ಮುಂಬಯಿ: ಬಳಕುಂಜೆ ಕೊಟ್ನಾಯಗುತ್ತು ಬಸ್ ನಿಲ್ದಾಣದ ಬಳಿ ಉಳೆಪಾಡಿ ಶ್ರೀಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಾಣಗೊಂಡಿರುವ ಬಳಕುಂಜೆ ಚೆನ್ನಯ ಬೆನ್ನಿ ದಿ| ಭೋಜ ಶೆಟ್ಟಿ ದಂಪತಿ ಸ್ವರಣಾರ್ಥ ಅವರ ಸುಪುತ್ರ ಡಾ| ವಿರಾರ್ ಶಂಕರ ಬಿ.ಶೆಟ್ಟಿ ಅವರ ಸೇವಾ ರೂಪದಲ್ಲಿ ನಿರ್ಮಾಣಗೊಂಡ ಸ್ವಾಗತ ಮಹಾದ್ವಾರ ಕಳೆದ ಭಾನುವಾರ ಉದ್ಘಾಟಿಸಲ್ಪಟ್ಟಿತು.Ulepadi Dwara Inaugn 2

Ulepadi Dwara Inaugn 4ಕೋವಿಡ್ ನಿಮಿತ್ತ ಸರಳವಾಗಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಬಾರ್ಕೂರು ಮಹಾ ಸಂಸ್ಥಾನದ ಡಾ| ಶ್ರೀ ವಿಶ್ವಸಂತೋಷ ಭಾರತಿ ಸ್ವಾಮೀಜಿ, ಶ್ರೀ ಕ್ಷೇತ್ರ ಕಟೀಲು ಇದರ ಅರ್ಚಕ ಕೆ.ಲಕ್ಷ್ಮೀ  ನಾರಾಯಣ ಅಸ್ರಣ್ಣ, ಮುಂಡ್ಕೂರ ದೇವಸ್ಥಾನದಅರ್ಚಕ ಅಪ್ಪಣ್ಣ ಭಟ್, ಚೇಳೂರು ಚರ್ಚ್ನ ಧರ್ಮಗುರು ರೆ| ಫಾ| ಮೈಕಲ್ ಡಿಸಿಲ್ವಾ, ಮೂಲ್ಕಿ ಸೀಮೆಯ ಅರಸದುಗ್ಗಣ ಸಾವಂತಇವರುಗಳು ಸ್ವಾಗತ ಮಹಾದ್ವಾರ ಉದ್ಘಾಟಿಸಿದರು.Ulepadi Dwara Inaugn 1

ಈ ಸಂದರ್ಭದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಸಂಸ್ಥೆಮೂಡಬಿದಿರೆ ಇದರ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಮುಂಬಯಿನ ಉದ್ಯಮಿಗಳಾದಕರ್ನಿರೆ ವಿಶ್ವನಾಥ ಶೆಟ್ಟಿ, ಕಳತ್ತೂರು ವಿಶ್ವನಾಥ ಶೆಟ್ಟಿ, ರಾಮಪ್ರಸಾದ್ ಭಟ್, ನಾರಾಯಣ ಮಾಣಯಿ, ವೀರೇಂದ್ರ ಪೂಂಜ, ಹರಿಶ್ಚಂದ್ರ ಶೆಟ್ಟಿ, ಕೃಷ್ಣ ಶೆಟ್ಟಿ ಉಳೆಪಾಡಿ, ಚಿತ್ತರಂಜನ್ ಶೆಟ್ಟಿ ಮೂಡು ಕೋಟ್ನಾಯ ಗುತ್ತು, ರಂಗನಾಥ ಶೆಟ್ಟಿ, ಚರ್ಚ್ ಪಾಲನಾ ಮಂಡಳಿ
ಉಪಾಧ್ಯಕ್ಷ ಪ್ರೀಡಾ ರೋಡ್ರಿಗಸ್, ನೆಲ್ಸನ್ ಲೋಬೋ ಮತ್ತಿತರಗಣ್ಯರು ಉಪಸ್ಥಿತರಿದ್ದರು.Ulepadi Dwara Inaugn 3

ರಾಜೇಶ್ ಶೆಟ್ಟಿ ಉಳೆಪಾಡಿ ಸ್ವಾಗತಿಸಿದರು. ಚಿತ್ತರಂಜನ್ ಶೆಟ್ಟಿ ಪ್ರಸ್ತಾವನೆಗೈದರು. ದಿನಕರ ಶೆಟ್ಟಿ ಬಳ್ಕುಂಜೆ  ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *