Published On: Mon, Oct 19th, 2020

ಉನ್ನತ ಶಿಕ್ಷಣಕ್ಕೆ ಕೈಬೀಸಿ ಕರೆವ ಕಡಬದ `ಏಮ್ಸ್’ ವಿದ್ಯಾಸಂಸ್ಥೆ ಸಮಾಜದ ಸಹಕಾರ ಅವಶ್ಯ ಎನ್ನುವ ಸಂಸ್ಥೆಯ ಅಧ್ಯಕ್ಷೆ ಮರಿಯಂ ಫೌಝಿಯಾ

 

ಮಂಗಳೂರಿನಿಂದ ಸರಿ ಸುಮಾರು 80 ಕಿಮೀ ದೂರದಲ್ಲಿರುವ ಕಡಬದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಶಿಕ್ಷಣ ರಂಗದಲ್ಲಿ ಮಿಂಚುತ್ತಿರುವ `ಏಮ್ಸ್’ ಎಂದೇ ಹೆಸರಾಗಿರುವ ಏಮ್ಸ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್(ರಿ) ಗ್ರಾಮೀಣ ಭಾಗದ ಸಹಿತ ನಗರ ಪ್ರದೇಶಗಳ ವಿದ್ಯಾಸಕ್ತರಿಗೆ ವಿದ್ಯಾರ್ಜನೆಯ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂಎ, ತುಮಕೂರು ವಿವಿಯಿಂದ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶಿಕ್ಷಕರ ತರಬೇತಿ ಹೊಂದಿರುವ ಕಡಬದ ಆತೂರಿನ ಮರಿಯಂ ಫೌಝಿಯಾ ಎಂಬಾಕೆ ಈ ವಿದ್ಯಾ ಸಂಸ್ಥೆಯ ರೂವಾರಿ ಎಂದರೆ ಯಾರಿಗಾದರೂ ಅಚ್ಚರಿಯಾಗಬೇಕು ಮತ್ತು ಈಕೆಗೆ ಹ್ಯಾಟ್ಸ್‍ಪ್ ಎನ್ನಲೇ ಬೇಕು.

ಕಡಬ ಹೆಚ್ಚು ಗ್ರಾಮೀಣ ಪ್ರದೇಶ ಒಳಗೊಂಡ ತಾಲೂಕು. ತಾನು ಪದವಿಯಲ್ಲಿರುವಾಗಲೇ ತನ್ನೂರಲ್ಲೊಂದು ಪದವಿ ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕೆಂಬ ಕನಸು ಕಂಡಿದ್ದ ಫೌಝಿಯಾ, ವಿವಿ ಶಿಕ್ಷಣ ಪಡೆದು ಹೊರಬರುತ್ತಲೇ ತನ್ನ ಕನಸು ನನಸಾಗಿಸುವ ನಿಟ್ಟಿನಲ್ಲಿ ಯೋಚಿಸಿದರು. ಇವರ ಸಕಾರಾತ್ಮಕ ಚಿಂತನೆಗಳಿಗೆ ಸಮಾಜದ ಎಲ್ಲ ವರ್ಗಗಳ ಸಮಾನ ಮನಸ್ಕ ಚಿಂತಕರಿಂದ ಸಹಕಾರ ಸಿಕ್ಕಿತು. ಇದನ್ನೇ ಬಂಡವಾಳವಾಗಿಸಿಕೊಂಡ ಶಿಕ್ಷಣ ರಂಗದ ಮೇಲೆ ಅಮಿತ ಪ್ರೀತಿ ಹೊಂದಿರುವ ಫೌಝಿಯಾ ಕಡಬದಲ್ಲೊಂದು ಬಾಡಿಗೆ ಕಟ್ಟಡದಲ್ಲಿ ಏಮ್ಸ್ ವಿದ್ಯಾ ಸಂಸ್ಥೆ ಆರಂಭಿಸಿದರು. ಗ್ರಾಮೀಣ ಭಾಗದ ವಿದ್ಯಾಸಕ್ತರಿಗೆ ಈ ಸಂಸ್ಥೆ ಆಸರೆಯಾಯಿತು ಮತ್ತು ಇಲ್ಲಿ ಕಲಿತವರು ದೇಶ-ವಿದೇಶಗಳಲ್ಲಿ ತಮ್ಮದೇ ಸಾಧನೆಯ ಮೂಲಕ ಏಮ್ಸ್  ಗೆ ಹೆಸರು ತರುತ್ತಿರುವುದು ವರ್ತಮಾನ !

