ಕೈಕಂಬ: ಭಾರತೀಯ ಜನತಾ ಪಕ್ಷದ ಕಿಲೆಂಜಾರು ಶಕ್ತಿ ಕೇಂದ್ರದ ಮಹಿಳಾ ಮೋರ್ಚಾ ದ ಉದ್ಘಾಟನೆ ಮತ್ತು ಕಿಲೆಂಜಾರು, ಕುಳವೂರು ಮತ್ತು ಮುತ್ತೂರು ಗ್ರಾಮಗಳಿಂದ ಉತ್ತರ ಮಂಡಲ ಬಿಜೆಪಿ ಯ ವಿವಿಧ ಮೋರ್ಚಾ ಗಳಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಇಲ್ಲಿನ ರಾಮಕೃಷ್ಣ ಭಜನಾ ಮಂದಿರದ ಸಭಾಭವನದಲ್ಲಿ ಆದಿತ್ಯವಾರ ನಡೆಯಿತು. ಕಿಲೆಂಜಾರು ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
ವಾರಿಜ ಕಲ್ಲಾಡಿ ಇವರ ನೇತೃತ್ವದಲ್ಲಿ ಕಿಲೆಂಜಾರು ಬಿಜೆಪಿ ಮಹಿಳಾ ಮೋರ್ಚಾ ವನ್ನು ಉದ್ಘಾಟಿಸಲಾಯಿತು, ಉಪಾಧ್ಯಕ್ಷೆಯಾಗಿ ವಿಜಯಾ ಕಲ್ಲಾಡಿ, ಕಾರ್ಯದರ್ಶಿಯಾಗಿ ಮಂಜುಳಾ ಶಿವಕುಮಾರ್, ಜತೆಕಾರ್ಯದರ್ಶಿಯಾಗಿ ಭವಾನಿ ಕಾಪಿಕಾಡು ಅವರನ್ನು ಆಯ್ಕೆ ಮಾಡಲಾಯಿತು.ಉತ್ತರ ಮಂಡಲ ಕಾರ್ಯದರ್ಶಿ ಗಣೇಶ್ ಪಾಕಜೆ, ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಅರುಣಾ ಭಾಸ್ಕರ್ ಶೆಟ್ಟಿ, ರೈತ ಮೋರ್ಚಾ ಉಪಾಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ,ಸದಸ್ಯ ಯೋಗೀಶ್ ಮುತ್ತೂರು, ಜಿಲ್ಲಾ ಎಸ್ ಸಿ ಮೋರ್ಚಾ ಸದಸ್ಯ ಹೊನ್ನಯ್ಯ ಅಟ್ಟೆಪದವು ಉತ್ತರ ಮಂಡಲ ಎಸ್ ಸಿ ಮೋರ್ಚಾ ಸದಸ್ಯರಾದ ರಮೇಶ್ ಅಟ್ಟೆಪದವು, ಸತೀಶ್ ಎನ್.ಬಳ್ಳಾಜೆ, ಉತ್ತರ ಮಂಡಲ ಎಸ್ ಟಿ ಮೋರ್ಚಾ ಕಾರ್ಯದರ್ಶಿ ರಾಜೇಶ್ ನಾಯ್ಕ್ ಅಂಗಡಿ ಬಳಿ, ಇವರುಗಳನ್ನು ಶಾಲು ಹೊದೆಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಗಣೇಶ್ ಪಾಕಜೆ, ಸತೀಶ್ ಪೂಜಾರಿ ಬಳ್ಳಾಜೆ ಮತ್ತು ಮುಖಂಡ ರಾಜೇಶ್ ಶೆಟ್ಟಿ ಉಳಿಪಾಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಖಂಡರಾದ ತಿಮ್ಮಪ್ಪ ಶೆಟ್ಟಿ ಅಗರಿ, ಸಂಜೀವ ಶ್ರೀನಿಕೇತನ, ಶಕ್ತಿ ಕೇಂದ್ರದ ಪ್ರಧಾನಕಾರ್ಯದರ್ಶಿ ಚೇತನ್ ಸುವರ್ಣ ಅಂಬೆಲೊಟ್ಟು, ಭಜನಾ ಮಂದಿರದ ಅಧ್ಯಕ್ಷ ಹರೀಶ್ಚಂದ್ರ ಗೌಡ ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು, ಶಕ್ತಿ ಕೇಂದ್ರದ ಜತೆ ಕಾರ್ಯದರ್ಶಿ ಅಶೋಕ್ ಕಟ್ಟೆಮಾರ್ ಸ್ವಾಗತಿಸಿ ನಿರೂಪಿಸಿದರು. 

ಬಿಜೆಪಿ ಗೆ ಸೇರ್ಪಡೆ:
ಕುಪ್ಪೆಪದವಿನ ಕಾಂಗ್ರೇಸ್ ಮುಖಂಡ ಅಬ್ದುಲ್ ಘನಿ ಈ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ ಮತ್ತು ಮುಖಂಡರು ಅಬ್ದುಲ್ ಘನಿ ಅವರಿಗೆ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
