Published On: Fri, Oct 23rd, 2020

ಉನ್ನತ ಶಿಕ್ಷಣಕ್ಕೆ ಕೈಬೀಸಿ ಕರೆವ ಕಡಬದ `ಏಮ್ಸ್’ ವಿದ್ಯಾಸಂಸ್ಥೆ ಸಮಾಜದ ಸಹಕಾರ ಅತ್ಯಗತ್ಯ ಸಂಸ್ಥೆಯ ಅಧ್ಯಕ್ಷೆ ಮರಿಯಂ ಫೌಝಿಯಾ ಬಿ .ಯಸ್

” ಸಾಧಕರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಸಾಧಿಸುವ ಛಲವಿಲವಿರಬೇಕು “
‘ಯಾರೇ ಸಾಧಕರ ಅಂತರಂಗವನ್ನು ಅವಲೋಕಿಸಿದಾಗ ಈ ವಾಸ್ತವಿಕತೆ ಹೊರಬೀಳುತ್ತದೆ.ಬರೇ ವಾಸ್ತವದ ಅರಿವಿನಲ್ಲಿ ಕುಳಿತರೆ ಸಾಲದು ಅದನ್ನು ಇಚ್ಛಾಶಕ್ತಿಯಂತೆ ಕ್ರಿಯಾತ್ಮಕವಾಗಿ ಅನುಷ್ಠಾನ ಗೊಳಿಸಿದಾಗ ನಿಲುವು ಸಾಕಾರ ರೂಪ ಪಡೆಯುತ್ತದೆ.ಇದಕ್ಕೆ ಸ್ಪಷ್ಟ ನಿದರ್ಶನ ಆತೂರಿನ ಮರಿಯಮ್ ಫೌಝಿಯಾ ಬಿ .ಯಸ್ ಮತ್ತು ಕಡಬದ ಸಮೀರಾ ಕೆ.ಎ.p

 

ಕಾಲೇಜು ಜೀವನದ ಒಡನಾಡಿಗಳಾದ ಇವರು ಆದರ್ಶವಾದಿಗಳು ಒಬ್ಬರು ವಿವೇಕಶಾಲಿ ಯಾದರೆ ಇನ್ನೊಬ್ಬರು ಜ್ಞಾನಿ.ವಿವೇಕ ಮತ್ತು ಜ್ಞಾನದ ಪ್ರತಿಬಿಂಬವಾಗಿ ಮೂಡಿಬಂದ ಆದರ್ಶ ಶಿಕ್ಷಣ ಕೇಂದ್ರವೇ ಕಡಬದ ಏಮ್ಸ್ ವಿದ್ಯಾಸಂಸ್ಥೆ.c10b26bf-1876-480e-8174-c9174e3f954f

ಮಂಗಳೂರಿನಿಂದ ಸರಿ ಸುಮಾರು ೮0 ಕಿ ಮೀ ದೂರದಲ್ಲಿರುವ ಕಡಬದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಶಿಕ್ಷಣ ರಂಗದಲ್ಲಿ ಮಿಂಚುತ್ತಿರುವ `ಏಮ್ಸ್’ ಎಂದೇ ಹೆಸರಾಗಿರುವ ಏಮ್ಸ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ) , ಗ್ರಾಮೀಣ ಭಾಗದ ಸಹಿತ ನಗರ ಪ್ರದೇಶಗಳ ವಿದ್ಯಾಸಕ್ತರಿಗೆ ವಿದ್ಯಾರ್ಜನೆಯ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸ್ನಾತಕೋತ್ತರ ,ತುಮಕೂರು ವಿ.ವಿ ಯಲ್ಲಿ ಶಿಕ್ಷಣ ತರಭೇತಿ, ಮನಶಾಸ್ತ್ರದಲ್ಲಿ ಉನ್ನತ ಪದವಿಯನ್ನು (M.A,B-Ed, MA) ಹೊಂದಿರುವ ಆತೂರಿನ ಮರಿಯಂ ಫೌಝಿಯಾ ಹಾಗೂ ಅದೇ ಮಂಗಳೂರು ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ  ರಾಂಕ್ ಪಡೆದ ಕಡಬದ ಕೆ.ಎ.ಸಮೀರಾ ಎಂಬ ಈರ್ವರು ಸಹೋದರಿಯರೇ .
ಈ ವಿದ್ಯಾ ಸಂಸ್ಥೆಯ ರೂವಾರಿಗಳು. ಹಾಗೆಂದು ಯಾರಿಗಾದರೂ ಅಚ್ಚರಿಯಾದರೆ ಅದು ಅತಿಶಯವೂ ಅಲ್ಲ. ಯಾಕೆಂದರೆ ಇದು ವಾಸ್ತವ ಸಂಗತಿ.ಹೀಗಾಗಿ ಈ ನಾರಿಮಣಿಗಳ ಸಾಧನೆಯನ್ನು ಮೆಚ್ಚಿ ಭೇಷ್! ಎನ್ನಲೇ ಬೇಕು.03333

