ಗುರುಪುರ : ವಾಮಂಜೂರು ಟೈಗರ್ಸ್(ರಿ), ತಿರುವೈಲಿನ ಜೈ ಶಂಕರ್ ಮಿತ್ರ ಮಂಡಳಿ ಹಾಗೂ ಜೈ ಶಂಕರ್ ಮಾತೃ ಮಂಡಳಿ ಇವರ ಜಂಟಿ ಆಶ್ರಯದಲ್ಲಿ ನ. 10ರಂದು ಕೆತ್ತಿಕಲ್ನ ವೈಶಾಖ್ ಗಾರ್ಡನ್ನಲ್ಲಿ 4ನೇ ವರ್ಷದ ಸಾರ್ವಜನಿಕ ಗೋ ಪೂಜೆ ನಡೆಯಿತು.

ದೀಪ ಬೆಳಗಿಸಿ ಗೋ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಎಲ್ಲ ಹಿಂದೂಗಳ ಮನೆಯಲ್ಲಿ ಭಜನೆ ನಡೆಯುತ್ತಿತ್ತು. ಆಧುನಿಕತೆಯ ಭರಾಟೆಯಲ್ಲಿ ಭಜನೆಯ ಮಹತ್ವ ಕಡಿಮೆಯಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಮತ್ತೆ ಭಜನೆ ವಿಜೃಂಭಿಸುತ್ತಿದೆ. ಕಳೆದ ವರ್ಷ ಈ ಗೋ ಶಾಲೆಯಲ್ಲಿ 7 ಹಸುಗಳಿದ್ದರೆ ಈ ವರ್ಷ 15ಕ್ಕೇರಿದೆ. ಮುಂದಿನ ವರ್ಷ 100ರ ಗಡಿ ದಾಟಲಿ. ದೀಪಾವಳಿ ಎಲ್ಲರಿಗೂ ಶುಭವ ತರಲಿ ಎಂದು ಹಾರೈಸಿದರು.

ಶಾಸಕರು ಗೋ ಶಾಲೆಯಲ್ಲಿದ್ದ ಹಸುಗಳಿಗೆ ಪಶು ಆಹಾರ ನೀಡಿ ನಮಸ್ಕರಿಸಿದರು. ಸ್ಥಳೀಯ ತಂಡದಿAದ ಭಜನೆ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ವಾಮಂಜೂರು ಟೈಗರ್ಸ್ ಅಧ್ಯಕ್ಷ ಚರಣ್ರಾಜ್ ಮತ್ತು ಪದಾಧಿಕಾರಿಗಳು, ಜೈ ಶಂಕರ್ ಮಿತ್ರ ಮಂಡಳಿ ಅಧ್ಯಕ್ಷ ಸಂತೋಷ್ ಆಚಾರ್ಯ, ಜೈ ಶಂಕರ್ ಮಾತೃ ಮಂಡಳಿ ಅಧ್ಯಕ್ಷೆ ಸೌಮ್ಯಾ ಡಿ., ಹಾಗೂ ಪದಾಧಿಕಾರಿಗಳು, ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ನಿವೃತ್ತ ಶಿಕ್ಷಕ ಗೋಪಾಲ ಯು, ಪ್ರಮುಖರಾದ ರಘು ಸಾಲ್ಯಾನ್, ಅನಿಲ್ ರೈ ವಾಮಂಜೂರು, ಉದ್ಯಮಿ ಕೇಶವ ಪೂಜಾರಿ ವಾಮಂಜೂರು, ಲಕ್ಷö್ಮಣ್ ಶೆಟ್ಟಿಗಾರ, ದಿನೇಶ್ ಜೆ. ಕೆತ್ತಿಕಲ್, ದಿವಾಕರ ಆಚಾರ್ಯ ವಾಮಂಜೂರು, ರಾಜೀವ ಕೊಳಕೆಬೈಲು, ನಾಗೇಶ್ ಕೋಟ್ಯಾನ್, ನಾಗರಾಜ ಪಂಡಿತ್, ರಾಕೇಶ್ ಶೆಟ್ಟಿ, ಲಿಂಗಪ್ಪ ಸಾಲ್ಯಾನ್, ರಾಜೀವ ಸಾಲ್ಯಾನ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಪ್ರೊ. ಅಶ್ವಿನಿ ಶೆಟ್ಟಿ ಬೊಂಡAತಿಲ ಅವರು ನಿರೂಪಿಸಿದರು.
