ಬಂಟ್ವಾಳ:ಬಾಲಪ್ರತಿಭೆಯೊರ್ವಳ ಫೇಸ್ ಲೈವ್ ಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ಕಮೆಂಟ್ ಮಾಡಿ ಲೈಂಗಿಕವಾಗಿ ಮುಜುಗರವುಂಟು ಮಾಡಿರುವ ಘಟನೆ ನಡೆದಿದ್ದು,ಆರೋಪಿಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮುನಿರಾಜ.ಪಿ. ಎಂಬಾತನ ವಿರುದ್ದ ಕೇಸು ದಾಖಲಾಗಿದ್ದು, ಈತನಿಗಾಗಿ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ತಂಡ ಶೋಧ ಕಾರ್ಯನಡೆಸುತ್ತಿದ್ದಾರೆ.
ಮೋಹನ ದಾಸ್ ಕೊಟ್ಟಾರಿ ಎಂಬವರು ಈ ಬಗ್ಗೆ ಕೇಸು ದಾಖಲಿಸಿದ್ದು,ಕೋವಿಡ್-19 ನಿಂದಾಗಿ ಪ್ರತಿಭಾವಂತ ಮಕ್ಕಳಿಗೆ ಸಂಗೀತ, ನೃತ್ಯ, ಸಾಂಸ್ಕೃತಿಕವಾಗಿ ಪ್ರದರ್ಶನಕ್ಕೆ ವೇದಿಕೆಗಳು ಇಲ್ಲದ ಕಾರಣ ಮುಗ್ದ ಮಕ್ಕಳಿಕೆ ಪ್ರತಿಭೆಯನ್ನು ಪೋಷಿಸುವ ಸಲುವಾಗಿ ಫೇಸ್ ಬುಕ್ ಸಾಂಸ್ಕೃತಿಕ ಲೈವ್ ಪೇಜ್ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದ್ದು,ಈ ಸಂದರ್ಭ ದಲ್ಲಿ ಆರೋಪಿ ಮುನಿರಾಜ ಪಿ ತನ್ನ ಮೊಬೈಲ್ ನಂಬರ್ ನಿಂದ ಬಾಲಕಿಯೋರ್ವಳಿಗೆ ಅಶ್ಲೀಲ ಪದಗಳನ್ನು ಬಳಸಿ ಕಮೆಂಟ್ ಮಾಡಿ ಆಕೆಯ ಪ್ರತಿಭೆಗೆ ಧಕ್ಕೆ ಉಂಟು ಮಾಡಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಆರೋಪಿತನ ಮೊಬೈಲ್ ಗೆ ಕರೆ ಮಾಡಿದಾಗ ನಾನು ಜೈಲಿಗೆ ಹೋದರೆ ಒಂದು ತಿಂಗಳಲ್ಲಿ ಹೊರಗೆ ಬಂದು ನಿಮ್ಮನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.ಈ. ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.
