ಕೈಕಂಬ:ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು.ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಅಭಿವೃದ್ಧಿ ಯೋಜನೆಗಳಿಂದಲೇ ಉತ್ತರ ನೀಡುತ್ತಿದ್ದೇನೆ ಎಂದು ಶಾಸಕರಾದ ಡಾ. ವೈ ಭರತ್ ಶೆಟ್ಟಿ ಹೇಳಿದರು.

ನಾನು ಶಾಸಕನಾದ ಮೇಲೆ ಮಳೆ ಹಾನಿ ಕಾಮಗಾರಿ ಯೋಜನೆಯಲ್ಲಿ ಇಲ್ಲಿ ಅಭಿವೃದ್ಧಿಗೆ 20 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದೆ.
ಆದರೆ ಅದನ್ನು ಮಾಜಿ ಶಾಸಕ ಮೊಯ್ದೀನ್ ಭಾವ ತಮ್ಮ ಅವಧಿಯಲ್ಲಿ ಇಟ್ಟ ಹಣ, ಅದನ್ನು ಬೇರೆ ಯೋಜನೆಗಳಿಗೆ ಬಳಸಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುತ್ತಾ ಬಂದಿದ್ದಾರೆ. ಅದಕ್ಕೆ ಈಗ ಸೂಕ್ತ ಉತ್ತರ ಕೊಟ್ಟಿದ್ದೇನೆ. ಈ ರಸ್ತೆ ಅಭಿವೃದ್ಧಿಗೆ 20 ಲಕ್ಷ ಸಾಕಾಗುವುದಿಲ್ಲ ಎಂದು ಅರಿವಿಗೆ ಬಂದ ಬಳಿಕ ಈಗ 3 ಕೋಟಿ ಅನುದಾನ ಮೀಸಲಿಟ್ಟು ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹೇಳಿದರು.
ಅವರು ಶನಿವಾರ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3 ಕೋಟಿ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಪ್ರಧಾನಿ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಾಗಬ್ರಹ್ಮ ದೇವಸ್ಥಾನದ ಬಳಿಯ ರಸ್ತೆ ಹಾಗೂ ಕೊಳಂಬೆ ಶಾಲೆಯ ಬಳಿಯ ಎರಡು ಸೇತುವೆಗಳ ಅಭಿವೃದ್ಧಿ ಈ ಅನುದಾನದಲ್ಲಿ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ವಿಶ್ವನಾಥ ಶೆಟ್ಟಿ,ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಉಪಾಧ್ಯಕ್ಷರಾದ ಅಮೃತಲಾಲ್ ಡಿಸೋಜ,ಮಂಡಲ ಕಾರ್ಯದರ್ಶಿ ಶೋಧನ್ ,ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗುರುಪುರ,ಹಿಂದುಳಿದ ಮೋರ್ಚಾ ಮಂಡಲ ಉಪಾಧ್ಯಕ್ಷರಾದ ಸುಧಾಕರ್ ಕೊಳಂಬೆ, ಶಕ್ತಿ ಕೇಂದ್ರ ಪ್ರಮುಖ ಸುಕೇಶ್ ಮಾಣೈ, ಪ್ರವೀಣ್ ಶೆಟ್ಟಿ,ಜಿಲ್ಲಾ ಎಸ್ಸಿ ಮೋರ್ಚಾದ ಉಪಾಧ್ಯಕ್ಷರಾದ ಲೋಕೆಶ್ ಕಜೆ, ಮಹೇಶ್ ಶೆಟ್ಟಿ, ಶಿವಪ್ಪ ಬಂಗೇರ,ಆರ್ .ಕೆ ಕೊಳಂಬೆ, ರಾಘವೇಂದ್ರ ಭಟ್ ,ಪಲ್ಲವಿ ಶೆಟ್ಟಿ ಇಂಜಿನಿಯರ್, ಅಶೋಕ್ ಬಳ್ಳಿ ಗುತ್ತಿಗೆದಾರರು, ಮುರಳಿ ಶೆಟ್ಟಿ,ಕಂದಾವರ ಪಂ.ಮಾಜಿ ಸದಸ್ಯರುಗಳಾದ ಉಮೇಶ್, ಶಾಲಿನಿ, ಸುನಂದ, ರಿಕ್ಷಾ ಚಾಲಕರು ಮತ್ತು ಮಾಲಕರು ಸುಂಕದಕಟ್ಟೆ,ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.