ಗ್ರಾಮೀಣ ಭಾಗದ ಮಕ್ಕಳೂ ಉನ್ನತ ಶಿಕ್ಷಣ ಪಡೆದು, ಸಮಾಜದಲ್ಲಿ ಉನ್ನತ ಹಾಗೂ ಆದರ್ಶ ವ್ಯಕ್ತಿಗಳಾಗಿ ಬದುಕಬೇಕೆಂಬ ಧ್ಯೇಯ ಹೊಂದಿರುವ ಈ ಸಂಸ್ಥೆ ಪ್ರತಿ ಬಾರಿಯೂ ವಿದ್ಯಾರ್ಥಿಗಳ ಏಳ್ಗೆಯತ್ತ ಗಮನಹರಿಸುತ್ತಿದೆ. ಇಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಸಮಾಜದ ದೇಣಿಗೆ ಮರೆಯುವಂತಿಲ್ಲ. ತನ್ನಿಂದಲೇ ಈ ಸಂಸ್ಥೆ ರೂಪುಗೊಂಡಿದೆ ಎಂಬ ಅಹಂ ಫೌಝಿಯಾಯರಲ್ಲಿ ಎಳ್ಳಷ್ಟೂ ಇಲ್ಲ. ಫೌಝಿಯಾರಿಗೆ ಸಹೋದರಿ ಸಮೀರಾ ಕೆ ಎ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕಷ್ಟದ ದಿನಗಳೊಂದಿಗೆ ಸೆಣಸಾಡುತ್ತಿರುವ ಈಕೆ, ಹಿಡಿದ ಛಲಕ್ಕೆಂದೂ ಬೆನ್ನು ತೋರಿಸುವ ಗುಣ ಒಂದಿಲ್ಲ. ಮುಂದುವರಿಯಬೇಕು, ಈ ಭಾಗದ ಮಕ್ಕಳ ಭವಿಷ್ಯದ ಆಶೋತ್ತರಗಳಿಗೆ ಏಮ್ಸ್ ಆಸರೆಯಾಗಬೇಕು ಎನ್ನುವ ಫೌಝಿಯಾ, ಈಗಾಗಲೇ 32ಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಕಡಬ ತಾಲೂಕು ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಇವರಿಗೆ ಸೌಹಾರ್ದೋತ್ಸವ ಪ್ರಶಸ್ತಿ, ಕದಂಬ ಪ್ರಶಸ್ತಿ(ಬೆಂಗಳೂರು), ಬ್ಯಾರೀಸ್ ವರ್ಷದ ಸಾಧಕಿ, ಮಹಿಳಾ ಸಾಧಕಿ ಹೀಗೆ ಅನೇಕ ಪ್ರಶಸ್ತಿಗಳೊಂದಿಗೆ ಸ್ಥಳೀಯವಾಗಿ ಹಲವು ಸಂಘ-ಸಂಸ್ಥೆಗಳ ಗೌರವ ಸಂದಿದೆ.

ಏಮ್ಸ್ ವಿದ್ಯಾ ಸಂಸ್ಥೆಯು ಪದವಿ ಶಿಕ್ಷಣದ ಜೊತೆಜೊತೆಗೆ ಕ್ಯಾಂಪಸ್ಸಿನಲ್ಲಿ ಮಕ್ಕಳ ಸಾಂಸ್ಕøತಿಕ, ಕ್ರೀಡಾ ಆಸಕ್ತಿಗಳ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಿದೆ. “ಸಮಾಜದ ಯಾವುದೇ ವರ್ಗವು ಶೈಕ್ಷಣಿಕವಾಗಿ ಹಿಂದುಳಿದರೆ, ಅವರು ಭವಿಷ್ಯದಲ್ಲಿ ಎಲ್ಲ ಕ್ಷೇತ್ರದಲ್ಲೂ ಹಿಂದುಳಿಯುತ್ತಾರೆ ಅಥವಾ ಅವರ ಧ್ವನಿ ಕೇಳುವವರೇ ಇಲ್ಲದಂತಾಗುತ್ತದೆ. ಬಡವರು, ಕಷ್ಟದಲ್ಲಿರುವವರಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು” ಎನ್ನುವ ಫೌಝಿಯಾ, ಹಿಡಿದ ಕಾಯಕಕ್ಕೆ ಎಳ್ಳಷ್ಟೂ ಚ್ಯುತಿ ಬಾರದಂತೆ ಮುಂದುವರಿಯುತ್ತಿದ್ದಾರೆ. ಎಷ್ಟೇ ಎಡರು-ತೊಡರುಗಳು ಎದುರಾದರೂ ಧೈರ್ಯಗೆಡದೆ ಮುಂದುವರಿಯಬೇಕೆಂಬ ಛಲ ಅವರಲ್ಲಿದೆ. ಅವರ ಈ ಧೈರ್ಯಕ್ಕೆ ಉತ್ತೇಜನ ನೀಡುವ ಬಳಗವೂ ಇದೆ. ಮಹಿಳೆಯೊಬ್ಬರ ಸಾಹಸಕ್ಕೆ ಸಮಾಜವೂ ಬೆಂಬಲವಾಗಿ ನಿಲ್ಲಬೇಕಲ್ಲವೇ ?

