ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ಶ್ರೀ ಸುನೀಲ್ ಫೆರ್ನಾಂಡಿಸ್ ಮತ್ತು ಮೊಹಮ್ಮದ್ ಜಹೂರ್ ಇವರ ನೇತೃತ್ವದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ನೋಂದಾವಣೆ, ಆಧಾರ್ ಕಾರ್ಡ್ ಪರಿಷ್ಕರಣೆ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಕಾರ್ಡ್ ನೋಂದಾವಣೆ ಶಿಬಿರ ಆದಿತ್ಯವಾರ ಗಂಜಿಮಠದ ಉರ್ದು ಶಾಲೆಯಲ್ಲಿ ನಡೆಯಿತು.

ಗಾಂಧಿನಗರ ಅಯಾತತುಲ್ ಮುಸ್ಲಿಂಮಿನ್ ಮಸೀದಿ ಅಧ್ಯಕ್ಷರಾದ ಸಲೀಂ ಗಾಂಧಿನಗರ, ರೋಕಿ ಡಿಸ್ವಲ್ವ, ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿಗಾರ್, ಉದ್ಯಮಿ ಬಾಲಕೃಷ್ಣ ಸಾಲಿಯಾನ್, ಮೀರ್ ರಹಮತ್ತುಲ್ಲ, ಉದ್ಯಮಿ ಜೆರಾಲ್ಡ್ ಕ್ರಾಸ್ತಾ, ಪಂಚಾಯತ್ ಮಾಜಿ ಉಪಾಧ್ಯಕ್ಷ ಆರ್ ಎಸ್ ಜಾಕೀರ್, ಪಂಚಾಯತ್ ಮಾಜಿ ಸದಸ್ಯೆ ನೂರ್ ಜಹಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಡಿಯುವ ನೀರು ಪೂರೈಕೆ ಮಾಡುವ ಹನೀಫ್ ಗಾಂಧಿನಗರ, ಯೂನುಸ್ ಗಾಂಧಿನಗರ, ಮುತ್ತಪ್ಪ, ಮಯ್ಯದ್ದಿ ನಾರ್ಲಪದವು ಮತ್ತು ಬೀದಿ ದೀಪ ಅಳವಡಿಸುವ ಬಾಬು ಕುಕ್ಕಟ್ಟೆ ಹಾಗೂ ಕಂಟ್ರಾಕ್ಟರ್ ರಜಾಕ್ ಮೂಲರಪಟ್ಟಣ ಮತ್ತು ದ.ಕ. ಜಿಲ್ಲೆಯಲ್ಲಿ ಅತ್ಯುತ್ತಮ ಸೇವಾ ಕೇಂದ್ರ ಎಂದು ಸರಕಾರದಿಂದ ಗುರುತಿಸಲ್ಪಟ್ಟ ಅನುರಾಧ ಆನ್ ಲೈನ್ ಸೊಲ್ಯೂಷನ್ಸ್ ಗಂಜಿಮಠ ಇದರ ಗ್ರಾಮೀಣ ಮಟ್ಟದ ಮಹಿಳಾ ಉದ್ಯಮಿ ಶ್ರೀಮತಿ ಚಂದ್ರಾವತಿ ಇವರುಗಳನ್ನು ಈ ಸಂದರ್ಭದಲ್ಲಿ ಶಾಲು ಹೊದೆಸಿ ಫಲಪುಷ್ಟ ನೀಡಿ ಸನ್ಮಾನಿಸಲಾಯಿತು.
429 ಆಯುಷ್ಮಾನ್ ಕಾರ್ಡ್, 19 ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಕಾರ್ಡ್, 27 ಕಟ್ಟಡ ಕಾರ್ಮಿಕರ ಕಾರ್ಡ್, 22 ಹಿರಿಯ ನಾಗರಿಕರ ಕಾರ್ಡ್ ವಿತರಣೆ ಮಾಡಲಾಯಿತು.