ಕಡಬ ಹೆಚ್ಚು ಗ್ರಾಮೀಣ ಪ್ರದೇಶ ಒಳಗೊಂಡ ಪ್ರದೇಶ ಇದೀಗ ನೂತನ ತಾಲೂಕಾಗಿ ಬೆಳೆಯಿತ್ತಿದೆ. ಸಹೋದರಿಯರಿಬ್ಬರೂ ಪದವಿ ಶಿಕ್ಷಣ ಪಡೆಯುವ ಕಾಲದಲ್ಲಿಯೇ ತಮ್ಮ ಊರಿನಲ್ಲಿ ಒಂದು ಪದವಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಕನಸನ್ನು ಕಂಡಿದ್ದರು. ಫೌಝಿಯಾ, ಮತ್ತು ಸಮೀರಾ ವಿ.ವಿ ಶಿಕ್ಷಣ ಪಡೆದು ಹೊರಬರುತ್ತಲೇ ತಮ್ಮ ಕನಸಿಗೆ ಸಾಕಾರ ರೂಪ ಕೊಡುವ ನಿಟ್ಟಿನಲ್ಲಿ ಯೋಚಿಸಿ ಕಾರ್ಯ ಪ್ರವೃತ್ತರಾದರು. ಇವರ ಸಕಾರಾತ್ಮಕ ಚಿಂತನೆಗಳಿಗೆ ಸಮಾಜದ ಎಲ್ಲ ವರ್ಗಗಳ ಸಮಾನ ಮನಸ್ಕ ಚಿಂತಕರಿಂದ ಸಹಕಾರ ಸಿಕ್ಕಿತು. ಇದನ್ನೇ ಬಂಡವಾಳವಾಗಿಸಿಕೊಂಡು ಶಿಕ್ಷಣ ರಂಗದ ಮೇಲೆ ಅಮಿತ ಪ್ರೀತಿ ಹೊಂದಿರುವ ಫೌಝಿಯಾ ಮತ್ತು ಸಮೀರಾ ಕಡಬದ ಸುಂದರ ಗೌಡರ ಬಾಡಿಗೆ ಕಟ್ಟಡವೊಂದರಲ್ಲಿಯೇ ‘ಏಮ್ಸ್ ವಿದ್ಯಾ ಸಂಸ್ಥೆ’ಯನ್ನು ಆರಂಭಿಸಿಯೇ ಬಿಟ್ಟರು.” ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ “ಎಂಬುದು ಹಳೆಯ ಮಾತಾಗಿ ಕಾಲೇಜನ್ನೂ ಕಟ್ಟಬಲ್ಲರು ಎಂಬುದು ದೃಷ್ಟಾಂತವಾಯಿತು. ಜನಮಾನಸದಲ್ಲಿ ಪ್ರೇರಕ ಶಕ್ತಿಗಳಾಗಿ ಮೂಡಿಬಂದರು.

