ಬಂಟ್ವಾಳ:ತಾಲ್ಲೂಕಿನ ಕೈಕುಂಜೆ ಸಮೀಪದ ನೇತ್ರಾವತಿ ನದಿಗೆ ಸಂಜೆ ಸ್ನಾನಕ್ಕೆಂದು ತೆರಳಿದ್ದ ವೃದ್ಧರೊಬ್ಬರು ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಮೃತರನ್ನು ಮಂಗಳೂರಿನ ವಳವೂರು ನಿವಾಸಿ ರಮೇಶ ಆಚಾರ್ಯ (65) ಎಂದು ಗುರುತಿಸಲಾಗಿದ್ದು, ಇವರು ಇಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದರು ಎಂದು ನಗರ ಪೊಲೀಸರು ತಿಳಿಸಿದ್ದಾರೆ.
