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *