ಗುರುಪುರ : ವನ್ಯಜೀವಿ ಸ್ತಾಪ-2020ರ ಅಂಗವಾಗಿ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಎಲ್ಲ ವಯೋಮಾನದ ವಿದ್ಯಾರ್ಥಿಗಳಿಗಾಗಿ `ಪ್ರಕೃತಿ ಮತ್ತು ವನ್ಯಜೀವಿ’ ವಿಷಯದಲ್ಲಿ ವಿವಿಧ ಸ್ಪರ್ಧೆ ಹಾಗೂ ಛಾಯಾಚಿತ್ರಕಾರರಿಗೆ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ.
ಕೋವಿಡ್ ಮಹಾಮಾರಿಯಿಂದಾಗಿ ಈ ವರ್ಷ ಆನ್‍ಲೈನ್ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಗವಹಿಸುವವರು ಮೈಲ್ ಮೂಲಕ ಸ್ಪರ್ಧಿಸಲು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್ ಜೆ ಭಂಡಾರಿ ಪ್ರಕರಣ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಡಬ್ಲ್ಯೂಡಬ್ಲ್ಯೂಡಬ್ಲ್ಯೂಡಾಟ್‍ಪಿಲಿಕುಳಝೂಡಾಟ್‍ಕಾಂ, ದೂರವಾಣಿ 0824-2263300/919036801602, ಇ-ಮೇಲ್ : ಪಿಲಿಕುಳಝೂ-ಸಿಝಡ್‍ಎ@ಎನ್‍ಐಸಿಡಾಟ್‍ಇನ್ ಸಂಪರ್ಕಿಸಬಹುದು.
