ಸುದ್ದಿ9 ಕೈಕಂಬ: ಹಲವಾರು ವರ್ಷಗಳಿಂದ ಕೈಕಂಬದಲ್ಲಿ ಕಪ್ಪು ಬಿಲುಪು ಛಾಯ ಚಿತ್ರ ಪೋಟೋಗ್ರಾಫರ್ ಹಾಗಿ ಸೇವೆ ಸಲ್ಲಿಸಿದ್ದ ಇತ್ತೀಚೆಗೆ ನಿವೃತಿ ಹೊಂದಿದ ಗೀತಾಂಜಲಿ ಸ್ಟುಡಿಯೋ ಮಾಲಕ ರಾಘವ ಶೆಟ್ಟಿ(74 ) ಅವರು ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಅ.12ರಂದು ಭಾನುವಾರ ನಿಧನ ಹೊಂದಿದರು.

ಅವರ ಪಾರ್ಥೀವ ಶರೀರವನ್ನು ಕೈಕಂಬದ ಅವರ ಮನೆಯ ಹತ್ತಿರದ ಲ್ಲಿ 13ರಂದು ಸೋಮವಾರ ಅಂತ್ಯ ಕ್ರೀಯೆ ನಡೆಸಲಿದ್ದಾರೆ. ಅವರು ಪತ್ನಿ ಇಬ್ಬರು ಪುತ್ರಿಯರು ಮತ್ತು ಒರ್ವ ಪುತ್ರನನ್ನು ಅಲ್ಲದೇ ಅಪಾರ ಬಂದು ವರ್ಗದವರನ್ನು ಅಗಳಿದ್ದಾರೆ . ಅವರ ನಿಧನಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯನ್ ವತಿಯಿಂದ ವಿಠಲ ಚೌಟ, ಕರುಣಾಕರ ಕಾನಂಗಿ (ಎಸ್ ಕೆ ಎಪ್ ಎ) ಹಾಗೂ ಹಲಾವಾರು ಛಾಯಗ್ರಾಹಕರು ಅವರು ಸಂತಾಪ ಸೂಚಿಸಿದ್ದಾರೆ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಮಾಡ , ಗೋಪಾಲ್ ಕ್ರಷ್ಣ , ಮಜೀದ್ ಸುರಲ್ಪಾಡಿ, ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
