ಬಂಟ್ವಾಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 2015ರ ಜ. 21ರಿಂದ 31ರ ತನಕ ವಿಜ್ರಂಭಣೆಯಿಂದ ‘ಮಹಾಮಸ್ತಕಾಭಿಷೇಕ’ ನಡೆಯಲಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಈ ಬಗ್ಗೆ ಭಾನುವಾರ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಸಮಿತಿ ಕಾಯರ್ಾಧ್ಯಕ್ಷರಾಗಿರುವ ಅವರು ಮಾತನಾಡಿದರು.
ರಾಜಗುರು ಲಲಿತಕೀತರ್ಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿ ಗೌರವ ಉಪಸ್ಥಿತಿಯಲ್ಲಿ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಈಗಾಗಲೇ ಧರ್ಮಸ್ಥಳ ಧಮರ್ಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚಿಸಿಸಲಾಗಿದೆ. ಸಮಿತಿ ಗೌರವಾಧ್ಯಕ್ಷರಾಗಿ ಸಚಿವ ಕೆ. ಅಭಯಚಂದ್ರ ಜೈನ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಅವರು ವಿವರಿಸಿದರು.

ಮಹಾಮಸ್ತಾಭಿಷೇಕ ಮಹೋತ್ಸವವು ಅಚ್ಚುಕಟ್ಟು ಮತ್ತು ಮಾದರಿಯಾಗಿ ಮೂಡಿ ಬರಬೇಕು. ಇದಕ್ಕೆ ಸಮಸ್ತ ಭಕ್ತರ ಸಹಕಾರ ಅಗತ್ಯ ಎಂದು ಅವರು ಹೇಳಿದರು. ಇದೇ ವೇಳೆ ಮಾಹಿತಿ ಪತ್ರ ವಿತರಣೆ ಮತ್ತು ಸಮತಿ ಸದಸ್ಯರ ಜವಾಬ್ದಾರಿ ಬಗ್ಗೆ ಚಚರ್ೆ ನಡೆಸಲಾಯಿತು.
ಪ್ರಮುಖರಾದ ಎಂ.ಕೆ. ವಿಜಯ ಕುಮಾರ್, ಪುಷ್ಪರಾಜ್ ಜೈನ್ ಮಂಗಳೂರು, ಮಹಾವೀರ ಹೆಗ್ಡೆ ಅಂಡಾರು, ಸಂಪತ್ ಸಾಮ್ರಾಜ್ಯ ಶಿತರ್ಾಡಿ, ಎಲ್.ಡಿ. ಬಲ್ಲಾಳ್ ಮಂಗಳೂರು, ರತ್ನಾಕರ ಜೈನ್ ಮಂಗಳೂರು, ಪಿ.ಜಿನರಾಜ ಅರಿಗ ಪಚ್ಚಾಜೆ, ಬಿ.ಪದ್ಮಶೇಖರ ಜೈನ್ ಬಲ್ಲೋಡಿ, ಸುನಿಲ್ ಕುಮಾರ್ ಜೈನ್ ಕಾರ್ಕಳ, ಹೇಮಚಂದ್ರ ಜೈನ್ ಬಂಟ್ವಾಳ, ಅನಂತರಾಜ ಪೂವಣಿ, ಅಶೋಕ್ ಕುಮಾರ್ ಬಂಟ್ವಾಳ , ಜೈನ್ ಮಿಲನ್ ಅಧ್ಯಕ್ಷ ವೃಷಭರಾಜ್ ಮತ್ತಿತರರು ಚಚರ್ೆಯಲ್ಲಿ ಪಾಲ್ಗೊಂಡರು.
ಪಾ. ಅನಂತರಾಜ ಇಂದ್ರ ಸ್ವಾಗತಿಸಿ, ಸುದರ್ಶನ ಜೈನ್ ವಂದಿಸಿದರು. ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.
