ಕೈಕಂಬ : ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಗುರುಪುರದಲ್ಲಿ ಉಕ್ಕೇರಿ ಹರಿಯುತ್ತಿರುವ ಫಲ್ಗುಣಿ ನದಿ ಪ್ರವಾಹದಿಂದ ತಗ್ಗು ಪ್ರದೇಶದಲ್ಲಿ ಆತಂಕದ ಸ್ಥಿತಿ ಉಂಟಾಗಿದ್ದರೆ, ಮನೆಗಳಿಗೆ ಭಾರೀ ಅಪಾಯ ಸಂಭವಿಸಿದೆ.

ಮೂಡುಶೆಡ್ಡೆ : ಪ್ರವಾಹಕ್ಕೆಭತ್ತದ ಬೆಳೆ ಮುಳುಗಡೆ

gur-sep-20-battha mulugade-2

ಮೂಡುಶೆಡ್ಡೆ ಭಾಗದಲ್ಲಿ ಫಲ್ಗುಣಿ ನದಿ ಉಕ್ಕೇರಿ ಹರಿಯುತ್ತಿದ್ದು, ಭಾರೀ ಪ್ರಮಾಣದ ಭತ್ತದ ಬೆಳೆ ಮುಳುಗಡೆಯಾಗಿದೆ. ಕೃಷಿಕ ರಮಾನಾಥ ಅತ್ತರ್(ಚಿತ್ತಣ್ಣ) ಐದು ಎಕ್ರೆ ಗದ್ದೆಯಲ್ಲಿ ಬೆಳೆದ `ಎಣೆಲ್’ ಭತ್ತದ ಕೃಷಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿ, ಬೆಳೆ ನಷ್ಟವಾಗಿದೆ.

“ತೆನೆಯಾಗಿರುವ ಭತ್ತದ ಬೆಳೆ ಮುಳುಗಡೆಯಾಗಿರುವುದರಿಂದ ಇನ್ನಿದು ಕೊಳೆತು ಹೋಗುತ್ತದೆ. ಇದರಿಂದ ಇದುವರೆಗಿನ ಕರ್ಚುವೆಚ್ಚ(ಕೂಲಿ, ಬೇಲಿ, ಬೀಜ, ಗೊಬ್ಬರ) ಅಂದಾಜಿಸಿದರೆ ಸುಮಾರು ಒಂದು ಲಕ್ಷ ರೂವರೆಗೆ ನಷ್ಟವಾಗಲಿದೆ” ಎಂದು ಚಿತ್ತಣ್ಣ ಹೇಳಿದರು.gur-sep-20-pulguni flood-1

ಗುರುಪುರ ಕುಕ್ಕುದಕಟ್ಟೆಯಲ್ಲಿ ಭತ್ತದ ನೇಜಿ ಪ್ರವಾಹದಲ್ಲಿ ಹರಿದು ಹೋಗಿದ್ದು, ಕೆಲವರು ಈಜಿ ಒಂದಷ್ಟು ನೇಜಿ ಹಿಡಿದಿದ್ದಾರೆ. ಇಲ್ಲಿನ ತಗ್ಗುಪ್ರದೇಶದಲ್ಲೂ ಪ್ರವಾಹ ಭೀತಿ ಉಂಟಾಗಿದೆ.

By suddi9

Leave a Reply

Your email address will not be published. Required fields are marked *