ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸಂತೋಷ್ ತುಪ್ಪೆಕಲ್ಲು ಇವರು ಆಯ್ಕೆಯಾಗಿದ್ದಾರೆ.ಇವರು ರಾಷ್ಟ್ರಿಯ ಸ್ವಯಂಸೇವಕ ಸಂಘಟನೆಯಲ್ಲಿ ಕೆಲಸ ಮಾಡಿ ಹಿಂದೂ ಸಂಘಟನೆಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ ಸಂತೋಷ್ ತುಪ್ಪೆಕಲ್ಲು.

803fee9a-d179-4235-9b24-7fdb99ed4247
ಬಿಜೆಪಿ 245 ವಾರ್ಡ್ ಅಧ್ಯಕ್ಷರಾಗಿ, ಮಂಗಳೂರು ಬಿಜೆಪಿ ಉತ್ತರ ಮಂಡಲ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಬಿಜೆಪಿ ಸ್ಲಮ್ ಮೋರ್ಚಾ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿಯಾಗಿ ಅಡ್ಯಾರ್ ಪಂಚಾಯತಿಯ ಅರ್ಕುಳದ ವಾರ್ಡ್ನಲ್ಲಿ ಎರಡನೇ ಅವದಿಯಲ್ಲಿಯು ಸ್ಪರ್ಧಿಸಿ ಗೆಲುವು ಸಾದಿಸಿಕೊಂಡು (10) ವರ್ಷಗಳಲ್ಲಿ ಪಂಚಾಯತ್ ಸದಸ್ಯರಾಗಿ ಸಮರ್ಥ ಅಭ್ಯರ್ಥಿ ಎಂದು ಜನರ ಮೆಚ್ಚುಗಗೆ ರಾಗಿದ್ದ ಅವರನ್ನು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಮಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ ಹಾಗೂ ಪ್ರ.ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ ಅವರುಗಳ ಸೂಚನೆಯಂತೆ ಆಯ್ಕೆಮಾಡಲಾಗಿದೆ.

By suddi9

Leave a Reply

Your email address will not be published. Required fields are marked *