ಕುಪ್ಪೆಪದವು: ಕಳೆದ ವರ್ಷ ಮಳೆಗೆ ಹಾನಿಯಾಗಿದ್ದ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೋಣಯ್ಯರಿಗೆ ಶಾಸಕರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ ಪರಿಹಾರಧನದ ಚೆಕ್ ಅನ್ನು ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿಯವರು ಮಂಗಳವಾರ ಪಂಚಾಯತ್ ಕಚೇರಿಯಲ್ಲಿ ವಿತರಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ನಾಯ್ಕ್, ಗ್ರಾಮಕರಣಿಕ ದೇವರಾಜ್, ಮಾಜಿ ಪಂಚಾಯತ್ ಸದಸ್ಯರಾದ ತಾರಾನಾಥ ಕುಲಾಲ್, ಮತ್ತು ಪಂಚಾಯತ್ ಸಿಬ್ಬಂದಿ ಹಾಜರಿದ್ದರು.

