Published On: Sat, Nov 14th, 2020

ಮನೆ ಮನ ಬೆಳಗಲಿ ಈ ದೀಪಾವಳಿ

 ಕವನ :  ಮತ್ತೆ ಬಂದಿದೆ ಬೆಳಕಿನ ಹಬ್ಬ ದೀಪಾವಳಿ ಕತ್ತಲೆಯ ಮಧ್ಯೆ ಬೆಳಕು ತೋರುವ ಈ ದೀಪ ನಮ್ಮ ಬದುಕಿನ ಭಾಗವಾಗಬೇಕಾಗಿದೆ. ಈ ದೀಪ ನಿರಂತರವಾಗಿ ಬೆಳಗಿದರೆ ಮಾತ್ರ ನಾವು ಮುಂದೆ ಸಾಗಬಹುದು.ದೀಪಗಳು ಬೆಳಗಲಿ ಪಟಾಕಿಗಳ ಸದ್ದಿನ ಬದಲಿಗೆ ಪರಿಸರಕ್ಕೆ ಪೂರಕ ಹಸಿರು ಪಟಾಕಿ ಶಬ್ದ ಕೇಳಲಿ ಹಬ್ಬ ಹರಿದಿನಗಳು  ಸದಾ ಕಾಲ ಬರುತ್ತಲಿವೆ.ಆದರೆ ನಾವು ಭಕ್ತಿಭಾವದಿಂದ ಸ್ವಾಗತಿಸೋಣ.
66475760
 ಹಬ್ಬಗಳ ಮಹತ್ವವನ್ನು ತಿಳಿದು  ಸಂಭ್ರಮಿಸೋಣ. ಭಾರತದ ಎಲ್ಲೆಡೆಯೂ ಹಿಂದೂಗಳು ಸಾರ್ವತ್ರಿಕವಾಗಿ ಆಚರಿಸುವ ಧಾರ್ಮಿಕವಾಗಿ ಪ್ರಮುಖ  ಹಬ್ಬಗಳಾದ ಗಣೇಶೋತ್ಸವ, ಅಷ್ಟಮಿ ನವರಾತ್ರಿ ಮಹೋತ್ಸವ ಹಾಗೂ ದೀಪಾವಳಿ. ಈಗಾಗಲೇ ಭಾದ್ರಪದದಲ್ಲಿ ಗಣಪತಿ ಹಬ್ಬ ಅಶ್ವಿಜದಲ್ಲಿ ದಸರಾ  ನಾಡಹಬ್ಬ ಆಚರಿಸಿದೆವು ಈ ಸಂದಭ೯ ಲೋಕಕ್ಕೆ ಒಳಿತಾಗಲಿ ಸವೆ೯ ಜನಾ ಸುಖಿನೋ ಭವಂತು ಎಂದು ಶುಭ ಹಾರೈಸಿದೆವು.
 ಇದೀಗ ಕಾರ್ತಿಕ ಮಾಸದಲ್ಲಿ ದೇಶಾದ್ಯಂತ ಆಚರಿಸಲ್ಪಡುವ ಹರ್ಷೋತ್ಸವದ ಬೆಳಕಿನ ಹಬ್ಬಗಳ ರಾಜ ದೀಪಾವಳಿ. ಮನದ ಅಜ್ಞಾನ,ಅಂಧಕಾರ ಹಾಗೂ ಕೊಳೆಯನ್ನು ತೊಲಗಿಸಿ ಜ್ಞಾನದ ಬೆಳಕನ್ನು ಶುಭ್ರತೆಯನ್ನು ಸಂಕೇತಿಸುವ ಹಬ್ಬವೂ ಇದಾಗಿದೆ. ಸ್ನಾನ, ದಾನ,ಮಾನ ಅಂದರೆ ಸುಯೋ೯ದಯದ ಮೊದಲು ಸ್ನಾನ ಹಿರಿಯರಿಗೆ ಮನೆ ಮಂದಿಗೆ ಹೊಸ ಬಟ್ಟೆ ಅದರೊಂದಿಗೆ ದಾನ ಧಮ೯ ಮಾಡುವುದು ಮಹತ್ವದಾಗಿದೆ.