0002

ಪದವಿ ಶಿಕ್ಷಣ ಪಡೆಯಲು ದೂರದ ಊರಿಗೆ ಎಡತಾಕಬೇಕಾಗಿದ್ದ ಸರ್ವ ಧರ್ಮೀಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ಬವಣೆಯನ್ನು ನಿವಾರಿಸಿದ ಭಗೀರಥೆಯರು ಇವರೆಂದರೆ ತಪ್ಪಾಗಲಾರದು.ಇದರ ಜೊತೆಗೆ ಸಮರ್ಥ ಆಡಳಿತ ಮಂಡಳಿಯ ಉಸ್ತುವಾರಿ, ಸಲಹಾ ಮಂಡಳಿಯ ಸದಸ್ಯರ ಸಕಾಲಿಕ ಮಾರ್ಗದರ್ಶನವೂ ಉಲ್ಲೇಖನೀಯವಾಗಿದೆ.
ಒಂದು ಕಡೆಯಲ್ಲಿ ಸಂಸ್ಥೆಯು ತನ್ನ ಪ್ರಗತಿಯ ಪಥದಲ್ಲಿ ಸಾಗುತ್ತರುವಾಗ ಮತ್ತೊಂದು ಮಗ್ಗುಲಲ್ಲಿ ಸರಾಗ ಚಲನೆಗೆ ನಿರಂತರ ” ಗಾಲಿ “ಗಳಾಗಿ ಸೇವೆಯಿತ್ತ ಸಂಸ್ಥೆಯ ಉಪ ಪ್ರಾಂಶುಪಾಲೆ ವಾಣಿಜ್ಯ ವಿಭಾಗದ ಕುಮಾರಿ ಅಮಿತಾ , ಕುಮಾರಿ ಹಪ್ಸಾ , ಶ್ರೀಮತಿ *ಡೈಸಿರೋಶನ್* , ಶ್ರೀಮತಿ ನಿಶಾ ವಿಕ್ರಾಂತ್* ಕುಮಾರಿ ಶಕೀಲಾ ಫರ್ವಿನ್ಹೀಗೆ ೧೮ ಬೋಧಕರು ಮತ್ತು ಬೋಧಕೇತರರ ಸೇವೆಯನ್ನೂ ಕೃತಜ್ಞತೆ ಯಿಂದಲೇ ನೆನೆಯಲೇಬೇಕು. ಗ್ರಾಮೀಣ ಭಾಗದ ವಿದ್ಯಾಸಕ್ತರಿಗೆ ಈ ಸಂಸ್ಥೆ ಆಸರೆಯೂ ಅಭಿಮಾನಿಗಳಿಗೆ ಸೂರೂ ಆಯಿತು. ಇಲ್ಲಿ ಕಲಿತವರು ದೇಶ-ವಿದೇಶಗಳಲ್ಲಿ ತಮ್ಮದೇ ಸಾಧನೆಯ ಮೂಲಕ ‘ಏಮ್ಸ್’ ಗೆ ಹೆಸರು ತರುತ್ತಿದ್ದಾರೆ.ಇದು ಸಂಸ್ಥೆಯ ಪಾಲಿನ ಹೆಗ್ಗಳಿಕೆಗೆಯಾಗಿದೆ.e3d367b1-efb0-4af4-a8c6-4a5adda1ec91

ಗ್ರಾಮೀಣ ಭಾಗದ ಮಕ್ಕಳೂ ಉನ್ನತ ಶಿಕ್ಷಣ ಪಡೆದು, ಸಮಾಜದಲ್ಲಿ ಉನ್ನತ ಹಾಗೂ ಆದರ್ಶ ವ್ಯಕ್ತಿಗಳಾಗಿ ಬದುಕಬೇಕೆಂಬ ಧ್ಯೇಯಧಾರಿಗಳಾದ ನಾರಿಧ್ವಯರ ಕನಸೂ ನನಸಾಯಿತು. ಸುಸಂಸ್ಕೃತ ಸಮಾಜ ಕಟ್ಟುವ ದೂರದೃಷ್ಟಿಯನ್ನು ಹೊಂದಿರುವ ಈ ಸಂಸ್ಥೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯತ್ತ ಗಮನಹರಿಸುತ್ತಿದೆ. ಇಲ್ಲಿ ಬಹುಪಾಲು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದ್ದು, ಸಂಸ್ಥೆ ಸಮಾಜದ ದೇಣಿಯನ್ನು ಮರೆಯುವಂತಿಲ್ಲ. ತಮ್ಮಿಂದಲೇ ಈ ಸಂಸ್ಥೆ ರೂಪುಗೊಂಡಿದೆ ಎಂಬ ಅಹಂಮಿಕೆ ಫೌಝಿಯಾಯರಲ್ಲೋ ಅಥವಾ ಸಹೋದರಿ ಸಮೀರಾರಲ್ಲಾಗಲಿ ಲವಲೇಶವೂ ಇಲ್ಲ ಎಂದರೆ ನಂಬಲು ಸಾಧ್ಯವಿಲ್ಲ ಎಂದರೂ ನಂಬಲೇಬೇಕು.211f96b7-4ef0-4e25-942a-f165e56c45f8

ಹೀಗೂ ಇದೆಯಾ! ಎಂದು ಹುಬ್ಬೇರಿದರೂ ಇದು ಅತಿಶಯ ಅಲ್ಲ.ನಮ್ಮ ಮುಂದೆ ಅನಾವರಣಗೊಂಡ ಸತ್ಯಸ್ಯ ಸತ್ಯ !!ಹಾಗೆಂದ ಮಾತ್ರಕ್ಕೆ ಇವರ ಪಾಲಿಗೆ ಇದು ಹೂವಿನ ಹಾದಿಯೇ ?
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕಷ್ಟದ ದಿನಗಳೊಂದಿಗೆ ಸೆಣಸಾಡುತ್ತಿದ್ದಾರೆ ಹಾಗಂತ ಹಿಂಜರಿದರೇ ? ಸುತಾರಾಂ ಇಲ್ಲ. ಹಿಡಿದ ಛಲಕ್ಕೆಂದೂ ಬೆನ್ನು ತೋರಿಸುವ ಅಂಜಿಕೆಯ ನಡೆ ಇವರಿಂದ ಮಾರುದೂರ. ಮುಂದುವರಿಯಬೇಕು, ಎಲ್ಲಾ ಭಾಗದ ಮಕ್ಕಳ ಭವಿಷ್ಯದ ಆಶೋತ್ತರಗಳಿಗೆ ಏಮ್ಸ್ ಆಸರೆಯಾಗಬೇಕು,ನಿಶ್ಯಕ್ತರ ಧ್ವನಿಯಾಗಬೇಕು ಅನ್ನುವ ಫೌಝಿಯಾ ಮತ್ತು ಸಮೀರಾ ಜಂಟಿಯಾಗಿಯೇ ಮುನ್ನುಡಿ ಬರೆದಿದ್ದಾರೆ. ಸಂಸ್ಥೆಯ ಪರವಾಗಿ ಈಗಾಗಲೇ 32ಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.ಇತ್ತೀಚೆಗೆ ಫೌಝಿಯಾ ಕರ್ನಾಟಕ ಜಾನಪದ ಅಕಾಡೆಮಿಯ ಕಡಬ ಶಾಖೆಯ ತಾಲೂಕು ಅಧ್ಯಕ್ಷೆಯಾಗಿ ಆಯ್ಕೆಯಾಗಿರುತ್ತಾರೆ.00000666

ಇದಲ್ಲದೆ ಇವರಿಗೆ ಸೌಹಾರ್ದೋತ್ಸವ ಪ್ರಶಸ್ತಿ, ಕದಂಬ ಪ್ರಶಸ್ತಿ(ಬೆಂಗಳೂರು), ಬ್ಯಾರೀಸ್ ವರ್ಷದ ಸಾಧಕಿ, ಮಹಿಳಾ ಸಾಧಕಿ ಹೀಗೆ ಅನೇಕ ಪ್ರಶಸ್ತಿಗಳೊಂದಿಗೆ ಸ್ಥಳೀಯವಾಗಿ ಹಲವು ಸಂಘ-ಸಂಸ್ಥೆಗಳ ಗೌರವವೂ ಸಂದಿದೆ.077