`ಏಮ್ಸ್’ ಪ್ರಗತಿಗೆ ಸಹಕಾರ

ಬಯಸುತಿದೆ : ಫೌಝಿಯಾ

ಕಳೆದ ಒಂಬತ್ತು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಏಮ್ಸ್ ವಿದ್ಯಾಸಂಸ್ಥೆ, ಉಚಿತ ಶಿಕ್ಷಣ ನೀಡುತ್ತ ಬಂದಿದೆ. ವಿದ್ಯೆಗೆ ಬಡವ, ಶ್ರೀಮಂತ ಎಂಬ ಬೇಧ ಇಲ್ಲ. ಸರ್ವರಿಗೂ ವಿದ್ಯೆಯಲ್ಲಿ ಸಮಪಾಲು ಎಂಬ ಧ್ಯೇಯ ವಾಕ್ಯದಡಿ ಸಂಸ್ಥೆ ಕಾರ್ಯಾಚರಿಸುತ್ತಿದೆ. ಆಧುನಿಕ ವಿದ್ಯಮಾನದಲ್ಲಿ ಇಂತಹದೊಂದು ಪ್ರತಿಷ್ಠಿತ ಸಂಸ್ಥೆ ಸ್ವಂತದ ಕಟ್ಟಡ ಬೇಕೆನ್ನುವ ಕನಸು ಹೊಂದಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯವಶ್ಯಕ. ಬಾಡಿಗೆ ಕಟ್ಟಡಕ್ಕೆ ಪ್ರತಿ ತಿಂಗಳು 2.50 ಲಕ್ಷ ರೂ ಖರ್ಚಾಗುತ್ತದೆ. ಅನಾಥರು, ಬಡವರು, ನಿರ್ಗತಿಕರು ಹಾಗೂ ಸಮಾಜದಲ್ಲಿ ಹಿಂದುಳಿದವರಿಗೆ ಭವಿಷ್ಯದಲ್ಲೂ ಅಡೆತಡೆ ಇಲ್ಲದೆ ಶಿಕ್ಷಣ ಪೂರೈಕೆಯಾಗಬೇಕಿದ್ದರೆ ಅಥವಾ ಸಂಸ್ಥೆ ಬೆಳೆಯಬೇಕಿದ್ದರೆ ತಮ್ಮವರ ಆರ್ಥಿಕ ಸಹಕಾರ ಅವಶ್ಯ. ಪ್ರತಿಫಲದ ನಿರೀಕ್ಷೆಯಲ್ಲಿದೆ ಏಮ್ಸ್. ಸಂಸ್ಥೆಯು ನಿಮ್ಮ ನಿರೀಕ್ಷೆಗಳು, ಸಲಹೆಗಳಿಗೆ ಮುಕ್ತ ಮನಸ್ಸಿಂದ ಸ್ಪಂದಿಸಲಿದೆ.*

*ನಮ್ಮನ್ನು ಸಂಪರ್ಕಿಸಿ :

ಏಮ್ಸ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ(ರಿ) ಕಡಬ, ಕಡಬ ತಾಲೂಕು, ದ.ಕ, ಕರ್ನಾಟಕ.

ಬ್ಯಾಂಕ್ : ಬ್ಯಾಂಕ್ ಆಫ್ ಬರೋಡ

ಖಾತೆ ನಂಬ್ರ : 70800100001570

ಐಎಫ್‍ಎಸ್‍ಸಿ ಕೋಡ್ : ಬಿಎಆರ್‍ಬಿಒವಿಜೆಕೆಒಡಿಕೆ BARBOVJKODK

(ಕೋಡಿಂಬಳ)

ಬರೆಹ : ಧನಂಜಯ ಗುರ್ಪುರ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter