ಕುಪ್ಪೆಪದವು: ಭಾರತೀಯ ಜನತಾ ಪಕ್ಷ ಒಂದು ಕುಟುಂಬ ನಾವೆಲ್ಲರೂ ಈ ಕುಟುಂಬದ ಸದಸ್ಯರು, ಎಲ್ಲರೂ ಅನ್ಯೋನ್ಯವಾಗಿದ್ದು ಪಕ್ಷ ಸಂಘಟನೆಗೆ ದುಡಿಯಬೇಕು ಕಾರ್ಯಕರ್ತರು ಪಕ್ಷದ ಜೀವಾಳ, ಕಾರ್ಯಕರ್ತರ ಶ್ರಮದಿಂದ ಪಕ್ಷ ಆಡಳಿತಕ್ಕೆ ಬರಲು ಸಾಧ್ಯವಾಗಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. 20201011_160741

ಅವರು ಆದಿತ್ಯವಾರ ಕುಳವೂರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುತ್ತೂರು ಮತ್ತು ಕುಳವೂರು ಗ್ರಾಮಗಳ ಬಿಜೆಪಿ ಶಕ್ತಿಕೇಂದ್ರಗಳ ‘ಕುಟುಂಬ ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು.ಉತ್ತರ ಮಂಡಲ ರೈತ ಮೋರ್ಚಾ ಉಪಾಧ್ಯಕ್ಷ ಸತೀಶ್ ಬಳ್ಳಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಜೀವ ಶೆಟ್ಟಿ ಸಲ್ಲಾಜೆ, ತಾ. ಪಂ. ಸದಸ್ಯ ನಾಗೇಶ್ ಶೆಟ್ಟಿ, ಮಂಡಲ ಪ್ರಧಾನಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಮಂಡಲ ಕಾರ್ಯದರ್ಶಿ ಗಣೇಶ್ ಪಾಕಜೆ, ಮಹಾಶಕ್ತಿ ಕೇಂದ್ರದ ಪ್ರಭಾರಿ ಅಮರೇಶ್ ಬೇಕಲ್, ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಎಂ ಕಾರ್ಯದರ್ಶಿ ಅನಿಲ್ ಪೆರಾರ, ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಭವಾನಂದ ಶೆಟ್ಟಿ, ಮುತ್ತೂರು ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ಚಂದ್ರ, ಚಂದ್ರ ಮಜಲು, ಉಪಸ್ಥಿತರಿದ್ದರು. ಕುಳವೂರು ಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಸಾಲಿಯಾನ್ ಕೊಂದರಪ್ಪು ಸ್ವಾಗತಿಸಿದರು, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ ಗುಂಡ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬೈಕ್ ಏರಿದ ಶಾಸಕರು.
ಮುತ್ತೂರು ಕುಳವೂರು ಗ್ರಾಮಗಳ ಕುಟುಂಬ ಮಿಲನ ಕಾರ್ಯಕ್ರಮದ ಪ್ರಯುಕ್ತ ಮುತ್ತೂರು ಶಕ್ತಿಕೇಂದ್ರದ ವತಿಯಿಂದ ತಾರೆಮಾರ್ ನಿಂದ ನಡೆದ ಕಾರ್ಯಕರ್ತರ ಬೈಕ್  ಜಾಥಾ ದಲ್ಲಿ  ಶಾಸಕ ಭರತ್ ಶೆಟ್ಟಿ ಅವರು ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಅವರನ್ನು ಹಿಂಬದಿ ಕೂರಿಸಿ ಬೈಕ್ ಚಲಾಯಿಸುವ ಮೂಲಕ ಜಾಥಾ ಕ್ಕೆ ಚಾಲನೆ ನೀಡಿದರು.

By suddi9

Leave a Reply

Your email address will not be published. Required fields are marked *