ದೀಪಾವಳಿಯಲ್ಲಿ ಮಣ್ಣಿನ ಹಣತೆಯು ವಿಶೇಷವಾಗಿದೆ. ಹಣತೆ ಎಂದಾಗಲೇ ಅದು ಮಣ್ಣಿನಿಂದ ಮಾಡಿದಾಗಿರುತ್ತದೆ. ಇದೀಗ ಪ್ರಧಾನಿಯವರ ಆತ್ಮ ನಿಭ೯ರ ಭಾರತಕ್ಕೆ ಪೂರಕವಾಗಿ ಗೋಮಯದಿಂದ ತಯಾರಿಸಿದ ಹಣತೆ ಕೂಡ ಬಂದಿದೆ. ಇಲ್ಲಿ ಮಣ್ಣು, ಬತ್ತಿ ,ಎಣ್ಣೆ ,ಒಂದಕ್ಕೊಂದು ಪೂರಕವಾಗಿ ನಮಗೆ ಜೀವನದ ನಡೆಯನ್ನು ತಿಳಿಸಿಕೊಡುತ್ತದೆ.
ನಮ್ಮ ಪುರಾಣ  ಕತೆಗಳು ದೀಪಾವಳಿ ಹಬ್ಬದ ವಿಶೇಷತೆಯನ್ನು ತಿಳಿಸುತ್ತದೆ.
ಈ ಹಬ್ಬದಲ್ಗಿ ವಿಶೇಷವಾಗಿ ಎಣ್ಣೆಹಚ್ಚಿ ಸ್ನಾನ ಮಾಡುವುದು. ಗೋಮಾತೆಯನ್ನು ಪೂಜಿಸುವುದು. ಧನಲಕ್ಷ್ಮೀಯನ್ನು ಪೂಜಿಸುವ ಅಂಗಡಿ ಪೂಜೆ ಆಯುಧ ಅಂದರೆ ನಮ್ಮ ಕೆಲಸದ ಸಲಕರಣೆಗಳ ಹಾಗೆಯೇ ಕೃಷಿ ಸಮೃದ್ಧಿಯ ಸಂಕೇತವಾಗಿ ಬಲಿಯೇಂದ್ರ ಪೂಜೆ ಪ್ರತಿ ವಸ್ತುವಲ್ಲಿ ದೇವರ ಸ್ವರೂಪದ ಭಾಗವಾಗಿ ವಾಹನ ಪೂಜೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಆಚರಿಸುತ್ತೇವೆ.
ಇವೆಲ್ಲವುಗಳಿಗೆ ಸಂಭ್ರಮ ತುಂಬುವುದೇ ಸಾಲು ಸಾಲಿನಲ್ಲಿ ಬೆಳಗುವ ದೀಪಗಳು. ಹಾಗಾಗಿಯೇ ಈ ಹಬ್ಬವೂ ಬೆಳಕಿನ ಹಬ್ಬವಾಗಿದೆ. ಬೆಳಗುವ ದೀಪಗಳು ಎಲ್ಲ ಮನೆ – ಮನಗಳಿಗೆ ಮುದ ನೀಡುತ್ತಿರುತ್ತವೆ. ಮಣ್ಣಿನೊಡಲಿನಲ್ಲಿಯೇ ಲೀನವಾಗುವ ನಮ್ಮ ಕಾಯವು ಸಾರ್ಥಕಗೊಳ್ಳುವುದು ಅರ್ಥಪೂರ್ಣ ಜೀವನದಿಂದ ಎಂದು ತಿಳಿಸಿಕೊಡುತ್ತಿದೆ.
