ಸುದ್ದಿ9 ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಯುವ ಸಮಿತಿ ಇದರ ವತಿಯಿಂದ ಕುಡುಬಿ ವಾವಿನಿ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವವು ಅ.12ರಂದು ಭಾನುವಾರ ಮಿಜಾರ್ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಜರಗಿತು.
ಇದರ ಉದ್ಘಾಟನೆಯನ್ನು ಜಾನಪದ ಗೌರವ ಪ್ರಶಸ್ತಿ ವಿಜೇತ ಮೈಂದೇರಿ ಬಾಬಣ್ಣ ಉದ್ಘಾಟಿಸಿದರು. ಮಿಜಾರ್ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಮುರಳೀಧರ ಭಟ್ ಆಶೀರ್ವಚನ ನೀಡಿದರು.

ಸಭಾದ್ಯಕ್ಷತೆ ಮುಚ್ಚೂರು ನೆಲ್ಲಿಜೆ ನಿವೃಯ ಉಪಾಧ್ಯಾಯ ಹರಿಚ್ಚಂದ್ರ ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಕಡುಬಿ ಜನಾಂಗದ ರಾಜ್ಯಧ್ಯಕ್ಷ ಎಂ ರಾಮಗೌಡ ಮಿಜಾರು, ದ.ಕ ಜಿಲ್ಲಾ ಕುಡುಬಿ ಜನಾಂಗದ ಅಧ್ಯಕ್ಷ ಗೋಪಾಲ ಗೌಡ ,ಜಿಲ್ಲಾ ಪಂ. ಸದಸ್ಯ ಜನಾರ್ಧನ ಗೌಡ, ಮಂಗಳೂರು ತಾ. ಪಂ. ಉಪಾದ್ಯಕ್ಷ ಪ್ರಕಾಶ್ ಗೌಡ , ಕುಡುಬಿ ವಾಹಿನಿ ಮಾಸ ಪತ್ರಿಕೆಯ ಪ್ರಧಾನ ಸಂಪಾದಕಿ ಭಾಗ್ಯಶ್ರೀ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಜಾನಪದ ಗೌರವ ಪ್ರಶಸ್ತಿ ವಿಜೇತ ಮೈಂದೇರಿ ಬಾಬಣ್ಣ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಯಕ್ಷಗಾನ ಹಾಸ್ಯ ಕಲಾವಿದ ಮಿಜಾರು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.