ಏಮ್ಸ್ ವಿದ್ಯಾ ಸಂಸ್ಥೆಯು ಪದವಿ ಶಿಕ್ಷಣದ ಜೊತೆಜೊತೆಗೆ ಕ್ಯಾಂಪಸ್ಸಿನಲ್ಲಿ ಮಕ್ಕಳ ಸಾಂಸ್ಕೃತಿಕ, ಕ್ರೀಡಾ ,ಸಾಹಿತಿಕ ಆಸಕ್ತಿಗಳ ಬೆಳವಣಿಗೆಗೆ ಪೂರಕ ವಾತಾವರಣ ಮತ್ತು ವೇದಿಕೆಯನ್ನು ಸೃಷ್ಟಿಸಿದೆ. ಸಮಾಜದ ಯಾವುದೇ ವರ್ಗವು ಶೈಕ್ಷಣಿಕವಾಗಿ ಹಿಂದುಳಿದರೆ , ಅವರು ಭವಿಷ್ಯದಲ್ಲಿ ಎಲ್ಲ ಕ್ಷೇತ್ರದಲ್ಲೂ ಹಿಂದುಳಿಯುತ್ತಾರೆ ಅಥವಾ ಅವರ ಧ್ವನಿ ಕೇಳುವವರೇ ಇಲ್ಲದಂತಾಗುತ್ತದೆ . ಬಡವರು  ಕಷ್ಟದಲ್ಲಿರುವವರಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವವರು ಫೌಝಿಯಾ, ಅದಕ್ಕೆ ತಕ್ಕಂತೆ ಹಿಡಿದ ಕಾಯಕಕ್ಕೆ ಎಳ್ಳಷ್ಟೂ ಚ್ಯುತಿ ಬಾರದಂತೆ ಮುಂದುವರಿಯುತ್ತಿದ್ದಾರೆ.00000588

ಎಷ್ಟೇ ಎಡರು-ತೊಡರುಗಳು ಎದುರಾದರೂ ಧೈರ್ಯಗೆಡದೆ ” ಭಗವಂತನ ಮೇಲೆ ಭಾರ ಹಾಕಿ ಅನ್ಯಾಯಿಗಳನ್ನು ಕ್ಷಮಿಸುತ್ತಾ …ಪ್ರೀತಿಸುತ್ತಾ …ಮುಂದುವರಿಯ ಬೇಕೆಂಬ ಛಲ, ಮಹತ್ವಾಕಾಂಕ್ಷೆಯ ಗುಣ ಅವರಲ್ಲಿ ಎದ್ದು ಕಾಣುತ್ತಿವೆ. ಅವರ ಈ ಧೈರ್ಯಕ್ಕೆ ಉತ್ತೇಜನ ನೀಡುವ ಬಳಗಕ್ಕೆ ಕೊರತೆಯೂ ಇಲ್ಲ. ಹೀಗಿರುವಾಗ ಮಹಿಳೆಯರ ಸಾಹಸಕ್ಕೆ ಸಮಾಜವೂ ಬೆಂಬಲವಾಗಿ ನಿಲ್ಲಬೇಕಲ್ಲವೇ ? ಬರಿಗೈಯಲ್ಲಿ ಮೊಳ ನೇಯಲು ಸಾಧ್ಯವೇ ?.

ಹಾಗಾಗಿ`ಏಮ್ಸ್’ ಪ್ರಗತಿಪಥದಲ್ಲಿ ಮುಂದುವರಿಯಲು ಎಲ್ಲರ ಸಹಕಾರ ಅಗತ್ಯ ವಿದೆ.ಅದರ ನಿರೀಕ್ಷೆಯನ್ನು ಸಂಸ್ಥೆಯು ಬಯಸುತ್ತದೆ .ಎಂಬುದಾಗಿ ಅಧ್ಯಕ್ಷಿಣಿ ಫೌಝಿಯಾ ವಿನಮ್ರವಾಗಿಯೇ ಹೇಳುತ್ತಾರೆ.

ಕಳೆದ ಒಂಭತ್ತು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಏಮ್ಸ್ ವಿದ್ಯಾ ಸಂಸ್ಥೆಯು ಉಚಿತ ಶಿಕ್ಷಣ ನೀಡುತ್ತಾ ಜಾತಿ,ಬೇಧ ಲಿಂಗ ಬಡವ, ಶ್ರೀಮಂತ ಎಂಬ ತಾರತಮ್ಯ ಇಲ್ಲದೆ ಕಾರ್ಯಾಚರಿಸುತ್ತಿದೆ ಸರ್ವರಿಗೂ ವಿದ್ಯೆಯಲ್ಲಿ ಸಮಪಾಲು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸಂಸ್ಥೆಯು ಶ್ರಮಿಸುತ್ತಿದೆ. ಆಧುನಿಕ ಕಾಲದಲ್ಲಿ , ಇಂತಹದೊಂದು ಸಂಸ್ಥೆಯ ಗುರಿಯಂತೆ ಈ ಪ್ರತಿಷ್ಠಿತ ಸಂಸ್ಥೆಯೂ ತನ್ನ ಸ್ವಂತ ಕಟ್ಟಡವನ್ನು ಹೊಂದ ಬೇಕೆನ್ನುವ ಕನಸನ್ನು ಕಾಣುತ್ತಿದೆ.ಇದು ಕೆಲವು ಕೈಗಳಿಂದ ಆಗುವ ಕೆಲಸವಲ್ಲ. ಆದುದರಿಂದ ತಮ್ಮೆಲ್ಲರ ಸಹಕಾರ ಅತ್ಯವಶ್ಯಕವಾಗಿದೆ. ಸ್ವಂತಸ್ಥಳ , ಕಟ್ಟಡ ತುರ್ತಾಗಿ ಆಗಬೇಕಾಗಿದೆ.10011

ಇದಲ್ಲದೇ ಪ್ರಸ್ತುತ ಕಟ್ಟಡದ ಬಾಡಿಗೆಯೂ ಸೇರಿದಂತೆ ಪ್ರತೀ ತಿಂಗಳು 2ಲಕ್ಷ *50 ಸಾವಿರ ರೂಪಾಯಿಯಷ್ಟು ಖರ್ಚು ತಗಲುತ್ತಿದೆ… ಅನಾಥ,ಬಡ, ನಿರ್ಗತಿಕರ ಆಶಾಗೋಪರವಾದ ಈ ಸಂಸ್ಥೆಯ ಉಳಿವು ಮತ್ತು ಬೆಳವಣಿಗೆಗೆ ತಮ್ಮ ಹಾಗೂ ತಮ್ಮಂತವರ ಆರ್ಥಿಕ ನೆರವು ಸಂಸ್ಥೆಗೆ ತುರ್ತಾಗಿ ಬೇಕಾಗಿದೆ. “ಸಮಾಜದಲ್ಲಿ ಹಿಂದುಳಿದವರಿಗೆ ಭವಿಷ್ಯದಲ್ಲೂ ಅಡೆತಡೆ ಇಲ್ಲದೆ ಯಥಾರೂಪದಲ್ಲಿ ಉಚಿತ ಶಿಕ್ಷಣ ಪೂರೈಕೆಯಾಗಬೇಕಿದ್ದರೆ ಮತ್ತು ಸಂಸ್ಥೆ ಸದೃಢ ವಾಗಿ ಬೆಳೆಯ ಬೇಕಿದ್ದರೆ ತಮ್ಮಲ್ಲರ ಆರ್ಥಿಕ ಸಹಕಾರದೊಂದಿಗೆ ಬೆಂಬಲವೂ ಅತೀ ಅವಶ್ಯಕವಾಗಿದೆ.000005

ಸಮಾಜದ ಏಳಿಗಾಗಿ ದುಡಿಯುವ ಅ0ಗಕ್ಕೆ ಸಮಾಜವೇ ಆಸರೆಯಾಗಬೇಕಲ್ಲವೆ ? ಹಾಗಾಗಿ ತಮ್ಮೆಲ್ಲರ ಸಹಕಾರ *ತುರ್ತಾಗಿ ವಿದ್ಯಾದೇಗಲಕ್ಕೆ ಬೇಕಾಗಿದೆ.
ಜನತೆ ಮುಂದೆ ಬಂದಾಗ ,ಸಹಜವಾಗಿಯೇ ಸಂಸ್ಥೆಗೆ ಸರಕಾರದ ಕಡೆಯಿಂದ ಸಹಕಾರ ಸವಲತ್ತುಗಳು ದೊರೆಯುವುದಿಲ್ಲವೇ ? ಎಂಬ ಸಂದೇಹವೂ ಮೂಡಬಹುದು.
ಆದರೆ ಆ ಸಹಕಾರ ಸವಲತ್ತುಗಳನ್ನು ಹೊಂದಬೇಕಾದರೆ ಮೂಲಭೂತ ಸೌಲಭ್ಯಗಳನ್ನು ಹೊಂದಿರ ಬೇಕಾದುದು ನಮ್ಮ ಹೊಣೆಯಾಗಿರುತ್ತದೆ.ಆ ದಿಸೆಯಲ್ಲಿ ವೇದಿಕೆ ಸಿದ್ಧಪಡಿಸಲು ಸಹಕಾರ ಅವಶ್ಯಕವಲ್ಲವೇ ?

