ಮುಂಬಯಿ : ಬಿಲ್ಲವರ ಎಸೋಸಿಯೇಶನ್ ಪ್ರಕಾಶಿತ `ಅಕ್ಷಯ’ ಮಾಸಪತ್ರಿಕೆಯ 33ನೇ ಹುಟ್ಟುಹಬ್ಬ ಸಂಚಿಕೆಯು ಅ.8 ರಂದು ಗುರುವಾರ ಬಿಲ್ಲವ ಭವನದಲ್ಲಿ ಗುರುಪೂಜೆಯ ಸಂದರ್ಭದಲ್ಲಿ ಗುರುಮೂರ್ತಿ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಿಲ್ಲವರ ಎಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಹರೀಶ್ ಜಿ. ಅಮೀನ್, ಶ್ರೀನಿವಾಸ ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿ, ಜೊತೆ ಕಾರ್ಯದರ್ಶಿ ಅಕ್ಷಯ ಪೂಜಾರಿ, ಯುವಾಭ್ಯುದಯ ಉಪಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಕೋಟ್ಯಾನ್, ಸಾಂಸ್ಕೃತಿಕ ಉಪಸಮಿತಿಯ ಕಾರ್ಯದರ್ಶಿ ಅಶೋಕ್ ಸಸಿಹಿತ್ಲು ಸಾಮಾಜಿಕ ಧಾರ್ಮಿಕ ಉಪಸಮಿತಿಯ ಕಾರ್ಯದರ್ಶಿ ಕೇಶವ ಪೂಜಾರಿ ಹಾಗೂ ಇತರ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
