ಮುಂಬಯಿ : (ಆರ್‌ಬಿಐ), ನ.೨೭: ಧರ್ಮಸ್ಥಳದಲ್ಲಿ ಬುಧವಾರ ಡಿ.ವೀರೇಂದ್ರ ಹೆಗ್ಗಡೆಯವರ ೭೩ನೆ ಜನ್ಮದಿನವನ್ನು ಸರಳವಾಗಿ ಆಚರಿಸಿದ್ದು ಈ ಶುಭಾವಸರದಲ್ಲಿ ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ.ಶೆಟ್ಟಿ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿಗೈದÀÄ ರಾಜರ್ಷಿ ವೀರೇಂದ್ರ ಹೆಗ್ಗಡೆ ಅವರಿಗೆ ಪುಷ್ಫಗುಚ್ಛವಿತ್ತು ಗೌರವಿಸಿ ಶುಭಾರೈಸಿದರು.
ಶ್ರೀಧಾಮ ಮಾಣಿಲಾ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ ಸಂಪತ್ ಸಾಮ್ರಾಜ್ಯ, ಬಿ.ಅಪ್ಪಣ್ಣ ಹೆಗ್ಡೆ ಮತ್ತಿತರ ಗಣ್ಯರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಹೆಗ್ಗಡೆ ಅವರಿಗೆ ಶುಭಾಶಯ ಅರ್ಪಿಸಿದರು. ಅಂತೆಯೇ ಸಾವಿರಾರು ಮಂದಿ ಅಭಿಮಾನಿಗಳು, ಭಕ್ತರು ದೂರವಾಣಿ, ವಾಟ್ಸ್ಆ್ಯಪ್, ವಿದ್ಯುದಂಚೆ ಮೂಲಕ ಶುಭಾಶಯ ಸಲ್ಲಿಸಿದರು.

