ಬಂಟ್ವಾಳ: ಹಣ ಮತ್ತು ಅಂತಸ್ತು ಸಂಪಾದಿಸುಕ್ಕಿಂತಲೂ ವ್ಯಕ್ತಿಯ ಪ್ರೀತಿ ಗಳಿಸಿದ್ದಲ್ಲಿ ಅದೇ ನಮ್ಮ ಯಶಸ್ಸಿನ ಬುನಾದಿಯಾಗುತ್ತದೆ ಎಂದು ರೋಟರಿ ಕ್ಲಬ್ನ ಸಹಾಯಕ ಗವರ್ನರ್ ಎಂ.ಅಶ್ವನಿ ಕುಮಾರ್ ರೈ ಹೇಳಿದರು.
BTW_OCT12_2
ಎಂ.ಶಾಂತರಾಮ ಪಿ. ಭಂಡಾಕರ್ಾರ್ ಅವರು ಪಾಣೆಮಂಗಳೂರು ಕಾಪರ್ೋರೇಶನ್ ಬ್ಯಾಂಕಿನಲ್ಲಿ ಹಿರಿಯ ಪ್ರಬಂಧಕರಾಗಿ ಸೇವೆಸಲ್ಲಿಸಿ ವಗರ್ಾವಣೆಗೊಳ್ಳುತ್ತಿರುವ ಪ್ರಯುಕ್ತ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಅಭಿನಂದನಾ ಪೂರ್ವಕ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒರ್ವ ಸಾಧಕನನ್ನು ಅಭಿನಂದಿಸಿದಾಗ ಇನ್ನೋರ್ವ ವ್ಯಕ್ತಿಗೆ ಸಾಧನೆ ಮಾಡಲು ಸ್ಪೂತರ್ಿ ನೀಡಿದಂತಾಗುತ್ತದೆ ಎಂದರು. ಪಾಣೆಮಂಗಳೂರು ಶ್ರೀ ವೀರ ವಿಠಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಘುವೀರ ಭಂಡಾಕರ್ಾರ್ ಸನ್ಮಾನಿಸಿದರು. ಎಂ.ಶಾಂತರಾಮ ಭಂಡಾಕರ್ಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ ಕೆಲಸ ಎನ್ನವ ಬದಲು ಸೇವೆ ಎನ್ನುವ ರೀತಿಯಲ್ಲಿ ಕರ್ತವ್ಯ ಮಾಡಿದರೆ ಗ್ರಾಹಕರೊಂದಿಗೆ ಉತ್ತಮ ಬಾಂದವ್ಯ ಹೊಂದಲು ಸಾಧ್ಯವಾಗುತ್ತದೆ. ಗ್ರಾಹಕರ ಪ್ರೀತಿಯೇ ಇಂತಹ ಸೇವೆ ನೀಡಲು ಸಾಧ್ಯವಾಯಿತು ಎಂದರು. ದ.ಕ.ಜಿಲ್ಲಾ ವಕ್ಫ್ ಸಮಿತಿಯ ಮಾಜಿ ಅಧ್ಯಕ್ಷ ಹಾಜಿ ಎಚ್.ಎಸ್. ಉಸ್ಮಾನ್ ಅಭಿನಂದನಾ ಭಾಷಣ ಮಾಡಿದರು.
ಶ್ರೀಶಾರಾದಾ ಹೈಸ್ಕೂಲ್ ಟ್ರಸ್ಟ್ನ ಕಾರ್ಯದಶರ್ಿ ಎನ್. ಶ್ರೀನಿವಾಸ ಕುಡ್ವ, ಹಜಾಜ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಪಾಲುದಾರ ಮಹಮ್ಮದ್ ಹನೀಪ್, ಅಮ್ಟೂರು ಮೊಗನರ್ಾಡ್ ಚಚರ್್ನ ಮಾಜಿ ಅಧ್ಯಕ್ಷ ಅಂತೋನಿ ಡಿಸೋಜಾ, ಬ್ಯಾಂಕಿನ ನೂತನ ಪ್ರಬಂಧಕ ರಮೇಶ್ ನಾಯಕ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಘಟಕ ಡಾ. ಪಿ.ವಿಶ್ವನಾಥ ನಾಯಕ್ ಸ್ವಾಗತಿಸಿ, ಪ್ರಸ್ತಾವಿಸಿದರು. ವಾಮನ ನಾಯಕ್ ವಂದಿಸಿದರು. ಪಟವರ್ಧನ್ ನಿರೂಪಿಸಿದರು.
ಕಾಪರ್ೋರೇಶನನ ಬ್ಯಾಂಕಿನ ಹಿರಿಯ ಪ್ರಬಂಧಕ ಎಂ.ಶಾಂತರಾಮ ಭಂಡಾಕರ್ಾರ್ ಅವರನ್ನು ಸನ್ಮಾನಿಸಲಾಯಿತು.

By Suddi9

Leave a Reply

Your email address will not be published. Required fields are marked *