ಕುಪ್ಪೆಪದವು: ಮುತ್ತೂರು ಗ್ರಾಮಪಂಚಾಯತ್ ನ ಕುಳವೂರು ಗ್ರಾಮದ ಅಗರಿ ಮತ್ತು ಬಳ್ಳಾಜೆ ರಸ್ತೆಗಳ ತಲಾ ಹದಿನಾಲ್ಕು ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಶಾಸಕರು ಗೆಂದಡ್ಪು ಸಮುದಾಯ ಭವನದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು, ಗ್ರಾಮಪಂಚಾಯತ್ ಮಾಜಿ ಸದಸ್ಯರುಗಳಾದ ಪ್ರವೀಣ್ ಆಳ್ವ ಗುಂಡ್ಯ, ಪುಷ್ಪಾ ನಾಯ್ಕ್, ವಸಂತಿ ಕೊಂದರಪ್ಪು, ಉತ್ತರ ಮಂಡಲ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಸತೀಶ್ ಬಳ್ಳಾಜೆ, ಪ್ರ. ಕಾರ್ಯದರ್ಶಿ ಆನಂದ ದೇವಾಡಿಗ, ಉತ್ತರ ಮಂಡಲ ಬಿಜೆಪಿ ಕಾರ್ಯದರ್ಶಿ ಗಣೇಶ್ ಪಾಕಜೆ, ಮಹಿಳಾ ಮೋರ್ಚಾದ ಪ್ರ. ಕಾರ್ಯದರ್ಶಿ ಅರುಣಾ ಶೆಟ್ಟಿ ಬಾರ್ದಿಲ, ಎಸ್ ಸಿ ಮೋರ್ಚಾದ ಜಿಲ್ಲಾ ಸದಸ್ಯ ಹೊನ್ನಯ್ಯ ಅಟ್ಟೆಪದವು, ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಎಂ., ಕುಳವೂರು ಬೂತ್ ಬಿಜೆಪಿ ಅಧ್ಯಕ್ಷ ಶೇಖರ್ ನೆಲಚ್ಚಿಲ್, ಕಾರ್ಯದರ್ಶಿ ಅಶೋಕ್ ಸಫಲಿಗ,ಜತೆ ಕಾರ್ಯದರ್ಶಿ ರಮೇಶ್, ಮುಖಂಡರುಗಳಾದ ವಿಜಯಕುಮಾರ್ ಶೆಟ್ಟಿ, ಮಹಾಬಲ ಸಾಲ್ಯಾನ್, ಸಂತೋಷ್ ಆಳ್ವ, ನವೀನ್ ಬಳ್ಳಾಜೆ, ಚಂದ್ರಹಾಸ್ ಅಗರಿ ಪ್ರಸಾದ್ ಜೈನ್ ಅಗರಿ, ಕಾಮಗಾರಿ ಗುತ್ತಿಗೆದಾರರು, ಮತ್ತು ಕಾರ್ಯಕರ್ತರು, ಸ್ಥಳೀಯರು ಹಾಜರಿದ್ದರು.
