ಕೈಕಂಬ: ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತ್ರಶಕ್ತಿ ದುರ್ಗಾವಾಹಿನಿ ಓಂಕಾರ ಶಾಖೆ ಕಂದಾವರ ಪದವು ಘಟಕದ ವತಿಯಿಂದ ಕೊರೋನಾ ವಾರಿಯರ್ಸ್ಗಳಾದ “ಹಿರಿಯ ಆರೋಗ್ಯ ಸಹಾಯಕಿ ಸುನಿತಾ ಹಾಗು ಆಶಾ ಕಾರ್ಯಕರ್ತೆಯರಾದ ಶೋಭಾ,ಶಶಿಕಲಾ,ಸಂಧ್ಯಾ,ಯಶ್ವಿತಾ,ಉಷಾ ಮೋಹನ್,ಉಷಾ ನಾಗೇಶ್ ಇವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಹಿರಿಯ ಆರೋಗ್ಯ ಸಹಾಯಕಿ ಹಾಗು ಆಶಾ ಕಾರ್ಯಕರ್ತೆಯರ ಸನ್ಮಾನ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಗುರುಪುರ ಪ್ರಖಂಡದ ಅದ್ಯಕ್ಷರಾದ ವಿಷ್ಣುಕಾಮತ್ ಗುರುಪುರ,ಸಹಕಾರ್ಯದರ್ಶಿಯವರಾದ ಸುಜಾತ ಕಂದಾವರ,ಸತ್ಸಂಗ ಪ್ರಮುಖರಾದ ದಿನೇಶ್ ಮಿಜಾರ್,ಬಜರಂಗದಳ ಗುರುಪುರ ಪ್ರಖಂಡದ ಸಂಚಾಲಕರಾದ ರವಿಸುವರ್ಣ ಕಜೆ ಪದವು,ಸಹಸಂಚಾಲಕರಾದ ರಾಜೇಶ್ ಗಂಜಿಮಠ ಉಪಸ್ಥಿತರಿದ್ದರು.

