ಕುಪ್ಪೆಪದವು: ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಮೂಡಬಿದಿರೆಯ ಇರುವೈಲು ಗ್ರಾಮ ಪಂಚಾಯತ್ ನ ಸಿಬ್ಬಂದಿ ಕು.ಉಷಾ ಅವರ ಕುಟುಂಬಕ್ಕೆ ಮಂಗಳೂರು ತಾಲೂಕು ಪಂಚಾಯತ್ ರಾಜ್ ಅಧಿಕಾರಿಗಳು ಮತ್ತು ನೌಕರರ ಸಂಘದ ವತಿಯಿಂದ ಆರ್ಥಿಕ ನೆರವನ್ನು ನೀಡಲಾಯಿತು.ಕುಟುಂಬದ ಬೆನ್ನೆಲುಬಾಗಿದ್ದ ಉಷಾ ಅವರ ಕುಟುಂಬಕ್ಕೆ ಸಹಾಯಕ್ಕಾಗಿ ಸಂಘವು ಒಟ್ಟುಗೂಡಿಸಿದ ಐವತ್ತು ಸಾವಿರ ಮೊತ್ತವನ್ನು ಕು.ಉಷಾರವರ ತಾಯಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಜಪೆ ಪಂಚಾಯತ್ ಪಿಡಿಒ ಸಾಯೀಶ್ ಚೌಟ, ಕಂದಾವರ ಪಂಚಾಯತ್ ಪಿಡಿಒ ಯಶವಂತ ಬೆಳ್ಚಡ,ಜೋಕಟ್ಟೆ ಪಿಡಿಒ ಅಬ್ದುಲ್ ಅಸಫ್, ಇರುವೈಲ್ ಪಂಚಾಯತ್ ಪಿಡಿಒ ಕಾಂತಪ್ಪ, ಪಂಚಾಯತ್ ನಿಕಟಪೂರ್ವ ಸದಸ್ಯರಾದ ಪ್ರವೀಣ್ ಶೆಟ್ಟಿ, ತೆಂಕಮಿಜಾರು ಪಂಚಾಯತ್ ಸಿಬ್ಬಂದಿಗಳಾದ ರಾಕೇಶ್ ಕುಮಾರ್, ಸತೀಶ್ ಚಟ್ಟೆಪಾದೆ,ಇರುವೈಲ್ ಪಂಚಾಯತ್ ಸಿಬ್ಬಂದಿಗಳಾದ ಶುಭಾ,ಪ್ರದೀಪ್ ಕುಮಾರ್,ಶ್ರತೀಪ್ ಪೂಜಾರಿ ಉಪಸ್ಥಿತರಿದ್ದರು.