 *ಕರೋನಾ ದೂರವಾಗಲಿ ಹೊಸ ಬೆಳಕು ಮೂಡಲಿ* :-
download
ಈ ಬಾರಿ ಕೊರೊನಾದ ಆತಂಕವೂ ನಮ್ಮೆಲ್ಲರಿಗೂ ಎಚ್ಚರಿಕೆಯನ್ನು ನೀಡಿದೆ. ಈ ಸೋಂಕಿನ ಪರಿಣಾಮವೇನೆಂದು ನಾವೆಲ್ಲರೂ ಅರಿತಿದ್ದೇವೆ. ಪ್ರತಿ ಜೀವ ಪರಿಶುದ್ಧವಾದ ವಾಯು ಬಿಸಿ ನೀರು ಉತ್ತಮ ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕಾಗಿದೆ.
 *ಸಕಾ೯ರದ ನಿಯಮ ಪಾಲಿಸೋಣ: -*
ನಮ್ಮ ಸಮಾಜ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪಟಾಕಿ ಸಿಡಿಸುವುದನ್ನು ಕೈ ಬಿಡೋಣ. ನಾವೆಲ್ಲರೂ ಪರಿಸರ ಮಾಲಿನ್ಯ ಹಾಗೂ ಜೀವಹಾನಿಯಾಗುವುದನ್ನು ತಪ್ಪಿಸಬೇಕಾಗಿದೆ.
 ಈಗಾಗಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ವಚ್ಛ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಪಟಾಕಿ ಸುಡದಂತೆ ಸೂಚನೆಯನ್ನು ನೀಡುವ ಜಾಗೃತಿ ಮೂಡಿಸುತ್ತಿದೆ. ಕೊರೊನಾ ಪರಿಸ್ಥಿತಿಯು ನಿಯಂತ್ರಣಕ್ಕೆ ಬರುತ್ತಿರುವುದು ಸಂತೋಷದ ವಿಷಯ ಆದರೆ ಈ ಬಗ್ಗೆ ವೈಮರೆಯದೆ ಸಕಾ೯ರದ ನಿಯಮ ಪಾಲಿಸೋಣ.  ಪಟಾಕಿಯ ಸದ್ದುಗದ್ದಲ ಅದರ ಕಸಗಳು ನೈರ್ಮಲ್ಯಕ್ಕೆ ಧಕ್ಕೆಯಾಗದಿರಲಿ.
ದುಂದುವೆಚ್ಚದ ಆಚರಣೆಗೂ ಕಡಿವಾಣ ಹಾಕೋಣ. ಮತ್ತೆ ನಾವೆಲ್ಲರೂ ಸಂತಸದಿ ಒಂದಾಗಿ “ಜಾತಿ ಭೇಧವಿಲ್ಲದ ಜ್ಯೋತಿಯನ್ನು” ಬೆಳಗೋಣ. ಈ ದೀಪವು ಜಗತ್ತಿಗೆ ಬಂದ ಈ ವ್ಯಾಧಿಯನ್ನು ಹೊಡೆದೋಡಿಸಲಿ ಮಾನವರು ಉತ್ತಮವಾಗಿ ಬದುಕಲು ಭಗವಂತ ರಕ್ಷಣೆ ಕೊಡಲಿ
ಶಾಂತಿ ನೆಮ್ಮದಿ ನೀಡಲಿ.
ನಮ್ಮೊಳಗಿನ ಅಜ್ಞಾನವನ್ನು ನಾಶಮಾಡಿ ಜ್ಞಾನವನ್ನು ನೀಡಲಿ  ಮನುಕುಲಕ್ಕೆ ಒಳಿತಾಗಲಿ. ಎಲ್ಲರೂ ಮತ್ತೊಮ್ಮೆ ಹಳೆಯ ಜೀವನ ಸಾಗಿಸುವಂತಾಗಲಿ  ಈ ಕರೋನಾದಿಂದ ನಾವೆಲ್ಲರೂ ಪಾಠ ವನ್ನು ಕಲಿತು ಸರಳ ಜೀವನ ಸಾಗಿಸೋಣ ದಾನ ಧಮ೯ದ ಮೂಲಕ ಮಾನವೀಯತೆಯ ಬೆಳಕು ಬಿರೋಣ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter