ಕೈಕಂಬ:ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ , ಮಂಗಳೂರು,ದ.ಕ.ಜಿಲ್ಲೆ ಹಾಗೂ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ನಿ)ರಾಷ್ಟ್ರೀಯ ಕಾಲು ಬಾಯಿ ರೋಗನಿಯಂತ್ರಣ ಕಾರ್ಯಕ್ರಮವು 17ನೇ ಸುತ್ತಿನ ಸುತ್ತಿನ ಲಸಿಕೆ ಹಾಕುವ ಕಾರ್ಯಕ್ರಮ ಉದ್ಘಾಟನೆಗೊಡಿತು. IMG_20201013_093551

ಅ.2 ರಿಂದ ಅ.15ರವರೆಗೆ ಎಲ್ಲಾ ಗ್ರಾಮಗಳಲ್ಲಿ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿದೆ. ಪುಂಚಮೆ ಸಹಕಾರ ಸಂಘದ ಸದಸ್ಯರ ಜಾನುವಾರುಗಳಿಗೆ ಅ.13 ರಂದು ಮಂಗಳವಾರ ಮಣಿಕಂಠಪುರ ಶುಭಾವತಿ ಎಂಬವರ ಮನೆಯ ಹಸುಗಳಿಗೆ ಲಸಿಕೆ ಹಾಕಲಾಯಿತು.  ಬೆಂಜನಪದವನ ಪಶುವೈದ್ಯ ಹಿರಿಯ ಪರೀಕ್ಷಕರಾದ ಶೀನಪ್ಪ ಮೇರಮಜಲ್, ಪಶುವೈದ್ಯ ಪರೀಕ್ಷಕ ಸುರೇಶ್ ಬೆಂಜನಪದವು,ಬಾಲಕೃಷ್ಣ, ಜೀವನ್ , ಪುಂಚಮೆ ಹಾಲು ಉತ್ಮಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ರಕ್ಷಿತಾ ಇದ್ದರು. ರೈತರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಕಾಲು ಬಾಯಿ ರೋಗದಿಂದ ರಾಜ್ಯವನ್ನು ಮಕ್ತ ಮಾಡುವಲ್ಲಿ ಸಹಕರಿಸಲು ಪುಂಚಮೆ ಸಹಕಾರಿ ಸಂಘದ ಅಧ್ಯಕ್ಷರು ಹೈನುಗಾರರಲ್ಲಿ ವಿನಂತಿಸಿದ್ದಾರೆ..

By suddi9

Leave a Reply

Your email address will not be published. Required fields are marked *