ಹೀಗಾಗಿ ನಿಮ್ಮ ಪ್ರತಿಸ್ಪಂದನದ ನಿರೀಕ್ಷೆಯು ಏಮ್ಸ್ ಸಂಸ್ಥೆಯದ್ದಾಗಿದೆ. ಏಮ್ಸ್ ಸದಾ ತಮ್ಮ ನಿರೀಕ್ಷೆ ,ಆಶೋತ್ತರ ಮತ್ತು ಸಲಹೆಗಳಿಗೆ ಮುಕ್ತ ಮನಸ್ಸಿಂದಲೇ ಸ್ಪಂದಿಸಲಿದೆ.
ಮಹಿಳೆಯರು ಸಂಸ್ಥೆಯನ್ನು ಕಟ್ಟಿ ನಡೆಸುತ್ತಾರೆಂದರೆ ಅದು ಅಷ್ಟೊಂದು ಸುಲಭದ ಮಾತೆ ???.ಅದರ ಹಿಂದೆ ಅದೆಷ್ಟೋ ನೋವು,ಕಷ್ಟ ಕೋಟಲೆ ಕೀಟಲೆಗಳೂ ಎದುರಾಗಿರ ಬಹುದು ಅಲ್ಲವೇ.??ಅದರಲ್ಲೂ ಮುಸ್ಲಿಂ ಮಾಹಿಳೆ?? ಮಾನಾಪಮಾನ ವದಂತಿ ಟೀಕೆ ಟಿಪ್ಪಣಿಗಳನ್ನು ಎದರಿಸಿರಬಹುದಲ್ಲವೇ ? ಎಲ್ಲೋ ಪೆಟ್ಟಿ ಅಂಗಡಿಯಲ್ಲಿ ಕುಳಿತ ಮಂದಿಯು ಮಾಡಿದ ಖೊಟ್ಟಿ ವಿಮರ್ಶೆಯನ್ನು ಎದರಿಸಿದ ಪ್ರಸಂಗವೂ ಇರಬಹುದಲ್ಲವೇ ?

ಕಾಲೆಳೆದವರ ಕೈವಾಡ …ಮುಳುಗಿಸ ಬೇಕೆಂದು ಹೊರಟವರ ಹುನ್ನಾರ,!!!ಬೆಳೆಸಿ ಉಳಿಸಬೇಕೆಂದು ಶ್ರಮಿಸಿದವರ ಸಹಕಾರ ಎರಡೂ ಇರಬಹುದಲ್ಲವೇ ? ಹೀಗೆ ನೂರೆಂಟು ಚಿಂತನೆಗಳು ನಿಮ್ಮ ಯೋಚನೆಯ ಹಾದಿಯಲ್ಲಿ ಹಾದು ಹೋದರೂ ಅದು ಇಂತಹ ಸಂಸ್ಥೆಯ ಅಥವಾ ಮಹಿಳೆಯರು ಸಾಧನೆಯ ಪಯಣದಲ್ಲಿ ಸತ್ಯಕ್ಕೆ ದೂರವಾದ ಮಾತಲ್ಲ…
ಈ ನಿಟ್ಟಿನಲ್ಲಿ ನೀವು ಯೋಚನೆ ಮಾಡಿ, ಸಂಪರ್ಕಿಸಿ ಉದಾತ್ತ ಕಾರ್ಯಕ್ಕೆ ನೆರವಾಗುವುದಾರೆ ಸಂಸ್ಥೆಯ ಸಂಪೂರ್ಣ ವಿಳಾಸ ಮತ್ತು ವಿವರ ಇಲ್ಲಿದೆ.

ಏಮ್ಸ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ), ಕಡಬ, ಕಡಬ ತಾಲೂಕು, ದ.ಕ, ಕರ್ನಾಟಕ.
ದೇಣಿಗೆ ನೀಡಿ ಸಹಕರಿಸುವುದಾದರೆ: ಸಂಪರ್ಕಿಸುವ ಮೊಬೈಲ್ ನಂಬರ್: 9880642055 , 9448568681
ಬ್ಯಾಂಕ್ ವಿವರ : ಬ್ಯಾಂಕ್ ಆಫ್ ಬರೋಡ.
ಖಾತೆ ನಂಬ್ರ : 70800100001570
IFSC code : BARBOVJKODK
KOdimbala Branch

ಬರೆಹ : ಧನಂಜಯ ಗುರ್ಪುರ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter